ರಾಜ್ಯ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆ
ಕಾಯಂ
ಫೋಟೋ


ಗದಗ, 28 ಡಿಸೆಂಬರ್ (ಹಿ.ಸ.) :

ಆ್ಯಂಕರ್ : 2025-26 ನೇ ಸಾಲಿನ ಗದಗ ಜಿಲ್ಲಾ ಮಟ್ಟದ ಕರ್ನಾಟಕ ರಾಜ್ಯ ಸರಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳನ್ನು 3-1-2026 ಮತ್ತು 4-1-2026 ರಂದು ಗದಗ ಜಿಲ್ಲಾ ಆಡಳಿತ, ಗದಗ ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಸರ್ಕಾರಿ ನೌಕರರ ಸಂಘ ಜಿಲ್ಲಾ ಘಟಕ ಇವರ ಸಂಯುಕ್ತಾಶ್ರಯದಲ್ಲಿ ನಗರದ ಕೆ.ಎಚ್.ಪಾಟೀಲ ಕ್ರೀಡಾಂಗಣದಲ್ಲಿ ಸಂಘಟಿಸಲಾಗುವುದು.

ಕ್ರೀಡಾಕೂಟದಲ್ಲಿ ಭಾಗವಹಿಸುವ ಸರ್ಕಾರಿ ನೌಕರರು ಡಿಸೆಂಬರ್ 30 ರೊಳಗಾಗಿ ಲಿಂಕ್ ಈ ಲಿಂಕ್ ಮುಖಾಂತರ ನೋಂದಣಿ ಮಾಡಿಕೊಳ್ಳಲು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಶರಣು ಗೋಗೇರಿ ತಿಳಿಸಿದ್ದಾರೆ.

ಆನ್‌ಲೈನ್ ಮೂಲಕವೇ ನೋಂದಣಿ ಮಾಡಿಕೊಳ್ಳತಕ್ಕದ್ದು. ಆಫ್‌ಲೈನ್‌ಗೆ ಅವಕಾಶವಿರುವುದಿಲ್ಲ. ನೋಂದಣಿ ಮಾಡಲು ಕೊನೆಯ ದಿನಾಂಕ 30-12-2025. ಕಡ್ಡಾಯವಾಗಿ ಇಂಗ್ಲೀಷ್ ವರ್ಣಮಾಲೆಯಲ್ಲಿ ಅಕ್ಷರಗಳಲ್ಲಿ ಭರ್ತಿ ಮಾಡಬೇಕು. ಒಬ್ಬ ನೌಕರ 1- ಟ್ರ್ಯಾಕ್ ಮತ್ತು 2- ಫೀಲ್ಡ್ ಅಥವಾ 2-ಟ್ರಾö್ಯಕ್ ಮತ್ತು 1- ಫೀಲ್ಡ್ ಸೇರಿ ಒಟ್ಟು 3 ಆಟಗಳಲ್ಲಿ ಮಾತ್ರ ಭಾಗವಹಿಸತಕ್ಕದ್ದು. ಕ್ರೀಡಾಪಟುಗಳು ದಿ: 3-1-2026 ರ ಬೆಳಿಗ್ಗೆ 8 ಗಂಟೆಗೆ ಹಾಜರಿದ್ದು ಕ್ರೀಡಾ ಸಂಘಟನಾಧಿಕಾರಿಗಳಲ್ಲಿ ಸೇವಾ ಪ್ರಮಾಣ ಪತ್ರ , ಇಲಾಖಾ ಗುರುತಿನ ಚೀಟಿ ಹಾಘೂ ಆಧಾರ ಕಾರ್ಡ ಹಾಜರುಪಡಿಸಿ ವರದಿ ಮಾಡಿಕೊಳ್ಳತಕ್ಕದ್ದು.

ಜಿಲ್ಲಾ ಮಟ್ಟದಲ್ಲಿ ಗುಂಪು ಆಟಗಳಿಗೆ ಪ್ರತಿ ತಾಲೂಕಿನಿಂದ ಒಂದು ತಂಡಕ್ಕೆ ಮಾತ್ರ ಆಟವಾಡಲು ಅವಕಾಶವಿರುತ್ತದೆ. ಕೆಜಿಐಡಿ ನಂಬರ ಹೊಂದಿರುವ ಕನಿಷ್ಠ ಆರು ತಿಂಗಳು ಸೇವಾ ಅವಧಿ ಹೊಂದಿರುವ ಕಾಯಂ ನೌಕರರು ಮಾತ್ರ ಅರ್ಹರು. ಒಬ್ಬ ಸರಕಾರಿ ನೌಕರರು ಯಾವುದಾದರೂ ಒಂದು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ಭಾಗವಹಿಸಲು ಅವಕಾಶವಿರುತ್ತದೆ.

ಕ್ರೀಡಾ ಕೋಟಾದಲ್ಲಿ ಆಯ್ಕೆಯಾದ ನೌಕರರು ಭಾಗವಹಿಸುವಂತಿಲ್ಲ. ಪೊಲೀಸ್ ( ಸಮವಸ್ತ್ರ ಧಾರಿಗಳಿಗೆ ) ಹಾಗೂ ಕ್ರೀಡಾ ಮೀಸಲಾತಿಯಡಿ ಆಯ್ಕೆಯಾದ ಎಲ್ಲ ನೌಕರರು ಭಾಗವಹಿಸಲು ಅರ್ಹರಿರುವುದಿಲ್ಲ.

ಅರಣ್ಯ ಇಲಾಖೆ ಮತ್ತು ಅಗ್ನಿ ಶಾಮಕ ಇಲಾಖೆಗಳ ಬ್ಯಾಜ್ಜ ನಂಬರ ಸಿಬ್ಬಂದಿ ಹಾಘೂ ಲಿಪಿಕ್ ಸಿಬ್ಬಂದಿ ಸಹ ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಬಹುದು. ದೈಹಿಕ ಶಿಕ್ಷಕರು ಸರ್ಕಾರಿ ನೌಕರರ ಕ್ರೀಡಾಕೂಟದಲ್ಲಿ ಭಾಗವಹಿಸಬಹುದು.

ನಿರ್ಣಾಯಕರು ಮತ್ತು ನ್ಯಾಯ ನಿರ್ಣಯ ಸಮಿತಿಯ ತೀರ್ಮಾನವೇ ಅಂತಿಮವಾಗಿರುತ್ತದೆ. ಈ ಫಾರಂ ನ್ನು ಭರ್ತಿ ಮಾಡಲು ಏನಾದರೂ ತೊಂದರೆಯಾದಲ್ಲಿ ನಾಗರಾಜ ಹಳ್ಳಿಕೇರಿ, ಅಧ್ಯಕ್ಷರು, ಕರ್ನಾಟಕ ರಾಜ್ಯ ನೌಕರರ ಸಂಘ , ತಾಲೂಕು ಶಾಖೆ, ಮುಂಡರಗಿ ಇವರ ಮೊ.ಸಂ. 9901135850 ಹಾಗೂ ಐ.ಎ. ಗಾಡಗೋಳಿ , ಕ್ರೀಡಾ ಕಾರ್ಯದರ್ಶಿ 7411701127 ನೇದ್ದಕ್ಕೆ ಸಂಪರ್ಕಿಸಬಹುದಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande