
ಗದಗ, 29 ಡಿಸೆಂಬರ್ (ಹಿ.ಸ.);
ಆ್ಯಂಕರ್:
ವಿಶ್ವ ಕಲ್ಯಾಣ ಗದಗ ಸಂಚಾಲಿತ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಗೆ ನೀರು ಶುದ್ಧಿಕರಿಸುವ ಯಂತ್ರವನ್ನು ಗದುಗಿನ ಗಣ್ಯ ಉದ್ಯಮಿಗಳಾದ ದತ್ತರಾಜ ಹಬೀಬ ಕುಟುಂಬದವರು ದೇಣಿಗೆ ನೀಡಿದರು.
ಗದುಗಿನ ಗಣ್ಯ ಉದ್ಯಮಿಗಳಾದ ದತ್ತರಾಜ ಹಬೀಬ ಕುಟುಂಬದವರು ವಿಶೇಷ ಚೇತನರ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ಕಾಲ ಕಾಲಕ್ಕೆ ವಾತಾವರಣ ಬದಲಾವಣೆಯಾಗುವುದರಿಂದ ಇವರ ಆರೋಗ್ಯ ವ್ಯತ್ಯಾಸವಾಗುವುದು ತುಂಬಾ ಸಹಜ ಆದ್ದರಿಂದ ನೀರನ್ನು ಬಿಸಿ, ತಂಪು ಹಾಗೂ ಸಾಮಾನ್ಯ ನೀರನ್ನಾಗಿಸು ನೀರು ಶುದ್ಧಿಕರಿಸುವ ಯಂತ್ರವನ್ನು ವಿಶೇಷ ಚೇತನರಿಗೆ ನೀಡುತ್ತಿರುವುದು ನಮ್ಮ ಸೌಭಾಗ್ಯ ಮುಂದೆಯು ಕೂಡಾ ಇವರ ಸರ್ವಾಂಗೀಣ ಅಭಿವೃದ್ಧಿಗಾಗಿ ಬೇಕಾಗುವ ಎಲ್ಲ ರೀತಿಯ ಸಹಾಯ-ಸಹಕಾರ ನೀಡುವುದಾಗಿ ತಿಳಿಸಿದರು.
ಸಂಸ್ಥೆಯ ಅಧ್ಯಕ್ಷ, ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಮಂಜುನಾಥ ಹದ್ದಣ್ಣವರವರ ಮಾತನಾಡಿ, ದತ್ತರಾಜ ಹಬೀಬ ಕುಟುಂಬದವರು ವಿಶೇಷ ಚೇತನರಿಗೆ ನಿರಂತರವಾಗಿ ಸಿಹಿಯೊಂದಿಗೆ ಅನ್ನದಾಸೋಹವನ್ನ ಮಾಡುತ್ತಾ ಬಂದಿದ್ದಾರೆ. ಯಾವುದೇ ಕಾರಣ ಇಲ್ಲದಿದ್ದರೂ ಕೂಡಾ ಸಿಹಿಯೊಂದಿಗೆ ಅನ್ನದಾಸೋಹವನ್ನು ಮಾಡುತ್ತಿರುವುದು ಈಡೀ ಸಮಾಜಕ್ಕೆ ಮಾದರಿಯಾಗಿದ್ದಾರೆ.
ಇಂದು ಹವಾಮಾನ ವೈಪರಿತ್ಯದಿಂದಾಗುವ ಅನಾರೋಗ್ಯ ಸಮಸ್ಯೆಗಳಿಂದ ಮುಕ್ತರಾಗಲು ವಿಶೇಷ ಚೇತನರಿಗೆ ನೀರು ಶುದ್ಧಿಕರಿಸಿ, ಬಿಸಿ, ತಂಪು ಮತ್ತು ಸಾಮಾನ್ಯ ನೀರನ್ನಾಗಿ ಪರಿವರ್ತಸುವ ಯಂತ್ರವನ್ನು ದೇಣಿಗೆ ನೀಡಿ ವಿಶೇಷ ಚೇತನರಿಗೆ ಮಹತ್ವ ಪೂರ್ಣ ಸೇವೆಯನ್ನು ಸಲ್ಲಿಸಿದ್ದಾರೆ. ಇವರಿಗೆ ಹಾಗೂ ಇವರ ಕುಟುಂಬಕ್ಕೆ ಆಯುರ್ ಆರೋಗ್ಯ, ಸಕಲ ಸಂಪತ್ತನ್ನು ಕರುಣಿಸಲೆಂದು ಪ್ರಾರ್ಥಿಸಿ ಧನ್ಯವಾದಗಳನ್ನು ಹೇಳಿದರು.
ವಿಶೇಷ ಚೇತನರು ಶುದ್ಧಿಕರಿಸುವ ಯಂತ್ರವನ್ನು ಪೂಜೆಯನ್ನು ಮಾಡಿದರು.ವಿಶೇಷ ಮಕ್ಕಳು, ಸಿಬ್ಬಂದಿ ಹಾಗೂ ಪಾಲಕರು ಉಪಸ್ಥಿತರಿದ್ದರು.
---------------
ಹಿಂದೂಸ್ತಾನ್ ಸಮಾಚಾರ್ / lalita MP