
ಕೋಲಾರ, ೨೮ ಡಿಸೆಂಬರ್ (ಹಿ.ಸ) :
ಆ್ಯಂಕರ್ : ಸಮಾಜದಲ್ಲಿನ ಅನಿಷ್ಟಗಳು ತೊಲಗಿ, ಶಾಂತಿ ನೆಲಸಬೇಕು, ಮುನಿಸಿಕೊಂಡ ಪ್ರಕೃತಿಯನ್ನು ಶಾಂತಗೊಳಿಸುವ ದೃಷ್ಟಿಯಿಂದ `ಶ್ರೀ ಭೂನೀಳಾ ಸಮೇತ ಶ್ರೀಲಕ್ಷಿö್ಮÃವೆಂಕಟೇಶ್ವರಸ್ವಾಮಿ ಕಲ್ಯಾಣೋತ್ಸವ ಹಮ್ಮಿಕೊಂಡಿದ್ದಾಗಿ ಶ್ರೀಕಣ್ವ ಸೇವಾ ಪ್ರತಿಷ್ಟಾನದ ಪದಾಧಿಕಾರಿಗಳು ತಿಳಿಸಿದರು.
ನಗರದ ಗಾಯತ್ರಿ ಮಂದಿರದಲ್ಲಿ ಭಾನುವಾರ ಶ್ರೀಕಣ್ವ ಸೇವಾ ಪ್ರತಿಷ್ಟಾನ,ಕೋಲಾರ-ಚಿಕ್ಕಬಳ್ಳಾಪುರ ಶುಕ್ಲಯಜುರ್ವೇದ ಮಹಾಸಭಾ ಸಹಯೋಗದಲ್ಲಿ ನಡೆದ `ಶ್ರೀ ಭೂನೀಳಾ ಸಮೇತ ಶ್ರೀಲಕ್ಷಿö್ಮÃವೆಂಕಟೇಶ್ವರ ಕಲ್ಯಾಣೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.
ಶ್ರೀಕಣ್ವ ಸೇವಾ ಪ್ರತಿಷ್ಟಾನದ ಕಾರ್ಯದರ್ಶಿ ಹಾಗೂ ಎಕೆಬಿಎಂಎಸ್ ನಿರ್ದೇಶಕ ಆನಂದಮೂರ್ತಿ ಮಾತನಾಡಿ, ಕಲಿಯುಗದ ಜನರ ಆರಾಧ್ಯದೈವವಾದ ಶ್ರೀನಿವಾಸನ ಆಶೀರ್ವಾದ ಸಕಲರಿಗೂ ಸಿಗಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದು, ತಿರುಮಲಕ್ಕೆ ಹೋಗಿ ಕಲ್ಯಾಣೋತ್ಸವ ಮಾಡಿಸಲು ಎಲ್ಲರಿಂದಲೂ ಸಾಧ್ಯವಿಲ್ಲ, ಅಂತಹವರು ಇಲ್ಲೇ ಆ ಸ್ವಾಮಿಯ ದರ್ಶನ ಭಾಗ್ಯ ಪಡೆಯಬಹುದಾಗಿದೆ. ಲೋಕಕಲ್ಯಾಣ, ಸಮಾಜದಲ್ಲಿ ಶಾಂತಿ ನೆಲಸಲಿ, ಸನಾತನ ಸಂಸ್ಕೃತಿ, ಸಂಪ್ರದಾಯಗಳು ಉಳಿಸುವ ಸಂಕಲ್ಪದೊ0ದಿಗೆ ಈ ಕಾರ್ಯಕ್ರಮ ಮಾಡಿದ್ದು, ನೂರಾರು ದಂಪತಿಗಳು ಪೂಜೆಯಲ್ಲಿ ಪಾಲ್ಗೊಂಡಿದ್ದಾರೆ ಎಂದರು.
ಶ್ರೀಕಣ್ವ ಸೇವಾ ಪ್ರತಿಷ್ಟಾನದ ಅಧ್ಯಕ್ಷ ಎಸ್.ಅಮರನಾಥ್ ಮಾತನಾಡಿ, ಒಳ್ಳೆಯ ಮಳೆ,ಬೆಳೆಗಾಗಿ ಪ್ರಾರ್ಥಿಸೋಣ ಎಂದು ಈ ಕಾರ್ಯಕ್ರಮ ಆಯೋಜಿಸಿದ್ದೇವೆ, ಆಧುನಿಕತೆಯ ಬದುಕಿನಲ್ಲಿ ನಾವಿಂದು ತೇಲುತ್ತಿದ್ದು, ಸಂಸ್ಕಾರ,ಹಿರಿಯರಿಗೆ ಗೌರವ ನೀಡುವುದನ್ನು ಮರೆಯುತ್ತಿದ್ದೇವೆ, ಮೊಬೈಲ್‌ಗೆ ದಾಸರಾಗಿ ಜೀವನ ನಡೆಸುತ್ತಿದ್ದೇವೆ ಇದರಿಂದ ಸ್ವಲ್ಪವಾದರೂ ಹೊರ ಬಂದು ದೇವರ ಕಾರ್ಯದಲ್ಲಿ ಪಾಲ್ಗೊಳ್ಳುವ ಪ್ರಯತ್ನ ಇದಾಗಿದೆ ಎಂದರು.
ಧಾರ್ಮಿಕ ಆಚರಣೆಗಳು ಮನುಷ್ಯನಲ್ಲಿ ಸಂಸ್ಕಾರವನ್ನು ಜಾಗೃತಗೊಳಿಸುತ್ತವೆ ಮತ್ತು ಮನಸ್ಸಿಗೆ ನೆಮ್ಮದಿ ದೊರೆಯುತ್ತದೆ ಎಂದು ತಿಳಿಸಿ, ಲೋಕಕಲ್ಯಾಣವಾಗಲಿ ಎಂದು ಹಾರೈಸಿದರು.
ಕಲ್ಯಾಣೋತ್ಸವದಲ್ಲಿ ನೂರಾರು ದಂಪತಿಗಳು ಹಾಜರಿದ್ದು, ಕಣ್ವ ಪ್ರತಿಷ್ಟಾನದ ಸಹಕಾರ್ಯದರ್ಶಿ ಕೆ.ವಿ.ಶ್ರೀನಾಥ್, ಎಸ್.ಸತ್ಯನಾರಾಯಣ, ಕೆ.ಎನ್.ರಾಘವೇಂದ್ರ, ಬ್ರಾಹ್ಮಣ ಸಂಘದ ಅಧ್ಯಕ್ಷ ಉದಯಕುಮಾರ್, ರವಿಕುಮಾರ್, ಹಿರಿಯ ವಕೀಲ ಸಾ.ನಾ.ಮೂರ್ತಿ, ಕಾಳಹಸ್ತಿಪುರ ಕೆ.ವಿ.ನಾಗರಾಜ್,ಪಿ.ಎಸ್.ಸತ್ಯನಾರಾಯಣರಾವ್,ಶಿವಶಂಕರ್ ಮತ್ತಿತರರಿದ್ದರು.
ಚಿತ್ರ ; ಕೋಲಾರ ನಗರದ ಗಾಯತ್ರಿ ಮಂದಿರದಲ್ಲಿ ಭಾನುವಾರ ಶ್ರೀಕಣ್ವ ಸೇವಾ ಪ್ರತಿಷ್ಟಾನ,ಕೋಲಾರ-ಚಿಕ್ಕಬಳ್ಳಾಪುರ ಶುಕ್ಲಯಜುರ್ವೇದ ಮಹಾಸಭಾ ಸಹಯೋಗದಲ್ಲಿ `ಶ್ರೀ ಭೂನೀಳಾ ಸಮೇತ ಶ್ರೀಲಕ್ಷಿö್ಮವೆಂಕಟೇಶ್ವರ ಕಲ್ಯಾಣೋತ್ಸವ ನಡೆಸಲಾಯಿತು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್