ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಜಾತ್ರಾ ವಿವರ
ಕೊಪ್ಪಳ, 29 ಡಿಸೆಂಬರ್ (ಹಿ.ಸ.) : ಆ್ಯಂಕರ್ : ದಿನಾಂಕ ಜನವರಿ-1 ಗುರುವಾರ ಸಂಜೆ 4:30 ಗಂಟೆಗೆ ಬಸವಪಟ ಹಾಗೂ ಕರ್ತೃ ಗದ್ದುಗೆಯ ಶಿಖರಕ್ಕೆ ಕಳಸಾರೋಹಣ. ಸಂಜೆ 5:00 ಗಂಟೆಗೆ ಶ್ರೀಮಠದ ಕೆರೆಯಲ್ಲಿ ತೆಪ್ಪೋತ್ಸವ ಹಾಗೂ ಬೀದರ್‍ನ ಕುಮಾರಿ ಶಿವಾನಿ ಶಿವದಾಸಸ್ವಾಮಿ ಹಾಗೂ ತಂಡದವರಿಂದ ಸಂಗೀತ. ಜನವ
ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಜಾತ್ರಾ ವಿವರ


ಕೊಪ್ಪಳ, 29 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ದಿನಾಂಕ ಜನವರಿ-1 ಗುರುವಾರ ಸಂಜೆ 4:30 ಗಂಟೆಗೆ ಬಸವಪಟ ಹಾಗೂ ಕರ್ತೃ ಗದ್ದುಗೆಯ ಶಿಖರಕ್ಕೆ ಕಳಸಾರೋಹಣ. ಸಂಜೆ 5:00 ಗಂಟೆಗೆ ಶ್ರೀಮಠದ ಕೆರೆಯಲ್ಲಿ ತೆಪ್ಪೋತ್ಸವ ಹಾಗೂ ಬೀದರ್‍ನ ಕುಮಾರಿ ಶಿವಾನಿ ಶಿವದಾಸಸ್ವಾಮಿ ಹಾಗೂ ತಂಡದವರಿಂದ ಸಂಗೀತ.

ಜನವರಿ-2 ಶುಕ್ರವಾರ ಸಾಯಂಕಾಲ 5:00 ಗಂಟೆಗೆ ಶ್ರೀಅನ್ನಪೂರ್ಣೇಶ್ವರಿ ದೇವಿಗೆ ಉಡಿ ತುಂಬುವ ಕಾರ್ಯಕ್ರಮ.

ಜನವರಿ-3 ಶನಿವಾರ ಸಾಯಂಕಾಲ 4.00 ಗಂಟೆಗೆ ಶ್ರೀ ಗವಿಸಿದ್ದೇಶ್ವರ ಮೂರ್ತಿಯ ಪಲ್ಲಕ್ಕಿ ಉತ್ಸವ ಹಾಗೂ ವಿವಿಧ ಜನಪದ ಕಲಾತಂಡಗಳೊಂದಿಗೆ ಶ್ರೀ ಗವಿಸಿದ್ದೇಶ್ವರ ಮೂರ್ತಿಯ ಕಳಸದ ಮೆರವಣಿಗೆ. ಮಂಗಳಾಪುರ ಹಾಗೂ ಮುದ್ದಾಬಳ್ಳಿ ಗ್ರಾಮದ ಭಕ್ತರಿಂದ ಮೂರ್ತಿ ಹಾಗೂ ಶ್ರೀ ಗವಿಸಿದ್ಧೇಶ್ವರ ರಥದ ಕಳಸ ಹಲಗೇರಿಯ ದಿ.ವೀರನಗೌಡ ಪಾಟೀಲರವರ ಮನೆಯಿಂದ ಹೊರಟು ಶ್ರೀ ಮಠಕ್ಕೆ ಕಲಾವಿದರ ತಂಡದೊಂದಿಗೆ ಭವ್ಯ ಮೆರವಣಿಗೆಯೊಂದಿಗೆ ಶ್ರೀ ಮಠಕ್ಕೆ ತಲುಪುವದು.

ದಿನಾಂಕ-4 ರವಿವಾರ ಸಂಜೆ 5:30 ಗಂಟೆಗೆ ಉಚ್ಚಾಯ (ಲಘು ರಥೋತ್ಸವ) ಹಾಗೂ ಶ್ರೀಮಠದ ಕೈಲಾಸ ಮಂಟಪದಲ್ಲಿ ಶ್ರೀ ಗವಿಸಿದ್ದೇಶ್ವರ ಸಂಗೀತ ವಿದ್ಯಾಪೀಠದ ವಿದ್ಯಾರ್ಥಿಗಳಿಂದ ಸಂಗೀತ ಕಾರ್ಯಕ್ರಮ.

ಜನವರಿ-5 ಸೋಮವಾರ ಬೆಳಿಗ್ಗೆ 04.00 ಮಹಾಮಹಿಮ ಶ್ರೀ ಗವಿಸಿದ್ಧೇಶ್ವರ ಕತೃ ಗದ್ದುಗೆಗೆ ರುದ್ರಾಭಿಷೇಕ, 10.30 ಗಂಟೆಗೆ ಗವಿಮಠದ ಆವರಣದಲ್ಲಿ ಪೋಲಿಸ್ ಇಲಾಖೆಯಿಂದ ಶ್ವಾನದಳ, ಕರಾಟೆ, ದಾಲಪಟ ಪ್ರದರ್ಶನ. ಸಾಯಂಕಾಲ 5:30 ಗಂಟೆಗೆ ಮಹಾಮಹಿಮ ಶ್ರೀ ಗವಿಸಿದ್ದೇಶ್ವರ ಮಹಾರಥೋತ್ಸವ ನೆರವೇರಲಿದೆ.

ಮಹಾರಥೋತ್ಸವಕ್ಕೆ ಮೇಘಾಲಯ ರಾಜ್ಯದ ಗೌರವಾನ್ವಿತ ರಾಜ್ಯಪಾಲರಾದ ಸಿ.ಎಚ್. ವಿಜಯಶಂಕರ್ ಅವರು ಚಾಲನೆ ನೀಡಲಿದ್ದಾರೆ. ಮಹಾರಥೋತ್ಸವ ನಂತರ ಶ್ರೀಮಠದ ಕೈಲಾಸ ಮಂಟಪದಲ್ಲಿ ನಡೆಯುವ ಭಕ್ತ ಹಿತಚಿಂತನ ಸಭೆ ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಶ್ರೀ ಜಗದ್ಗುರು ಮೂರುಸಾವಿರ ಮಹಾಸಂಸ್ಥಾನ ಮಠದ ಶ್ರೀಮನ್ ಮಹಾರಾಜ ನಿರಂಜನ ಜಗದ್ಗುರು ಡಾ. ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮಿಗಳು ಶ್ರೀ ಕ್ಷೇತ್ರ ಕಾಗಿನೆಲೆಯ ಶ್ರೀಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠದ ಪರಮಪೂಜ್ಯ ಜಗದ್ಗುರು ಶ್ರೀ ನಿರಂಜನಾನಂದಪುರಿ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ.

ಕಾಖಂಡಕಿ ಗುರುದೇವಾಶ್ರಮದ ಪರಮಪೂಜ್ಯ ಶ್ರೀಯೋಗಿಶ್ವರ ಮಹಾಸ್ವಾಮಿಗಳು ಉಪದೇಶಾಮೃತವನ್ನು ನೀಡಲಿದ್ದಾರೆ. ಶಿವಮೊಗ್ಗದ ಹಿಂದುಸ್ತಾನಿ ಗಾಯಕರಾದ ವಿದ್ವಾನ್ ನೌಶಾದ್ ಹಾಗೂ ವಿದ್ವಾನ್ ನಿಶಾದ್ ಹರ್ಲಾಪುರ್ ಇವರಿಂದ ಸ್ವರಸಂಧ್ಯಾ ಜುಗಲ್ಬಂದಿ ಕಾರ್ಯಕ್ರಮ ಜರಗಲಿದೆ ಹಾಗೂ ಗಂಗಾವತಿಯ ನರಸಿಂಹ ಜೋಶಿ ಇವರಿಂದ ಹಾಸ್ಯ ಕಾರ್ಯಕ್ರಮ ನಡೆಯಲಿದೆ.

ಜನವರಿ-6 ಮಂಗಳವಾರ ಬೆಳಿಗ್ಗೆ 10.30 ಗಂಟೆಗೆ ಗವಿಮಠದ ಆವರಣದಲ್ಲಿ ಆಹ್ವಾನಿತ ಕುಸ್ತಿ ಪಟುಗಳಿಂದ ಕುಸ್ತಿ ಪ್ರದರ್ಶನ ಜರುಗಲಿದೆ. ಸಾಯಂಕಾಲ 6:00ಗೆ ಶ್ರೀಮಠದ ಕೈಲಾಸ ಮಂಟಪದಲ್ಲಿ ಭಕ್ತಹಿತಚಿಂತನ ಸಭೆ. ಈ ಕಾರ್ಯಕ್ರಮದ ಸಾನಿಧ್ಯವನ್ನು ಉಪ್ಪಿನಬೆಟಗೇರಿಯ ಪರಮಪೂಜ್ಯ ಶ್ರೀ ಕುಮಾರ ವಿರೂಪಾಕ್ಷ ಮಹಾಸ್ವಾಮಿಗಳು ಹಾಗೂ ಶ್ರೀಕ್ಷೇತ್ರ ಹೆಬ್ಬಳ್ಳಿಯ ಪರಮಪೂಜ್ಯ ಶ್ರೀ ದತ್ತಾವಧೂತ ಗುರುಗಳು ಮತ್ತು ಬೂದುಗುಂಪಾ ಶ್ರೀ ಜಗದ್ಗುರು ಕೊಟ್ಟೂರುಸ್ವಾಮಿ ಶಾಖಾಮಠದ ಪರಮಪೂಜ್ಯ ಶ್ರೀಮನಿಪ್ರ ಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಂಗಳೂರಿನ ಪ್ರಖ್ಯಾತ ಮಕ್ಕಳ ಹೃದ್ರೋಗ ತಜ್ಞರು, ಸಾಹಿತಿ, ಆಧ್ಯಾತ್ಮಿಕ ಸಾಧಕಿ, ಡಾ. ವಿಜಯಲಕ್ಷ್ಮಿ ಈಶ್ವರಪ್ಪ ಬಾಳೇಕುಂದ್ರಿ ವಹಿಸಿಕೊಳ್ಳಲಿದ್ದಾರೆ.

ವೇದಿಕೆ ಮೇಲೆ ಸಂಗೀತ ಕಾರ್ಯಕ್ರಮ ಸಂಗೀತ ಸಂಭ್ರಮದಲ್ಲಿ ಬೆಂಗಳೂರಿನ ವಿದ್ವಾನ್ ಅಂಬಿ ಸುಬ್ರಹ್ಮಣ್ಯಂ ಇವರಿಂದ ಪಿಟೀಲು, ಸಿದ್ದಾರ್ಥ್ ಬೆಳ್ಮಣ್ಣು ಇವರಿಂದ ಗಾಯನ, ವಿದ್ವಾನ್ ಗಿರಿಧರ ಉಡುಪ ಇವರಿಂದ ಘಟಮ್, ಮುಂಬೈನ ಓಜಸ್ ಅಧಿಯಾ ತಬಲಾ ಸಾತ್ ನೀಡಲಿದ್ದಾರೆ ಬೆಂಗಳೂರಿನ ಪ್ರಹ್ಲಾದ ಆಚಾರ್ಯ ಕಲಾವಿದರಿಂದ ಮಾತನಾಡುವ ಗೊಂಬೆ ಕಲಾ ಪ್ರದರ್ಶನ ನಡೆಯಲಿದೆ. ಕಾರ್ಯಕ್ರಮದ ನಂತರ 10.30 ಗಂಟೆಗೆ ಮದ್ದು ಸುಡುವ ಕಾರ್ಯಕ್ರಮ.

ದಿನಾಂಕ ಜನವರಿ-7 ಬುಧವಾರ ಬೆಳಿಗ್ಗೆ 10.30 ಗಂಟೆಗೆ ಗವಿಮಠದ ಆವರಣದಲ್ಲಿ ಆಹ್ವಾನಿತ ತಂಡಗಳಿಂದ ಕಬಡ್ಡಿ ಪಂದ್ಯಾವಳಿಗಳು ನಡೆಯಲಿವೆ. ಸಾಯಂಕಾಲ 6:00ಗೆ ಕೈಮಠದ ಕೈಲಾಸ ಮಂಟಪದಲ್ಲಿ ಸಮಾರೋಪ ಸಮಾರಂಭ. ಕಾರ್ಯಕ್ರಮದ ಸಾನಿಧ್ಯವನ್ನು ಶೇಗುಣಸಿ ವಿರಕ್ತಮಠದ ಪರಮಪೂಜ್ಯ ಶ್ರೀಮನಿಪ್ರ ಮಹಾಂತಪ್ರಭು ಮಹಾಸ್ವಾಮಿಗಳು ಹಾಗೂ ಗದಗ ರಾಜೂರ- ಅಡ್ನೂರ ಬ್ರಹನ್ಮಠದ ಪರಮಪೂಜ್ಯ ಶ್ರೀಮಘಚ ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿಕೊಳ್ಳಲಿದ್ದಾರೆ.

ಬೆಂಗಳೂರಿನ ವೈದ್ಯರು ಲೇಖಕರು ಹಾಗೂ ಕ್ವಿಜ್ ಮಾಸ್ಟರ್ (ಥಟ್ ಅಂತ ಹೇಳಿ) ಕಾರ್ಯಕ್ರಮದ ಖ್ಯಾತಿಯ ಡಾ. ನಾ. ಸೋಮೇಶ್ವರ ಇವರು ಸಮಾರೋಪ ನುಡಿಗಳನ್ನು ನುಡಿಯಲಿದ್ದಾರೆ.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ರಂಗಭೂಮಿ ಕಿರುತೆರೆ ಮತ್ತು ಹಿರಿತೆರೆ ಕಲಾವಿದರಾದ ಎಚ್.ಜಿ.ದತ್ತಾತ್ರೇಯ (ದತ್ತಣ್ಣ) ಇವರು ಭಾಗವಹಿಸಲಿದ್ದಾರೆ. ಬೆಂಗಳೂರಿನ ಮುನಿರಾಜು ಕಡಬಿಗೆರಿ ಹಾಗೂ ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಜನಪದ ಛಾವಡಿ ಕಾರ್ಯಕ್ರಮ ಜರಗಲಿದೆ.ಗಂಗಾವತಿಯ ಬಿ.ಪ್ರಾಣೇಶ್ ಇವರಿಂದ ಹಾಸ್ಯೋತ್ಸವ ನಡೆಯಲಿವೆ.

ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಇತರ ಪರಮಪೂಜ್ಯರು: ಜಾತ್ರಾ ಮಹೋತ್ಸವದಲ್ಲಿ ಹಿರೇಸಿಂದೋಗಿ ಕಪ್ಪತ್ತೇಶ್ವರಮಠದ ಶ್ರೀಮನಿಪ್ರ ಚಿದಾನಂದ ಮಹಾಸ್ವಾಮಿಗಳು, ಮೈನಳ್ಳಿ-ಬಿಕನಹಳ್ಳಿ ಹಿರೇಮಠದ ಶ್ರೀ ಷ.ಬ್ರ.ಸಿದ್ದೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ನಿಡಗುಂದಿಕೊಪ್ಪ ಶಾಖಾಶಿವಯೋಗ ಮಂದಿರದ ಶ್ರೀಮನಿಪ್ರ ಶಿವಬಸವಮಹಾಸ್ವಾಮಿಗಳು, ಬಿಜಕಲ್ ಶ್ರೀಮನಿಪ್ರ ಶಿವಲಿಂಗ ಮಹಾಸ್ವಾಮಿಗಳು, ಭಾಗ್ಯನಗರದ ಶ್ರೀ ಶಂಕರಮಠದ ಶ್ರೀ ಸದ್ಗುರು ಶಿವರಾಮಕೃಷ್ಣನಂದಸ್ವಾಮಿಗಳು, ಹೂವಿನಹಡಗಲಿ ಶಾಖಾ ಗವಿಮಠದ ಪೂಜ್ಯರಾದ ಶ್ರೀಮನಿಪ್ರ ಡಾ.ಹಿರಿಶಾಂತವೀರ ಮಹಾಸ್ವಾಮಿಗಳು, ಸಂತೆಕಲ್ಲೂರು ಮಹಾಂತೇಶ್ವರಮಠದ ಶ್ರೀ ಷಬ್ರ ಮಹಾಂತಲಿಂಗ ಶಿವಾಚಾರ್ಯಮಹಾಸ್ವಾಮಿಗಳು, ಅಮಲಝರಿ-ಮೆಳ್ಳಿಗೇರಿ ಯ ಪರಮಪೂಜ್ಯ ಶ್ರೀ ಜ್ಞಾನಮಯಾನಂದ ಮಹಾಸ್ವಾಮಿಗಳು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.

ಅನ್ವೇಷಣೆ (ಜಿಜ್ಞಾಸುಗಳ ಪಯಣ) ಎಂಬ ಆಧ್ಯಾತ್ಮಿಕ ಕಾರ್ಯಕ್ರಮ: ಈ ಕಾರ್ಯಕ್ರಮದ ಜೊತೆಗೆ ಮೂರುದಿನಗಳ ಕಾಲ ಬೆಳಿಗ್ಗೆ 11.00 ರಿಂದ ಮಧ್ಯಾಹ್ನ 01.30 ರವರೆಗೆ ಶ್ರೀ ಗವಿಮಠದ ಯಾತ್ರಿ ನಿವಾಸದ ಆವರಣದಲ್ಲಿರುವ ಶಾಂತವನದಲ್ಲಿ ಕಜ್ಜಿಡೋಣಿಯ ಪರಮ ಪೂಜ್ಯ ಶ್ರೀ ಕೃμÁ್ಣನಂದ ಶಾಸ್ತ್ರಿಗಳು ಹಾಗೂ ಬೆನಕನಹಳ್ಳಿ ಪರಮಪೂಜ್ಯ ಶ್ರೀ ದೇವಾನಂದ ಶರಣರು ಇವರುಗಳಿಂದ ಅನ್ವೇಷಣೆ (ಜಿಜ್ಞಾಸುಗಳ ಪಯಣ) ಎಂಬ ಆಧ್ಯಾತ್ಮಿಕ ಕಾರ್ಯಕ್ರಮ ಜರುಗಲಿದೆ.

ಶ್ರೀ ಗವಿಸಿದ್ದೇಶ್ವರ ಮಹಾತ್ಮೆ ನಾಟಕ ಪ್ರದರ್ಶನ: ಜನವರಿ-5 ಮತ್ತು 6 ಎರಡು ದಿನಗಳ ಕಾಲ ಹಿರೇಬಗನಾಳ ಗ್ರಾಮದ ಶ್ರೀ ಗವಿಸಿದ್ದೇಶ್ವರ ಸೇವಾ ನಾಟ್ಯ ಸಂಘ ಇವರಿಂದ ಮಠದ ಆವರಣದಲ್ಲಿರುವ ಶ್ರೀ ಗವಿಸಿದ್ದೇಶ್ವರ ಶಿಕ್ಷಣ ಮಹಾವಿದ್ಯಾಲಯದ ಹತ್ತಿರವಿರುವ ಪಾದಗಟ್ಟಿಯ ಹತ್ತಿರ ಶ್ರೀ ಗವಿಸಿದ್ದೇಶ್ವರ ಮಹಾತ್ಮೆ ನಾಟಕ ಪ್ರದರ್ಶನಗೊಳ್ಳಲಿದೆ.

ಬೃಹತ್ ರಕ್ತದಾನ ಶಿಬಿರ: ಶ್ರೀ ಗವಿಸಿದ್ಧೇಶ್ವರ ಜಾತ್ರಾ ಮಹೋತ್ಸವದ ನಿಮಿತ್ಯ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ, ಜಿಲ್ಲಾ ಘಟಕ, ಕೊಪ್ಪಳ. ಹಾಗೂ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದಿಕ ಮಹಾವಿದ್ಯಾಲಯ ಇವರಿಂದ ದಿನಾಂಕ 05/01/2026 ರಿಂದ 08/01/2026 ರವರೆಗೆ 04 ದಿನಗಳ ಕಾಲ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದಿಕ ಮಹಾವಿದ್ಯಾಲಯದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಬೆಳೆಗ್ಗೆ 09:00 ಗಂಟೆಯಿಂದ ಸಾಯಂಕಾಲ 05:00 ಗಂಟೆಯವರೆಗೆ ಹಮ್ಮಿಕೊಳ್ಳಲಾಗಿದೆ. ರಕ್ತದಾನ ಶಿಬಿರವನ್ನು 2015ರಿಂದ ಆಯೋಜಿಸಲಾಗುತ್ತಿದ್ದು 2025ರವರೆಗೆ ಸುಮಾರು 1111 ಶಿಬಿರಗಳನ್ನು ಆಯೋಜಿಲಾಗಿದೆ. ಇದರಿಂದ ಸುಮಾರು 8354 ಜನರು ಇದರ ಸೇವೆಯನ್ನು ಪಡೆದಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande