
ಹೊಸದುರ್ಗ, 29 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಪೋಕ್ಸೋ ಪ್ರಕರಣದ ಆರೋಪಿಗೆ 20 ವರ್ಷ ಕಠಿಣ ಶಿಕ್ಷೆ, 25,000/- ರೂ ದಂಡ ಮತ್ತು ಸಂತ್ರಸ್ತ ಬಾಲಕಿಗೆ 5 ಲಕ್ಷ ರೂ ಪರಿಹಾರ ನೀಡುವಂತೆ ಹೊಸದುರ್ಗ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ನ್ಯಾ.ಗಂಗಾಧರ ಚನ್ನಬಸಪ್ಪ ಹಡಪದ್ ಅವರು ಆದೇಶಿಸಿದ್ದಾರೆ.
ದಿನಾಂಕ:06.08.2023 ರಂದು ಮದ್ಯಾಹ್ನ ಹೊಸದುರ್ಗ ಟೌನ್ ರಾಗಿ ಕಾಂಪ್ಲೆಕ್ಸ್ ಮುಂಭಾಗದಲ್ಲಿ ಆರೋಪಿ ಇಸ್ಮಾಯಿಲ್ ಜಬೀಉಲ್ಲಾ 10 ವರ್ಷದ ಅಪ್ರಾಪ್ತ ಬಾಲಕಿಯನ್ನು ಮಾತನಾಡಿಸಿ ಪುಸಲಾಯಿಸಿ ಬಲವಂತವಾಗಿ ಎಳೆದುಕೊಂಡು ಹೋಗಿ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದ. ನಂತರ ಈ ವಿಚಾರ ಮನೆಯವರಿಗೆ ಹೇಳಿದರೆ ನಿಮ್ಮ ಅಪ್ಪ-ಅಮ್ಮನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎಂದು ಆರೋಪಿಸಲಾಗಿತ್ತು.
ಅದರಂತೆ ಕ್ರೈಂ ನಂ 341/2023 ರಂತೆ ಐಪಿಸಿ 363, 506, 376(2) 376(2) ಹೊಸದುರ್ಗ ಪೊಲೀಸ್ ಕಲಂ:4,5,(M), 6, ಪೊಕ್ಸೋ ಪ್ರಕರಣ ದಾಖಲಾಗಿತ್ತು.
ಸದರಿ ಪ್ರಕರಣದ ತನಿಖೆ ನಡೆಸಿದ ಹೊಸದುರ್ಗ ಪೊಲೀಸ್ ನಿರೀಕ್ಷಕರಾಗಿದ್ದ ತಿಮ್ಮಣ್ಣ.ಎನ್ ಅವರು ಆರೋಪಿಯನ್ನು ಪತ್ತೆಮಾಡಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ, ದಿನಾಂಕ:16.09.2023 ರಂದು ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು. ಸದರಿ ಪ್ರಕರಣದಲ್ಲಿ ಚಿತ್ರದುರ್ಗದ ಮಾನ್ಯ 2ನೇ ಜಿಲ್ಲಾ ಸತ್ರ ನ್ಯಾಯಾಲಯದ ಎಸ್.ಪಿ.ಎಲ್.ಸಿ ಕಲಂ134/2023 ರಲ್ಲಿ ವಿಚಾರಣೆಯನ್ನು ನಡೆಸಿ ಕಲಂ:363, 506, 376(ಎ), 376(ಬಿ) ಐಪಿಸಿ ಕಲಂ:4.5.(M), 6. ಪೊಕ್ಕೋ ಕಾಯ್ದೆ ಅಡಿಯಲ್ಲಿ ಜಗದೀಶ್ ವಿಶೇಷ ಸರ್ಕಾರಿ ಅಭಿಯೋಜಕರು ವಾದ ಮಂಡಿಸಿದ್ದರು.
ಆರೋಪ ಧೃಢಪಟ್ಟ ಮೇರೆಗೆ ದಿನಾಂಕ:26.12.2025 ರಂದು ಮೇಲ್ಕಂಡ ಆರೋಪಿಗೆ ಮಾನ್ಯ ನ್ಯಾ.ಗಂಗಾಧರ ಚನ್ನಬಸಪ್ಪ ಹಡಪದ್ ಅವರು 20 ವರ್ಷ ಕಠಿಣ ಶಿಕ್ಷೆ ಹಾಗೂ 25,000/- ರೂ ದಂಡ ತಪ್ಪಿದ್ದಲ್ಲಿ 03 ತಿಂಗಳ ಕಾರಾಗೃಹ ಶಿಕ್ಷೆ ಹಾಗೂ ನೊಂದ ಬಾಲಕಿಗೆ 5 ಲಕ್ಷ ರೂ ಪರಿಹಾರ ಮೊತ್ತ ಘೋಶಿಸಿ ಆದೇಶಿಸಿದ್ದಾರೆ.
ಸದರಿ ಪ್ರಕರಣದಲ್ಲಿ ಉತ್ತಮ ರೀತಿಯಲ್ಲಿ ತನಿಖೆ ಕೈಗೊಂಡು ಆರೋಪಿಗೆ ಶಿಕ್ಷೆ ಆಗುವಂತೆ ಕಾರ್ಯ ನಿರ್ವಹಿಸಿದ ಹೊಸದುರ್ಗ ಪೊಲೀಸ್ ನಿರೀಕ್ಷಕರು ಮತ್ತು ಸಿಬ್ಬಂದಿ ಕಾರ್ಯವನ್ನು ಪೊಲೀಸ್ ಅಧೀಕ್ಷಕರಾದ ರಂಜಿತ್ ಕುಮಾರ್ ಬಂಡಾರು ಅವರು ಶ್ಲಾಘಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್