
ಕೊಪ್ಪಳ, 29 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಕೊಪ್ಪಳ ಕಿನ್ನಾಳ ವಲಯ, ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕಿನ್ನಾಳ ವಲಯ ಮತ್ತು ಗ್ರಾಮಪಂಚಾಯತ್ ಕಿನ್ನಾಳ - ಮಾದಿನೂರು ಇವರುಗಳ ಸಂಯುಕ್ತಾಶ್ರಯದಲ್ಲಿ ಡಾ. ವಿರೇಂದ್ರ ಹೆಗ್ಗಡೆಯವರು ಹಾಗೂ ಮಾತೋಶ್ರೀ ಹೇಮಾವತಿ ಹೆಗ್ಗಡೆ ದಂಪತಿಗಳ ಮಾರ್ಗದರ್ಶನದೊಂದಿಗೆ ನಡೆಯುವ ಗ್ರಾಮ ಸುಭೀಕ್ಷೆಗಾಗಿ ವಲಯ ಮಟ್ಟದಲ್ಲಿ ಶ್ರೀ ಮಂಜುನಾಥ ಸ್ವಾಮಿ ಸಹಸ್ರ ಬಿಲ್ವಾರ್ಚನೆ ಪೂಜೆ ಮತ್ತು ಧಾರ್ಮಿಕ ಸಭಾ ಕಾರ್ಯಕ್ರಮಗಳು ಜರುಗಲಿವೆ.
ನಾಳೆ ಕಿನ್ನಾಳ ಹಿರೇಹಳ್ಳ ಕ್ರಾರ್ಟಸ್ ಆವರಣದಲ್ಲಿ ಬೆಳಗ್ಗೆ 8ಗಂಟೆಗೆ ಪೂಜಾ ಕಾರ್ಯಕ್ರಮ ಹಾಗೂ ಬೆಳಿಗ್ಗೆ 11ಗಂಟೆಗೆ ಸಭಾ ಕಾರ್ಯಕ್ರಮಗಳು ಜರುಗುವವು.
ಸಾಮೂಹಿಕ ಸಹಸ್ರ ಬಿಲ್ವಾರ್ಚನೆ ಪೂಜಾ ವ್ರತಧಾರಿಗಳು ನಾಳೆ ಬೆಳಗ್ಗೆ 7ಗಂಟೆಗೆ ಸರಿಯಾಗಿ ಪೂಜಾ ಸ್ಥಳದಲ್ಲಿ ಭಾಗಿಯಾಗಿರಬೇಕು.
ಹೆಚ್ಚಿನ ಮಾಹಿತಿಗಾಗಿ ಅಧ್ಯಕ್ಷರು ಸಾಮೂಹಿಕ ಸಹಸ್ರ ಬಿಲ್ವಾರ್ಚನಾ ಸೇವಾ ಸಮಿತಿ ಕಿನ್ನಾಳ ಜಗದೀಶ ಎರೆ, ಗೌರವಸಲಹೆಗಾರ ಜಗದೀಶ ಕೆ. ಹೆಚ್., ಉಪಾಧ್ಯಕ್ಷರು ಮಾಲಾ ಬಡಗೇರ, ಕಾರ್ಯದರ್ಶಿ ಗಣಪತಿ ಡಿ. ಎನ್., ಸಹಕಾರ್ಯದರ್ಶಿ ನಿರ್ಮಲಾ ಸೊನ್ನದ, ರೇಣುಕಾ ಮೂಲಿಮನಿ, ಕೋಶಾಧಿಕಾರಿ ದೇವಮ್ಮ ಮುದ್ಲಾಪೂರ ಇವರನ್ನು ಸಂಪರ್ಕಿಸುವಂತೆ ಕೋರಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್