ಕೃಷಿ ಹೊಂಡಕ್ಕೆ ಬಾಗಿನ ಅರ್ಪಿಸಿದ ಸಚಿವರು
ಗದಗ, 28 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಜಲಾನಯನ ಇಲಾಖೆ ವತಿಯಿಂದ ವಿಶ್ವ ಬ್ಯಾಂಕ ನೆರವಿನ ರಿವಾರ್ಡ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದಂಗವಾಗಿ ಫಲಾನುಭವಿಗಳಿಗೆ ಸವಲತ್ತುಗಳನ್ನು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಎಚ್.ಕೆ. ಪಾಟೀಲ ವಿತರಿಸಿದರು. ಗದಗ ತಾಲೂಕಿನ ಮುಂಡರಗಿ ಪಟ್ಟಣದಲ್ಲಿ ನಡೆದ
ಫೋಟೋ


ಗದಗ, 28 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಜಲಾನಯನ ಇಲಾಖೆ ವತಿಯಿಂದ ವಿಶ್ವ ಬ್ಯಾಂಕ ನೆರವಿನ ರಿವಾರ್ಡ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದಂಗವಾಗಿ ಫಲಾನುಭವಿಗಳಿಗೆ ಸವಲತ್ತುಗಳನ್ನು ಕಾನೂನು ಹಾಗೂ ಸಂಸದೀಯ ವ್ಯವಹಾರಗಳ ಸಚಿವರಾದ ಎಚ್.ಕೆ. ಪಾಟೀಲ ವಿತರಿಸಿದರು.

ಗದಗ ತಾಲೂಕಿನ ಮುಂಡರಗಿ ಪಟ್ಟಣದಲ್ಲಿ ನಡೆದ ಕಾರ್ಯಕ್ರಮದಲ್ಲಿ, ಯೋಜನೆಯಡಿ ನಿರ್ಮಿಸಿದ ಕೃಷಿಹೊಂಡಕ್ಕೆ ಬಾಗಿನ ಅರ್ಪಿಸಲಾಯಿತು. ಕೃಷಿ ಹೊಂಡದಲ್ಕಿ ಮೀನುಮರಿ ಬಿಡಲಾಯಿತು.

ಕೃಷಿ ಹೊಂಡದ ಸುತ್ತ ಸಸಿ ನೆಡುವುದು, ಎರೆಹುಳು ತೊಟ್ಟಿ ಉದ್ಘಾಟನೆ,ಯನ್ನು ಎಚ್.ಕೆ ಪಾಟೀಲ ನೆರವೇರಿಸಿದರು.

ರಿವಾರ್ಡ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದ ನಿಮಿತ್ಯ ಸಿರಿಧಾನ್ಯ ಉತ್ಪನ್ನ ಹಾಗೂ ವಾಣಿಜ್ಯ ಮಳಿಗೆಯನ್ನು ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಎಚ್.ಕೆ. ಪಾಟೀಲ ಉದ್ಘಾಟಿಸಿದರು.. ಹತ್ತಕ್ಕೂ ಹೆಚ್ಚು ಸಾವಯವ ಉತ್ಪನ್ನದಲ್ಲಿ ಸಿದ್ಧಪಡಿಸಿದ ಆಹಾರ ಪದಾರ್ಥಗಳ ಮಳಿಗೆ ಉದ್ಘಾಟನೆಗೊಂಡವು.

ಪ್ರಮುಖವಾಗಿ ರಿವಾರ್ಡ ಯೊಜನೆಯ ಫನಾನುಭವಿಗಳಿಗೆ ಜೆನು ಪೆಟ್ಟಿಗೆ, ಚಾಪ ಕಟರ್ ವಿತರಣೆ, ಕುರಿ, ಕೋಳಿಮರಿ, ತುಂತುರು ನಿರಾವರಿ ಫರಿಕರಗಳನ್ನು ವಿತರಿಸಿದರು.

ಈ ಸಂದರ್ಭದಲ್ಲಿಮಾಜಿ ಶಾಸಕರಾದ ಡಿ.ಆರ್ಜ. ಪಾಟೀಲ, ಜಲತಜ್ಷ ರಾಜೇಂದ್ರಸಿಂಗ್, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಚೇತನಾ ಪಾಟೀಲ, ಸ್ಪೂರ್ತಿ ಜಿ.ಎಸ್., ಎಸ್.ಎಂ. ನೀಲಗುಂದ, ಎಂ.ಡಿ. ಬಟ್ಟೂರ, ಷಣ್ಮುಖಪ್ಪ ಬಡ್ನಿ, ಎನ್.ಆರ್. ದೇಶಪಾಂಡೆ, ಕೆ.ಎಲ್. ಕರಿಗೌಡ್ರ, ಇಮಾಮಸಾಬ ಶೇಖ, ಬಿ.ವ್ಹಿ. ಸುಂಕಾಪೂರ, ಸೇರಿದಂತೆ ಮತ್ತಿತರರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande