ಕಾಂಗ್ರೆಸ್ ಪಕ್ಷದ 141ನೇ ಸಂಸ್ಥಾಪನಾ ದಿನಾಚರಣೆ ಆಚರಣೆ
ಗದಗ, 30 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲೆಯ ಅಬ್ಬಿಗೇರಿ ಗ್ರಾಮದಲ್ಲಿರುವ, ಗಾಂಧಿ ವೃತ್ತದಲ್ಲಿ ಅಬ್ಬಿಗೇರಿ ಕಾಂಗ್ರೆಸ್ ಕಮಿಟಿ ಆಶ್ರಯದಲ್ಲಿ ಕಾಂಗ್ರೆಸ್ ಪಕ್ಷದ 141ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಭವ್ಯವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ರಾಜ್ಯ ಪ್ರಧ
ಫೋಟೋ


ಗದಗ, 30 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲೆಯ ಅಬ್ಬಿಗೇರಿ ಗ್ರಾಮದಲ್ಲಿರುವ, ಗಾಂಧಿ ವೃತ್ತದಲ್ಲಿ ಅಬ್ಬಿಗೇರಿ ಕಾಂಗ್ರೆಸ್ ಕಮಿಟಿ ಆಶ್ರಯದಲ್ಲಿ ಕಾಂಗ್ರೆಸ್ ಪಕ್ಷದ 141ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಭವ್ಯವಾಗಿ ಆಚರಿಸಲಾಯಿತು.

ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಅಕ್ಷಯ ಪಾಟೀಲ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ದೇಶದ ಅತಿ ದೊಡ್ಡ ಹಾಗೂ ಪುರಾತನ ರಾಜಕೀಯ ಪಕ್ಷವಾಗಿದ್ದು, ರಾಷ್ಟ್ರವಾದ ಮತ್ತು ಸ್ವಾತಂತ್ರ್ಯದ ತತ್ವಗಳ ಮೇಲೆ ಸ್ಥಾಪಿತವಾಗಿದೆ. ಏಷ್ಯಾ ಹಾಗೂ ಆಫ್ರಿಕಾ ಖಂಡಗಳಲ್ಲಿ ಬ್ರಿಟಿಷ್ ಸಾಮ್ರಾಜ್ಯದ ಕಾಲದಲ್ಲಿ ಹೊರಹೊಮ್ಮಿದ ಮೊದಲ ಆಧುನಿಕ ಪಕ್ಷ ಕಾಂಗ್ರೆಸ್ ಆಗಿದೆ. ಸಮಬಾಳು, ಸಹಜೀವನ ಹಾಗೂ ಸ್ವಾತಂತ್ರ್ಯದ ಮೌಲ್ಯಗಳನ್ನು ಸಾರುವ ಪ್ರಮುಖ ಸಂಘಟನೆಯೇ ಕಾಂಗ್ರೆಸ್ ಎಂದು ಅಕ್ಷಯ ಪಾಟೀಲ ಹೇಳಿದರು.

ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಕಾಂಗ್ರೆಸ್ ಪಕ್ಷ ಮಹತ್ವದ ಪಾತ್ರ ವಹಿಸಿದೆ. ದೇಶವನ್ನು ಸ್ವಾತಂತ್ರ್ಯಗೊಳಿಸುವಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಅಪಾರವಾಗಿದೆ. ಬ್ರಿಟಿಷ್ ಸಾಮ್ರಾಜ್ಯದ ಅಧೀನದಲ್ಲಿದ್ದ ಇತರ ವಸಾಹತುಶಾಹಿ ರಾಷ್ಟ್ರಗಳ ರಾಷ್ಟ್ರೀಯತಾವಾದಿ ಚಳುವಳಿಗಳ ಮೇಲೂ ಕಾಂಗ್ರೆಸ್ ಪ್ರಭಾವ ಬೀರಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ರೋಣ ತಾಲೂಕು ವಾಲ್ಮೀಕಿ ಸಮಾಜದ ಅಧ್ಯಕ್ಷ ಬಸವರಾಜ ತಳವಾರ ಮಾತನಾಡಿ, ಬ್ರಿಟಿಷ್ ಆಳ್ವಿಕೆಯ ನಂತರ ಭಾರತೀಯರಿಗೆ ಆಡಳಿತದಲ್ಲಿ ಹೆಚ್ಚಿನ ಭಾಗವಹಿಸುವಿಕೆ ಕಲ್ಪಿಸುವ ಉದ್ದೇಶದಿಂದ ರಾಷ್ಟ್ರೀಯತಾವಾದಿ ಚಳುವಳಿಗಾಗಿ ರಚಿಸಲಾದ ಪ್ರಮುಖ ಸಂಘಟನೆಯೇ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್. ದೇಶವನ್ನು ಸ್ವತಂತ್ರಗೊಳಿಸುವುದು, ಹೊಸ ಸಂವಿಧಾನ ರಚನೆ, ರಾಮರಾಜ್ಯ ಹಾಗೂ ಸರ್ವೋದಯ ಪರಿಕಲ್ಪನೆಗಳ ಮೂಲಕ ಸಮಾಜ ನಿರ್ಮಾಣ ಎಂಬ ಉದ್ದೇಶಗಳನ್ನು ಹೊಂದಿದ್ದ ಕಾಂಗ್ರೆಸ್ ಕ್ರಮೇಣ ರಾಜಕೀಯ ಪಕ್ಷವಾಗಿ ಬೆಳೆದಿದೆ. ಏಷ್ಯಾ ಮತ್ತು ಆಫ್ರಿಕಾ ಖಂಡಗಳ ಸುಮಾರು 60 ರಾಷ್ಟ್ರಗಳ ಸ್ವಾತಂತ್ರ್ಯ ಹೋರಾಟಗಳಿಗೆ ಕಾಂಗ್ರೆಸ್ ಪ್ರೇರಣೆಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಪಕ್ಷಕ್ಕೆ ದೀರ್ಘಕಾಲ ಸೇವೆ ಸಲ್ಲಿಸಿದ ಹಿರಿಯ ಮುಖಂಡರಾದ ಬುದ್ಧಿವಂತಪ್ಪ ಉಪಾಧ್ಯ, ಭೀಮಣ್ಣ ಬಂಡಿಹಾಳ, ಮಲ್ಲೇಶಪ್ಪ ಗದುಗಿನ, ಮಲ್ಲಪ್ಪ ಕಲ್ಲೇಶ್ಯಾಣಿ, ಎಚ್.ಟಿ. ದ್ವಾಸಲ, ಸುರೇಶ ಬಸವರಡ್ಡೆರ, ಹನುಮಪ್ಪ ನಡುವಲಗುಡ್ಡ, ಹೂವಪ್ಪ ಪೂಜಾರ, ಅಂದಪ್ಪ ದ್ವಾಸಲ ಸೇರಿದಂತೆ ಹಲವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಬಾಬುಗೌಡ ಪಾಟೀಲ, ಬಸವರಾಜ ಪಲ್ಲೇದ, ಸುರೇಶ ಬಸವರಡೇರ, ಬಾಬು ಬನ್ನಿಕೊಪ್ಪ, ಎಂ.ಡಿ. ಬಸವರಡ್ಡರ, ರಾಮನಗೌಡ ಹಲಕುರ್ಕಿ, ಜಗದೀಶ ಅವರಡ್ಡಿ, ಭೀಮರಡ್ಡಿ ಅವರಡ್ಡಿ, ಗುರಣ್ಣ ಅವರಡ್ಡಿ, ಸುರೇಶ ಶಿರೋಳ, ಮಲ್ಲು ಯಲ್ಲರೆಡ್ಡಿ, ಅಂದಪ್ಪ ಹಲಕುರ್ಕಿ, ಸಿದ್ದು ಹನುಮನಾಳ, ಮುತ್ತು ಕುಕನೂರ, ಶಿವಣ್ಣ ಗುಗ್ಗರಿ, ಮಹಾಂತೇಶ ತಳವಾರ, ಮಹಾಂತೇಶ ಇಮ್ರಾಪೂರ, ಭೀಮಣ್ಣ ಕಂಬಳಿ, ಟಿ.ಬಿ. ಇಮ್ರಾಪೂರ, ಬಸವರಾಜ ಕಮ್ಮಾರ, ತಿರುಮಲೇಶ ಬಂಡಿವಡ್ಡರ, ರಾಮಣ್ಣ ಕುಲಕರ್ಣಿ, ಸಂತೋಷ ಕಲ್ಲೇಶ್ಯಾಣಿ, ಕುಮಾರ ಬಸವರಡ್ಡೆರ, ಸೋಮು ಶಿರೋಳ, ಶಿವಪುತ್ರ ಕೆಂಗಾರ, ಶೇಕಣ್ಣ ಕಮ್ಮಾರ, ಗುರುಲಿಂಗಪ್ಪ ಬಸವರದ್ದೇರ, ಶರಣು ವಡವಿ, ಸೋಮು ವಡವಿ, ಅಶೋಕ ಶಿರೋಳ, ಮನೋಹರ ಬಳಗಾನೂರ, ಮಂಜು ಚಿತ್ತರಗಿ, ಚೆನ್ನಬಸು ಹೂಗಾರ, ಲಕ್ಷಣ ಹಿರೇಮನಿ, ಶಶಿ ಸಂಗನಾಳ, ಶಶಿ ಹಿರೇಮನಿ, ಶಂಕರ ದ್ವಾಸಲ, ಮಳ್ಳಪ್ಪ ದ್ವಾಸಲ, ರಮೇಶ ಕುಡಗುಂಟಿ ಸೇರಿದಂತೆ ಅನೇಕ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ನಾಗರಿಕರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande