ಶ್ರೀ ಬಾಬಾ ವಿದ್ಯಾ ಸಂಸ್ಥೆ ಶಾಲೆಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ
ಶ್ರೀ ಬಾಬಾ ವಿದ್ಯಾ ಸಂಸ್ಥೆ ಶಾಲೆಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ
ಕೋಲಾರ ನಗರದ ಬಾಬಾ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಕಣ್ಣಿನ ತಪಾಸಣೆ ನಡೆಯಿತು.


ಕೋಲಾರ, ೨೮ ಡಿಸೆಂಬರ್ (ಹಿ.ಸ) :

ಆ್ಯಂಕರ್ : ಇಂದಿನ ಸಮಾಜ ಅಭಿವೃದ್ಧಿಯತ್ತಾ ಸಾಗುತ್ತಿದೆ, ನಿಜ. ಆದರೆ ಮೂಲಭೂತವಾಗಿ ಬಡವ- ಶ್ರೀಮಂತ, ಅಕ್ಷರಸ್ಥ- ಅನಕ್ಷರಸ್ಥ, ಆರೋಗ್ಯ ಸೇವೆಯನ್ನು ಪಡೆಯಲು ಶಕ್ತರಾದ ಹಾಗೂ ಅಶಕ್ತರಾದ ನಡುವಿನ ಕಂದಕಮಾತ್ರ ಹೆಚ್ಚುತ್ತಲೆ ಸಾಗಿದೆ. ಇಂತಹ ಸನ್ನಿವೇಶದಲ್ಲಿ ಈ ರೀತಿಯ ಸಮಾಜಮುಖಿ ಉಚಿತ ಸೇವೆಗಳು ಸ್ತುತ್ಯರ್ಹ ಎಂದು ಶ್ರೀ ಬಾಬಾ ವಿದ್ಯಾ ಸಂಸ್ಥೆಯ ಅಧ್ಯಕ್ಷ ರಾಮ ಚಂದ್ರ ಗೌಡ ತಿಳಿಸಿದರು.

ನೇತ್ರದೀಪ್ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ಕೋಲಾರ, ಘಟಕ, ಶ್ರೀ ಬಾಬಾ ವಿದ್ಯಾ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ‘ಉಚಿತ ನೇತ್ರ ತಪಾಸಣಾ ಶಿಬಿರವನ್ನು ಕೋಲಾರ ಜಿಲ್ಲಾ ಕೈಗಾರಿಕೆಗಳ ಸಂಘದ ಅಧ್ಯಕ್ಷರಾದ ನಾಗಶೇಖರ್ ಉದ್ಘಾಟಿಸಿದರು.

ಸಮಾಜದ ಪರಿಕಲ್ಪನೆಯಲ್ಲಿ ಜರಗುವ ಪ್ರತಿ ಕೆಲಸಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ಸೇರಲು ಸಹಕಾರಿ. ಶ್ರೀ ಬಾಬಾ ವಿದ್ಯಾ ಸಂಸ್ಥೆಯ ಪ್ರತಿ ಕಾರ್ಯಕ್ರಮಗಳು ಸದಾ ಇಂತಹ ಯೋಚನೆಗೆ ಪೂರಕವಾಗಿ ನಡೆಯುತ್ತವೆ. ಇಂದು ನಡೆಯುತ್ತಿರುವ ಉಚಿತ ನೇತ್ರಾ ತಪಾಸಣಾ ಶಿಬಿರ ಯಶಸ್ವಿಗಾಗಿ ಜರುಗಲಿ ಎಂದರು.

ಈ ಶಿಬಿರದಲ್ಲಿ ೨೫೦ ಜನರು ಪಾಲ್ಗೊಂಡು, ೩೮ ಜನರಿಗೆ ಉಚಿತ ಕನ್ನಡಕ, ೭ ಜನರಿಗೆ ಶಸ್ತ್ರ ಚಿಕಿತ್ಸೆಯ ಸೇವೆಯನ್ನು ನೀಡಲಾಗಿದೆ. ಇಂದು ಇಂತಹ ಮನಸ್ಥಿತಿ ಹಾಗು ಧೋರಣೆಯನ್ನು ಹೊಂದಿರುವ ನೇತ್ರದೀಪ್ ಆಸ್ಪತ್ರೆ ಹಾಗೂ ಶ್ರೀ ಬಾಬಾ ವಿದ್ಯಾ ಸಂಸ್ಥೆ ಶಾಲೆ ನಮ್ಮೊಡನೆ ಕೈಜೋಡಿಸಿರುವುದು ಸಂತೋಷದ ವಿಷಯ. ಮುಂದಿನ ದಿನಗಳಲ್ಲಿ ಆರೋಗ್ಯಕ್ಕೆ ಸಂಬ0ದಿಸಿದ ವಿವಿಧ ಶಿಬಿರಗಳನ್ನು ಹಮ್ಮಿಕೊಳ್ಳಲು ನಮ್ಮ ಶಿಕ್ಷಣ ಪ್ರತಿಷ್ಠಾನ ಸದಾ ಸಿದ್ದ ಎಂದು ಆಡಳಿತಾಧಿಕಾರಿಗಳಾದ ವೇಣು ಸುಂದರ್ ಗೌಡ ರವರು ತಿಳಿಸಿದರು.

ಜಗತ್ತಿನ ಸೌಂದರ್ಯ ಸವಿಯಲು ಕಣ್ಣು ಅತೀ ಮುಖ್ಯ. ಮಾನವನ ದೇಹದಲ್ಲಿ ಮೆದುಳಿನ ನಂತರ ಕಣ್ಣು ಅತೀ ಸೂಕ್ಷ್ಮ ಅಂಗ. ಕಣ್ಣಿನ ಆರೈಕೆಗೆ ಪ್ರತಿಯೊಬ್ಬರೂ ಜಾಗೃತಿ ವಹಿಸಬೇಕು. ಕಣ್ಣಿನ ಶಸ್ತ್ರ ಚಿಕಿತ್ಸೆ ನಂತರ ಸರಿಯಾದ ಮುಂಜಾಗೃತ ಕ್ರಮಗಳು ಅತೀ ಮುಖ್ಯ. ಅದನ್ನು ಸರಿಯಾಗಿ ನಿಭಾಯಿಸಬೇಕು ಎಂದರು.

ಈ ವೈದ್ಯಕೀಯ ಶಿಬಿರದಲ್ಲಿ ಕಣ್ಣಿನ ಸಂಪೂರ್ಣ ತಪಾಸಣೆ, ಅಗತ್ಯವುಳ್ಳವರಿಗೆ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ನೇತ್ರದಾನ ಮಾಡಲಿಚ್ಚಿಸುವವರಿಗೆ ಅರ್ಜಿ ನೋಂದವಣೆಗೆ ಅವಕಾಶ, ತಪಾಸಣೆ ದಿನವೇ ಕನ್ನಡಕ ನೋಂದಣಿ ಮಾಡುವವರಿಗೆ ಉಚಿತವಾಗಿ ಕನ್ನಡಕ ವಿತರಣೆ ಮುಂತಾದ ಸೌಲಭ್ಯಗಳನ್ನು ನೀಡಲಾಯಿತು.

ಈ ಶಿಬಿರದಲ್ಲಿ ೧೭೯ ಸಾರ್ವಜನಿಕರು ಪಾಲ್ಗೊಂಡರು. ಇವರಲ್ಲಿ ೯೩ ಜನರಿಗೆ ಕನ್ನಡಕದ ವ್ಯವಸ್ಥೆಯನ್ನು ಮಾಡಲಾಯಿತು. ೩೩ ಜನರಿಗೆ ಕಣ್ಣಿನ ಪೊರೆ ಸರ್ಜರಿಗೆ ನೋಂದಯಿಸಲಾಗಿದೆ. ೫ ಜನರು ನೇತ್ರದಾನ ಮಾಡಲು ನೋಂದಾಯಿಸಿಕೊ0ಡರು.

ಶ್ರೀ ಬಾಬಾ ವಿದ್ಯಾ ಸಂಸ್ಥೆಯ ಬೋಧಕ ಸಿಬ್ಬಂದಿ, ವಿದ್ಯಾರ್ಥಿಗಳು, ವೈದ್ಯರು ಪಾಲ್ಗೊಂಡಿದ್ದರು.

ಚಿತ್ರ : ಕೋಲಾರ ನಗರದ ಬಾಬಾ ವಿದ್ಯಾ ಸಂಸ್ಥೆಯಲ್ಲಿ ವಿದ್ಯಾರ್ಥಿಗಳ ಕಣ್ಣಿನ ತಪಾಸಣೆ ನಡೆಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande