ಹತ್ತಿ ಬೆಳೆ : ಹೊಸ ಸಂಶೋಧನೆ ನಡೆಯಲಿ-ಡಾ.ಶ್ರೀನಿವಾಸ ರಾವ್ ಸಲಹೆ
ರಾಯಚೂರು, 29 ಡಿಸೆಂಬರ್ (ಹಿ.ಸ.) : ಆ್ಯಂಕರ್ : ರಾಯಚೂರು ಜಿಲ್ಲೆಯಲ್ಲಿ ಹತ್ತಿ ಬೆಳೆಯು ಯೆಥೇಚ್ಛವಾಗಿದ್ದು, ಈ ಭಾಗದ ಹತ್ತಿ ಬೆಳೆಗಾರರಿಗೆ ಅನುಕೂಲವಾಗುವ ರೀತಿಯಲ್ಲಿ ಹೊಸ ಸಂಶೋಧನೆಗಳು ನಡೆಯಬೇಕಿದೆ ಎಂದು ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಶ್ರೀನಿವಾಸ ರಾವ್ ಅವರು ಹೇಳಿದ
ಹತ್ತಿ ಬೆಳೆ : ಹೊಸ ಸಂಶೋಧನೆ ನಡೆಯಲಿ: ಡಾ.ಶ್ರೀನಿವಾಸ ರಾವ್ ಸಲಹೆ


ಹತ್ತಿ ಬೆಳೆ : ಹೊಸ ಸಂಶೋಧನೆ ನಡೆಯಲಿ: ಡಾ.ಶ್ರೀನಿವಾಸ ರಾವ್ ಸಲಹೆ


ಹತ್ತಿ ಬೆಳೆ : ಹೊಸ ಸಂಶೋಧನೆ ನಡೆಯಲಿ: ಡಾ.ಶ್ರೀನಿವಾಸ ರಾವ್ ಸಲಹೆ


ಹತ್ತಿ ಬೆಳೆ : ಹೊಸ ಸಂಶೋಧನೆ ನಡೆಯಲಿ: ಡಾ.ಶ್ರೀನಿವಾಸ ರಾವ್ ಸಲಹೆ


ಹತ್ತಿ ಬೆಳೆ : ಹೊಸ ಸಂಶೋಧನೆ ನಡೆಯಲಿ: ಡಾ.ಶ್ರೀನಿವಾಸ ರಾವ್ ಸಲಹೆ


ರಾಯಚೂರು, 29 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ರಾಯಚೂರು ಜಿಲ್ಲೆಯಲ್ಲಿ ಹತ್ತಿ ಬೆಳೆಯು ಯೆಥೇಚ್ಛವಾಗಿದ್ದು, ಈ ಭಾಗದ ಹತ್ತಿ ಬೆಳೆಗಾರರಿಗೆ ಅನುಕೂಲವಾಗುವ ರೀತಿಯಲ್ಲಿ ಹೊಸ ಸಂಶೋಧನೆಗಳು ನಡೆಯಬೇಕಿದೆ ಎಂದು ದೆಹಲಿಯ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಶ್ರೀನಿವಾಸ ರಾವ್ ಅವರು ಹೇಳಿದರು.

ಡಿಸೆಂಬರ್ 29ರ ಸೋಮವಾರ ದಂದು ನಗರದ ಕೃಷಿ ವಿವಿಯ ಜಗಜ್ಯೋತಿ ಬಸವೇಶ್ವರ ಸಭಾಂಗಣದಲ್ಲಿ ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ರಾಷ್ಟಿçÃಯ ಕೃಷಿ ಅಭಿವೃದ್ಧಿ ಸಹಕಾರಿ ನಿಯಮಿತ, ಬಾರಾಮುಲ್ಲಾ, ಜಮ್ಮು ಮತ್ತು ಕಾಶ್ಮೀರ ಇವರ ಸಹಯೋಗದಲ್ಲಿ ಮೂರು ದಿನಗಳ ಅವಧಿಯ ಕೃಷಿ, ಪಶುವೈದ್ಯಕೀಯ ಮತ್ತು ಕೃಷಿಗೆ ಸಂಬ0ಧಿತ ವಿಷಯಗಳಲ್ಲಿ ಸುಸ್ಥಿರ ನಾವಿನ್ಯತೆಗಳ ಕುರಿತಾದ ಅಂತರಾಷ್ಟಿçÃಯ ಸಮ್ಮೇಳನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ದೇಶದೆಲ್ಲೆಡೆ 2002ರಲ್ಲಿ ಉತ್ತಮವಾಗಿ ಬೆಳೆದು ಭರವಸೆ ಮೂಡಿಸಿದ ಬಿಟಿ ಹತ್ತಿ ತಳಿಯು ಕ್ರಮೇಣ ಕೀಟಬಾಧೆಗೆ ತುತ್ತಾಗಿದ್ದು, ನಾವಿನ್ಯತೆಯ ಮೂಲಕ ಹೊಸ ತಳಿಯನ್ನು ಕಂಡು ಹಿಡಿಯಬೇಕಾಗಿದೆ. ಹತ್ತಿ ಬಿಡಿಸುವಿಕೆಯ ಸಣ್ಣ ಉಪಕರಣಗಳ ತಯಾರಿಕೆ ಹಾಗೂ ಉತ್ತಮ ರೀತಿಯ ಬ್ಯಾಗೇಜ್‌ನ ಅವಶ್ಯಕತೆಯಿದೆ. ಇವೆರಡನ್ನೂ ವಿಶ್ವವಿದ್ಯಾಲಯವು ಪರಿಗಣಿಸಿ ಕ್ರಮವಹಿಸಬೇಕಾಗಿದೆ ಎಂದರು.

ನಾವಿನ್ಯತೆ ಎಂದರೆ ಹೊಚ್ಚ-ಹೊಸದು, ಹೆಚ್ಚಿನ ಪ್ರಗತಿ ಹಾಗೂ ನಿರಂತರವಲ್ಲದ್ದನ್ನು ಬಿಟ್ಟು ಪ್ರಸ್ತುತಿಗೆ ಹೊಂದಿಕೊಳ್ಳುವ ಬಗ್ಗೆ ವಿಚಾರ ಮಾಡುವುದಾಗಿದೆ. ಕೃಷಿ ಮತ್ತು ಜಾನುವಾರು ಕೃಷಿ ಕ್ಷೇತ್ರಗಳ ಅಭಿವೃದ್ಧಿಗೆ ಕೃಷಿ ವಿಶ್ವವಿದ್ಯಾಲಯ ಮತ್ತು ಕೃಷಿಗೆ ಸಂಬAಧಿಸಿದ ಸಂಸ್ಥೆಗಳು ಒತ್ತು ಕೊಡಬೇಕು. ಈ ಬಗ್ಗೆ ರಾಯಚೂರಿನ ಕೃ.ವಿ.ವಿಯು ತನ್ನ ಕೊಡುಗೆಯ ಬಗ್ಗೆ ಪರಾಮರ್ಶಿಸಬೇಕೆಂದು ಕಿವಿಮಾತು ಹೇಳಿದರು.

ಮಳೆಮಾರುತ ಮತ್ತು ಮಾರುಕಟ್ಟೆಗಳ ಸಮಸ್ಯೆಗಳತ್ತ ವಿಶ್ವವಿದ್ಯಾಲಯವು ಗಮನಹರಿಸಿ ರೈತರ ಏಳಿಗೆಗೆ ಸಹಕರಿಸಬೇಕು. ತುಂತುರು ನೀರಾವರಿ, ಫಲೀಕರಣ, ನಿವ್ವಳ ಶೂನ್ಯ ಹೊರಸೂಸುವಿಕೆ ಇತ್ಯಾದಿಗಳ ಬಗ್ಗೆ ಗಮನ ನೀಡಬೇಕು. ಕೊಯ್ಲೋತ್ತರ ನಷ್ಟವು ಕೃಷಿಯ ಅಭಿವೃದ್ಧಿಗೆ ಮಾರಕವಾಗಿದ್ದು, ಶೇ.30 ರಷ್ಟು ಆಹಾರವು ಪ್ರತಿ ವರ್ಷ ನಷ್ಟವಾಗುತ್ತಿದ್ದು, ಇದರ ಬೆಲೆ ವಾರ್ಷಿಕವಾಗಿ 1.3 ಲಕ್ಷ ಕೋಟಿಗಳಷ್ಟಾಗಿರುವುದು ಬೇಸರದ ಸಂಗತಿಯಾಗಿದೆ. ಆದ್ದರಿಂದ ರೈತರೇ ಜೀವಾಳ, ರೈತರಿಲ್ಲದಿದ್ದರೆ ಯಾವುದೇ ಕೃಷಿ ವಿಶ್ವವಿದ್ಯಾಲಯ ಇರುವುದಿಲ್ಲ. ಇದನ್ನು ಗಮನದಲ್ಲಿಟ್ಟುಕೊಂಡು ನಾವೆಲ್ಲರೂ ರೈತರ ಅಭಿವೃದ್ಧಿಗೆ ಶ್ರಮಿಸಬೇಕೆಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಎಂ.ಹನುಮ0ತಪ್ಪ ಅವರು ವಹಿಸಿ ಮಾತನಾಡಿ, ಈ ವಿಶ್ವವಿದ್ಯಾಲಯವು ರೈತರ ಅಭಿವೃದ್ಧಿಗೆ ಪೂರಕವಾಗಿರುವ ಎಲ್ಲಾ ವ್ಯವಸ್ಥೆಗಳನ್ನು ಹೊಂದಿದ್ದು, ಇಲ್ಲಿ ಅಭಿವೃದ್ಧಿಪಡಿಸಿದ ಹಲವಾರು ತಂತ್ರಜ್ಞಾನಗಳು ರೈತರಿಗೆ ತಲುಪುತ್ತಿವೆ. ಆದಾಗ್ಯೂ ಕೂಡ ಇನ್ನೂ ಹೆಚ್ಚಿನ ರೀತಿಯಲ್ಲಿ ಅಂದರೆ, ಆಹಾರ ಉತ್ಪಾದನೆಯ ಮೌಲ್ಯವರ್ಧನೆ, ಬ್ರಾö್ಯಂಡಿ0ಗ್, ಪ್ಯಾಕೆಜಿಂಗ್‌ಗಳಲ್ಲಿ ಪ್ರಗತಿಯನ್ನು ಸಾಧಿಸಬೇಕಾಗಿದೆ. ವಿಶ್ವವಿದ್ಯಾಲಯದ ಜೈವಿಕ ಉತ್ಪಾದನಾ ಘಟಕ, ಬೀಜ ಘಟಕ, ಪೀಡೆನಾಶಕಗಳ ಅವಶೇಷಗಳ ವಿಶ್ಲೇಷಣಾ ಘಟಕಗಳು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಮೆಣಸಿನಕಾಯಿ ಬಾಧಿಸುವ ಬ್ಲಾಯಕ್ ತ್ರಿಪ್ಸ್ನ ನಿರ್ವಹಣೆಯಲ್ಲಿ ನಮ್ಮ ವಿಶ್ವವಿದ್ಯಾಲಯದ ಜೈವಿಕ ಉತ್ಪಾದನಾ ಘಟಕದ ಕೊಡುಗೆ ಅಪಾರವಾಗಿದೆ. ಅಂತೆಯೇ ಬೀಜ ಉತ್ಪಾದನಾ ಘಟಕವು ಪ್ರಸ್ತುತ 22,000 ಕ್ವಿಂಟಲ್ ಬೀಜ ಉತ್ಪಾದಿಸಿ ರೈತರಿಗೆ ಮಾರಾಟ ಮಾಡಲಾಗಿದೆ. ಬರುವ ದಿನಗಳಲ್ಲಿ ಸಿರಿಧಾನ್ಯಗಳ ಮೌಲ್ಯವರ್ಧಿತ ಪಾರ್ಕ್ ಕೂಡ ಈ ವಿಶ್ವವಿದ್ಯಾಲಯದಲ್ಲಿ ಸ್ಥಾಪನೆಯಾಗಲಿದ್ದು, ಸಣ್ಣ ಮತ್ತು ಅತಿಸಣ್ಣ ಸಿರಿಧಾನ್ಯ ಬೆಳೆಗಾರರಿಗೆ ವರದಾನವಾಗಲಿದೆ ಎಂದರು.

ವಿಶ್ವವಿದ್ಯಾಲಯವು ಕೃಷಿ ಯಂತ್ರೋಪಕರಣಗಳ ಅಭಿವೃದ್ಧಿ ಹಾಗೂ ಬಳಕೆಗೆ ಮಹತ್ವ ನೀಡಿದ್ದು, ಭತ್ತದಲ್ಲಿ ಭೂಮಿ ತಯಾರಿಕೆಯಿಂದ ಹಿಡಿದು ಕೊಯ್ಲೋತ್ತರದವರೆಗೆ ಬೇಕಾಗುವ ಸಣ್ಣ-ಸಣ್ಣ ಉಪಕರಣಗಳನ್ನು ಅಭಿವೃದ್ಧಿಪಡಿಸಿ ರೈತರ ಬಳಕೆಗೆ ನೀಡಿದೆ. ಕೃಷಿ ತಾಂತ್ರಿಕ ತಂತ್ರಜ್ಞಾನ ಮತ್ತು ಬೆಳೆ ಸಂರಕ್ಷಣೆ ವಿಷಯಗಳಲ್ಲಿ 14 ಪೇಟೆಂಟ್‌ಗಳು ದೊರೆತಿವೆ. ಹಾಗೂ ಕೃಷಿ ತಾಂತ್ರಿಕ ವಿಭಾಗದ 12 ವಿದ್ಯಾರ್ಥಿಗಳು ಗೇಟ್ ಪರೀಕ್ಷೆಯನ್ನು ತೇರ್ಗಡೆ ಮಾಡಿರುವರು ಎಂದು ನೆರೆದಿದ್ದ ಸಮ್ಮೇಳನಾರ್ಥಿಗಳಿಗೆ ತಿಳಿಸಿದರು.

ಜಾನುವಾರುಗಳ ಆಹಾರ ಕೊರತೆಯನ್ನು ನೀಗಿಸಲು ಹೈಡ್ರೋಫೋನಿಕ್ ತಂತ್ರಜ್ಞಾನ ಮತ್ತು ಅಝೋಲ್ಲಾಗಳ ಉತ್ಪಾದನೆಗೆ ವಿಶ್ವವಿದ್ಯಾಲಯವು ಒತ್ತು ನೀಡಿದೆ. ಆದ್ದರಿಂದ, ಕೃಷಿಯೇ ನಮಗೆ ಮೂಲ ಸಂಸ್ಕೃತಿ, ಕೃಷಿ ಇಲ್ಲದಿದ್ದರೆ ಯಾವ ಸಂಸ್ಕೃತಿಯು ಇರಲು ಸಾಧ್ಯವಿಲ್ಲ. ರೈತರೇ ಜೀವಾಳ, ಅವರ ಏಳ್ಗೆಯೆತ್ತ ನಾವೆಲ್ಲರೂ ಸಾಗೋಣ ಎಂದರು.

ಈ ವೇಳೆ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಸದಸ್ಯರಾದ ಮಲ್ಲಿಕಾರ್ಜುನ ಡಿ ಅವರು ಮಾತನಾಡಿ, ವಿಶ್ವವಿದ್ಯಾಲಯವು ಹಲವಾರು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಿದರೂ ಕೂಡ ಅವುಗಳ ಬಳಕೆ ರೈತರ ಮಟ್ಟದಲ್ಲಿ ಬಹಳ ಕಡಿಮೆಯಿದೆ. ಇದರ ಬಗ್ಗೆ ವಿಶ್ವವಿದ್ಯಾಲಯವು ಗಮನಹರಿಸಬೇಕು ಹಾಗೂ ವಿಶ್ವವಿದ್ಯಾಲಯದಲ್ಲಿ ರೈತರಿಗೆ ಬೇಕಾಗಿರುವ ಸಮಗ್ರ ಕೃಷಿ ಮತ್ತು ಸಂಪನ್ನ ಕೃಷಿ ಪ್ರಾತ್ಯಕ್ಷಿಕೆ ತಾಕುಗಳ ಪುನಶ್ಚೇತನವಾಗಬೇಕಾಗಿದೆ ಎಂದರು.

ಈ ವೇಳೆ ಹೈದರಾಬಾದಿನ ಪಿ.ವಿ.ನರಸಿಂಹರಾವ್ ಕೃಷಿ ವಿಶ್ವವಿದ್ಯಾಲಯದ ವಿಸ್ತರಣಾ ನಿರ್ದೇಶಕರಾದ ಪ್ರೊ. ಎಂ. ಕಿಶನ್‌ಕುಮಾರ, ಓಡಿಸ್ಸಾದ ಕೇಂದ್ರಿಯ ಭತ್ತ ಸಂಶೋಧನಾ ಸಂಸ್ಥೆಯ ನಿರ್ದೇಶಕರಾದ ಡಾ. ಜಿ. ಎ. ಕೆ. ಕುಮಾರ, ಬೀದರ್‌ನ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಸ್ನಾತಕೋತ್ತರ ವಿಭಾಗದ ಡೀನ್‌ರಾದ ಡಾ. ದಿಲೀಪ್ ಕುಮಾರ, ಬಾರಾಮುಲ್ಲಾದ ಡಾ. ಆರ್. ಎ. ಶಾಹ ಅವರು ಮಾತನಾಡಿದರು.

ಇದಕ್ಕೂ ಮುಂಚೆ ಅಂತರಾಷ್ಟಿಯ ಸಮ್ಮೇಳನದ ಆಯೋಜನೆಯ ಉದ್ದೇಶವನ್ನು ಸಮ್ಮೇಳನದ ಆಯೋಜನಾ ಸಂಘಟಕರಾದ ಡಾ.ಜಾಗೃತಿ ಬಿ. ದೇಶಮಾನ್ಯ ಅವರು ಮಂಡಿಸಿದರು. ಅಲ್ಲದೆ ಈ ಸಮ್ಮೇಳನಕ್ಕೆ ಆಗಮಿಸಿದ ಎಲ್ಲಾ ಸಮ್ಮೇಳನಾರ್ಥಿಗಳನ್ನು, ಗಣ್ಯರನ್ನು, ನೆರೆದಿದ್ದ ಎಲ್ಲಾ ಸಭಿಕರನ್ನು ಸ್ವಾಗತಿಸಿದರು.

ಇದೇ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ವ್ಯವಸ್ಥಾಪನಾ ಮಂಡಳಿಯ ಸದಸ್ಯರುಗಳಾದ ಬಸನಗೌಡ ಬ್ಯಾಗವಾಟ್, ಮಲ್ಲೇಶ ಕೊಲಿಮಿ, ತಿಮ್ಮಪ್ಪ ಸೋಮಪ್ಪ ಚವಡಿ, ಡಾ.ಕೆ.ನಾರಾಯಣ ರಾವ್, ಡಾ. ಜಿ. ಬಿ. ಲೋಕೆಶ್ ಸೇರಿದಂತೆ ವಿಶ್ವವಿದ್ಯಾಲಯದ ಅಧಿಕಾರಿವೃಂದ, ಪ್ರಾಧ್ಯಾಪಕವೃಂದ, ಸ್ನಾತಕೋತ್ತರ ವಿದ್ಯಾರ್ಥಿಗಳು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande