ಪೇಪರ್ ಮತ್ತು ಪ್ಲಾಸ್ಟಿಕ್ ಚೂರುಗಳ ಬ್ಲಾಸ್ಟ್ಗಳನ್ನು ಸಿಡಿಸುವುದು ನಿಷೇಧ
ಹಾಸನ, 28 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಹಾಸನ ಮಹಾನಗರ ವ್ಯಾಪ್ತಿಯ ಸಾರ್ವಜನಿಕರಿಗೆ ಹಾಗೂ ಕಾರ್ಯಕ್ರಮ ಆಯೋಜಕರು ತಾವು ನಡೆಸುವ ಕಾರ್ಯಕ್ರಮ/ಮೆರವಣಿಗೆಗಳಲ್ಲಿ (ಡಿ.ಜೆಗಳಲ್ಲಿ ಪೇಪರ್ ಮತ್ತು ಪ್ಲಾಸ್ಟಿಕ್ ಚೂರುಗಳನ್ನು ಒಳಗೊಂಡ ಪೇಪರ್ ಬ್ಲಾಸ್ಟ್ಗಳನ್ನು ಸಿಡಿಸುತ್ತಿರುವುದರಿಂದ ಸಾರ್ವಜನಿಕ ಸ್ಥಳಗಳ ಸ
ಪೇಪರ್ ಮತ್ತು ಪ್ಲಾಸ್ಟಿಕ್ ಚೂರುಗಳ ಬ್ಲಾಸ್ಟ್ಗಳನ್ನು ಸಿಡಿಸುವುದು ನಿಷೇಧ


ಹಾಸನ, 28 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಹಾಸನ ಮಹಾನಗರ ವ್ಯಾಪ್ತಿಯ ಸಾರ್ವಜನಿಕರಿಗೆ ಹಾಗೂ ಕಾರ್ಯಕ್ರಮ ಆಯೋಜಕರು ತಾವು ನಡೆಸುವ ಕಾರ್ಯಕ್ರಮ/ಮೆರವಣಿಗೆಗಳಲ್ಲಿ (ಡಿ.ಜೆಗಳಲ್ಲಿ ಪೇಪರ್ ಮತ್ತು ಪ್ಲಾಸ್ಟಿಕ್ ಚೂರುಗಳನ್ನು ಒಳಗೊಂಡ ಪೇಪರ್ ಬ್ಲಾಸ್ಟ್ಗಳನ್ನು ಸಿಡಿಸುತ್ತಿರುವುದರಿಂದ ಸಾರ್ವಜನಿಕ ಸ್ಥಳಗಳ ಸ್ವಚ್ಚತೆ ಹಾಗೂ ನಗರ ಸೌಂದರ್ಯಕ್ಕೆ ಧಕ್ಕೆ ಉಂಟಾಗುತ್ತಿರುತ್ತದೆ.

ಇದರಿಂದ ಪೌರಕಾರ್ಮಿಕರಿಗೆ ನಗರ ನೈರ್ಮಲ್ಯ ಕಾರ್ಯದಲ್ಲಿ ಒತ್ತಡ ಹೆಚ್ಚಾಗುತ್ತಿದ್ದು ಮತ್ತು ಜಿಲ್ಲಾಧಿಕಾರಿಗಳ ಸೂಚನೆಯಂತೆ ತಕ್ಷಣದಿಂದ ಜಾರಿಗೆ ಬರುವಂತೆ ಪೇಪರ್ ಮತ್ತು ಪ್ಲಾಸ್ಟಿಕ್ ಚೂರುಗಳನ್ನು ಸಿಡಿಸುವುದನ್ನು (ಪೇಪರ್ ಬ್ಲಾಸ್ಟಿಂಗ್) ಸಂಪೂರ್ಣವಾಗಿ ನಿಷೇಧಿಸಲಾಗಿರುತ್ತದೆ.

ಉಲ್ಲಂಘಿಸಿದಲ್ಲಿ ಕಾರ್ಯಕ್ರಮ ಆಯೋಜಕರ ವಿರುದ್ಧ ಕರ್ನಾಟಕ ಮಹಾನಗರ ಪಾಲಿಕೆಯ ಕಾಯ್ದೆಯನ್ವಯ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದಲ್ಲದೇ ದಂಡ ವಿಧಿಸಲಾಗುವುದು ಎಂದು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande