ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ 2 ; ನಾಳೆ ವಿದ್ಯುತ್ ವ್ಯತ್ಯಯ
ನಾಳೆ
ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ 2 ; ನಾಳೆ ವಿದ್ಯುತ್ ವ್ಯತ್ಯಯ


ಬಳ್ಳಾರಿ, 29 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ನಗರ ಜೆಸ್ಕಾಂ ಉಪವಿಭಾಗ-2 ರ ವ್ಯಾಪ್ತಿಗೆ ಬರುವ 11 ಕೆವಿ ಫೀಡರ್ ನಿಂದ ವಿದ್ಯುತ್ ಸರಬರಾಜು ಆಗುವ ಎಫ್-07 ರ ವಿದ್ಯುತ್ ಲೈನ್ ಗಳ ನಿರ್ವಹಣೆ ಕಾಮಗಾರಿ ಕೈಗೊಳ್ಳುತ್ತಿರುವುದರಿಂದ ನಾಳೆ ಬೆಳಿಗ್ಗೆ 10 ರಿಂದ ಸಂಜೆ 05 ಗಂಟೆಯವರೆಗೆ ನಗರದ ವಿವಿಧೆಡೆ ವಿದ್ಯುತ್ ವ್ಯತ್ಯಯವಾಗಲಿದೆ.

ವಿದ್ಯುತ್ ವ್ಯತ್ಯಯವಾಗುವ ಪ್ರದೇಶಗಳು:

ಸಂಗನಕಲ್ಲು ರಸ್ತೆ, ಎಸ್.ಎನ್.ಪೇಟೆ 3ನೇ ಕ್ರಾಸ್, ಜಿಲ್ಲಾ ಆಸ್ಪತ್ರೆ, ರಾಘವ ಕಲಾ ಮಂದಿರ, ಅನಂತಪುರ ರಸ್ತೆ, ವಡ್ಡರ ಬಂಡೆ, ಅಗಡಿ ಮಾರೆಪ್ಪ ಕಾಂಪೌ0ಡ್, ರೂಪನಗುಡಿ ರಸ್ತೆ, ಮುಬರಕ್ ಟಾಕೀಸ್, ಬಾಲಾಜಿರಾವ್ ರಸ್ತೆ, ಕೆ.ಸಿ. ರೋಡ್, ಮೀನಾಕ್ಷಿ ಸರ್ಕಲ್, ಬೆಂಗಳೂರು ರಸ್ತೆ, ದುಗ್ಗಪ್ಪ ಬೀದಿ, ರೆಡ್ಡಿ ಬೀದಿ, ಅಲ್ಲಂ ಬೀದಿ, ಮುಲ್ಲಂಗಿ ಸಂಜೀವಪ್ಪ ಬೀದಿ, ರೂಪನಗುಡಿ ನರಪ್ಪ ಬೀದಿ, ತಾಯಮ್ಮಕಟ್ಟೆ ಸೇರಿದಂತೆ ಇನ್ನೂ ಮುಂತಾದ ಏರಿಯಾಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಸಾರ್ವಜನಿಕರು ಮತ್ತು ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಕಾರ್ಯನಿರ್ವಾಹಕ ಅಭಿಯಂತರರು ಸಹಕರಿಸಬೇಕು ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande