ಸಹಕಾರಿ ಸಂಘಗಳ ಬೆಳವಣಿಗೆಯಿಂದ ಗ್ರಾಮೀಣ ಜನರ ಬದುಕು ಹಸನು : ಸಚಿವರು
ಗದಗ, 26 ಡಿಸೆಂಬರ್ (ಹಿ.ಸ.) : ಆ್ಯಂಕರ್ : ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ನೀಡುವ ಮೂಲಕ ಕೃಷಿ ಹಾಗೂ ಕೃಷಿ ಉಪಕಸಬುಗಳಿಗೆ ಸಹಕಾರಿ ಸಂಘಗಳು ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ವಿತರಿಸುತ್ತಿದ್ದು ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಿದೆ ಹಾಗೂ ಗ್ರಾಮದಲ್ಲಿ ಸಹಕ
ಫೋಟೋ


ಗದಗ, 26 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ನೀಡುವ ಮೂಲಕ ಕೃಷಿ ಹಾಗೂ ಕೃಷಿ ಉಪಕಸಬುಗಳಿಗೆ ಸಹಕಾರಿ ಸಂಘಗಳು ಸರ್ಕಾರ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ವಿತರಿಸುತ್ತಿದ್ದು ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಿದೆ ಹಾಗೂ ಗ್ರಾಮದಲ್ಲಿ ಸಹಕಾರಿ ಸಂಘಗಳ ಬೆಳವಣಿಗೆಯಿಂದ ಗ್ರಾಮೀಣ ಜನರ ಜೀವನ ಹಸನಾಗುವುದು ಎಂದು ರಾಜ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು, ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್.ಕೆ. ಪಾಟೀಲ ಹೇಳಿದರು.

ಗದಗ ತಾಲ್ಲೂಕಿನ ಮುಳಗುಂದ ಸಮೀಪದ ಸೊರಟೂರು ಗ್ರಾಮದಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಯೋಗದಲ್ಲಿ 500 ಮೆಟ್ರಿಕ್ಟ ಟನ್ ಸಾಮರ್ಥ್ಯದ ಗೊಡೌನ್ ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿ ಸಚಿವರು ಮಾತನಾಡಿದರು.

ಗ್ರಾಮದಲ್ಲಿನ ಸಹಕಾರಿ ಸಂಘಗಳು ರಾಜಕೀಯ ಹೊರತುಪಡಿಸಿ ಸ್ಪರ್ಧಾತ್ಮಕ ಮನೋಭಾವದಿಂದ ಬೆಳೆಯುವಂತಾಗಬೇಕು ಅಂಧಾಗ ಮಾತ್ರ ಸಹಕಾರಿ ಚಳುವಳಿಗೆ ಬಲ ಬಂದಂತಾಗುತ್ತದೆ ಎಂದರು.

ರೈತರು ಹಾಗೂ ಬಡ ಕೃಷಿಕರು ಹೆಚ್ಚಿನ ಬಡ್ಡಿಯಲ್ಲಿ ಸಾಲವನ್ನು ಪಡೆದು ಕೃಷಿ ಮಾಡುವುದು ಇಂದಿನ ದಿನಮಾನಗಳಲ್ಲಿ ಲಾಭದಾಯಕವಲ್ಲ ಆ ನಿಟ್ಟಿನಲ್ಲಿ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯವನ್ನು ಪಡೆಯಬೇಕು. ಆ ನಿಟ್ಟಿನಲ್ಲಿ ಸರ್ಕಾರ ಬಡವರ ಪರ ಹಲವಾರು ಯೋಜನೆಗಳನ್ನು ರೂಪಿಸಿದ್ದು ಆ ಎಲ್ಲ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಳ್ಳುವುದರ ಜೊತೆಗೆ ಸೊರಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲ ನಾಲ್ಕು ಸಹಕಾರಿ ಸಂಘಗಳಿಗೆ ಸೌಲಭ್ಯ ಕಲ್ಪಿಸಲಾಗುವುದು. ಶತಮಾನವನ್ನು ಪೂರೈಸಿರುವ ಸೊರಟೂರು ಸಹಕಾರಿ ಸಂಘ ಮಲ್ಲಪ್ಪ ಕಲ್ಗುಡಿ ಅವರ ನೇತೃತ್ವದಲ್ಲಿ ಹೆಚ್ಚು ಕ್ರಿಯಾಶೀಲವಾಗಿ ಕೆಲಸ ನಿರ್ವಹಿಸುತ್ತಿದ್ದು ಎಲ್ಪ ಫೈ ಪೋಟಿಯಿಂದ ಬೆಳವಣಿಗೆ ಹೊಂದಬೇಕು ಎಂದರು.

ಮುಖಂಡರಾದ ಭದ್ರೇಶ ಕುಸುಲಾಪೂರ ಮಾತನಾಡಿ ಗ್ರಾಮೀಣ ಸಹಕಾರಿ ಸಂಘಗಳ ಬೆಳವಣಿಗೆಗೆ ಸಚಿವರಾದ ಎಚ್. ಕೆ. ಪಾಟೀಲ ಅವರ ಸಹಾಯದಿಂದ ಎಲ್ಲ ಸಂಘಗಳು ವಿವಿಧ ಹಲವು ಕಾರ್ಯಕ್ರಮಗಳನ್ನು ರೈತರಿಗೆ ನೀಡುತ್ತಿದ್ದು ಸೊರಟೂರಿನ ಒಟ್ಟು ನಾಲ್ಕು ಸಹಕಾರಿ ಸಂಘಗಳು ಸ್ಥಾಪನೆಯಾಗಿದ್ದು ಆ ಸಂಘಗಳು ಬೆಳವಣಿಗೆ ಹೊಂದಲು ಅನುದಾನವನ್ನು ಒದಗಿಸಬೇಕು ಎಂದರು.

ಧಾರವಾಡ ಕೆಸಿಸಿ ಬ್ಯಾಂಕ್ ನಿರ್ದೇಶಕ ಸೊರಟೂರ ಸಹಕಾರಿ ಸಂಘದ ಅಧ್ಯಕ್ಷರಾದ ಮಲ್ಲಪ್ಪ ಕಲ್ಲಗುಡಿ ಮಾತನಾಡಿ ಸದ್ಯ 47 ಲಕ್ಷ ರೂಪಾಯಿ ವಿಶೇಷ ಅನುದಾನದ ಅಡಿಯಲ್ಲಿ 500 ಮೆಟ್ರಿಕ್ ಟನ್ ಸಾಮರ್ಥ್ಯದ ಗೋಡನ್ ನಿರ್ಮಾಣಕ್ಕೆ ಭೂಮಿಗೆ ನೆರವೇರಿದ್ದು ಮುಂದಿನ ದಿನಗಳಲ್ಲಿ ಒಂದು ಕೋಟಿ ರೂಪಾಯಿ ನೆಪೆಡ್ ಸಂಸ್ಥೆಯ ವಿಶೇಷ ಅನುದಾನದಡಿಯಲ್ಲಿ ದೊಡ್ಡ ಪ್ರಮಾಣದ ಗುಡೌನ್ ನಿರ್ಮಾಣ ಮಾಡಲು ಗುರಿ ಹೊಂದಲಾಗಿದೆ ಎಂದರು.

ಗದಗ ತಾಲೂಕಿನಲ್ಲಿ ಒಟ್ಟು 56 ಸಹಕಾರಿ ಸಂಘಗಳು ಸ್ಥಾಪನೆಯಾಗಿದ್ದು ಎಲ್ಲ ಸಹಕಾರಿ ಸಂಘಗಳ ರೈತ ಪರವಾಗಿ ಕಾರ್ಯನಿರ್ವಹಿಸುತ್ತಿದ್ದು ಸಚಿವ ಹೆಚ್ ಕೆ ಪಾಟೀಲ ಹಾಗೂ ಡಿ ಆರ್ ಪಾಟೀಲರ ಮಾರ್ಗದರ್ಶನದಲ್ಲಿ ಸಹಕಾರಿ ಸಂಘಗಳು ಜನೋಪಯೋಗಿ ಕೆಲಸ ಮಾಡುತ್ತಿವೆ ಎಂದರು.

ಅವಿಭಜಿತ ಧಾರವಾಡ ಜಿಲ್ಲೆ ಮಧ್ಯವರ್ತಿ ಸಹಕಾರಿ ಬ್ಯಾಂಕ ಆಗಿ ಸ್ಥಾಪನೆಯಾಗಿದ್ದ ಧಾರವಾಡದ ಕೆಸಿಸಿ ಬ್ಯಾಂಕ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದ ಸಂದರ್ಭದಲ್ಲಿ ಸಚಿವರಾದ ಹೆಚ್ ಕೆ ಪಾಟೀಲ ಹಾಗೂ ಡಿ ಆರ್ ಪಾಟೀಲ ಅವರ ವಿಶೇಷ ಕಾಳಜಿಯ ಮೂಲಕ ಪಟ್ಟಣ ಅರ್ಬನ್ ಬ್ಯಾಂಕ ಪೆಡರೇಷನ್ ವತಿಯಿಂದ 48 ಕೋಟಿ ರೂಗಳ ಠೇವಣಿಯನ್ನು ಇಡುವ ಮೂಲಕ ಧಾರವಾಡ ಕೆಸಿಸಿ ಬ್ಯಾಂಕ್ ಪುನಶ್ಚೇತನ ಗೊಳಿಸುವಲ್ಲಿ ಎಚ್ ಕೆ ಪಾಟೀಲರು ದೊಡ್ಡ ಸಹಾಯ ಮಾಡಿದ್ದರೂ ಎಂದು ಕೆಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಪ್ಪ ಕಲ್ಗುಡಿ ಹೇಳಿದರು. ಇಂದು ಧಾರವಾಡ ಕೆಸಿಸಿ ಬ್ಯಾಂಕ್ ಎಷ್ಟು ಎತ್ತರದಲ್ಲಿ ಬೆಳೆಯಲು ಹಾಗೂ ಏಷ್ಯಾ ಖಂಡದಲ್ಲಿ ಮೊದಲು ಸ್ಥಾಪನೆಯಾದ ಕಣಗಿನಹಾಳ ಸಹಕಾರಿ ಸಂಘ ಪುನಸ್ಚೇತನಗೊಳ್ಳಲು ಎಚ್ ಕೆ ಪಾಟೀಲರು ಮಾಡಿದ ಸಹಾಯ ಎಂದು ಮರೆಯಲು ಸಾಧ್ಯವಿಲ್ಲ ಎಂದರು.

ರಾಜ್ಯದ ತಲಾ ಆದಾಯದಲ್ಲಿ ದಕ್ಷಿಣ ಕರ್ನಾಟಕ ಹೆಚ್ಚಿದ್ದು ಉತ್ತರ ಕರ್ನಾಟಕ ಅತಿ ಕಡಿಮೆ ಇದ್ದು ಗದಗ ಜಿಲ್ಲೆಯಲ್ಲಿ ಪ್ರತಿ ವ್ಯಕ್ತಿಯ ತಲಾ ಆದಾಯ ಒಂದು ಲಕ್ಷ ತೊಂಬತ್ತು ನಾಲ್ಕು ಸಾವಿರ ರೂಗಳು ಇದ್ದು ಅದೇ ದಕ್ಷಿಣ ಕರ್ನಾಟಕದ ಕೋಲಾರದಲ್ಲಿ ಇದರ ನಾಲ್ಕು ಪಟ್ಟು ಅಂದರೆ ನಾಲ್ಕು ಲಕ್ಷ ಐವತ್ತು ಸಾವಿರದಷ್ಟು ತಲಾ ಆದಾಯವಿದ್ದು ನಾವು ಅವರಂತೆ ತಲಾ ಆದಾಯ ಹೆಚ್ಚಿಸಲು ಗ್ರಾಮೀಣ ಭಾಗದಲ್ಲಿ ರೈತರು ಹೆಚ್ಚು ಹೈನೋಧ್ಯಮ ಕೃಷಿಯನ್ನು ಕೈಗೊಳ್ಳಬೇಕು ಆ ನಿಟ್ಟಿನಲ್ಲಿ ಸೊರಟೂರಿನ ನಾಲ್ಕು ಸಹಕಾರಿ ಸಂಘಗಳು ಎರಡು ವರ್ಷದಲ್ಲಿ 500 ಜನರಿಗೆ ಹೈನುಗಾರಿಕೆ ಕೈಗೊಳ್ಳಲು ಸಾಲ ಸೌಲಭ್ಯ ನೀಡಿ ಸುಧಾರಿತ ಹೈನುಗಾರಿಕೆ ಕೈಗೊಳ್ಳಲು ಸಹಕಾರಿ ಸಂಘಗಳು ರಚನಾತ್ಮಕ ಕೆಲಸ ಮಾಡಬೇಕು ಎಂದರು.

ಈ ಸಂದರ್ಭದಲ್ಲಿ ಡಿ.ಆರ್. ಪಾಟೀಲ, ಗುರಣ್ಣ ಬಳಗಾನೂರ, ಸಿದ್ದು ಪಾಟೀಲ, ಪ್ರಮೋದ ಇನಾಮದಾರ, ಸಹಕಾರಿ ಸಂಘದ ಉಪಾಧ್ಯಕ್ಷರಾದ ಪರಸಪ್ಪ ಮಲ್ಲಾರಿ, ಫಕೀರಪ್ಪ ಮಟ್ಟಿ ಪರಶುರಾಮ ಹೂಗಾರ, ರಾಮಣ್ಣ ತಳವಾರ, ಮಹಾಂತೇಶ್ಹ ಹಳ್ಳಿ, ಮುರುಗೇಶ ಕುಸಲಾಪರ, ಚನ್ನಪ್ಪ ಕುಸಲಾಪೂರ, ಮೆಹಬೂಬ್ಸಸಾಬ ಬಾಬುಖಾನವರ, ನೀಲವ್ವ ಪಾಟಿಲ ಚೆನ್ನವ್ವ ತಳವಾರ, ಬಸವರಾಜ ಗಾಣಿಗೇರ, ಶರೀಫಸಾಬ ಅತ್ತಿಕಟ್ಟಿ, ವೀರೇಶ ಬೋಳ್ನವರ, ಮಂಜು ಗದುಗಿನ, ತಿರಕಪ್ಪ ಬೋಳನವರ, ವೆಂಕನಗೌಡ ಪಾಟೀಲ ಮಾನಪ್ಪ ಲಮಾಣಿ, ಮೇಲಗಿರಿಗೌಡ ಪಾಟೀಲ ಜಯ ಶ್ರೀ ಬಂಕಾಪುರ, ಮೆಹಬೂಬ ಸಾಬ ಯಕಲಾಸಪೂರ, ಶಿವಮೂರ್ತಿ ಕರಿಗೌಡ್ರ,, ರಾಮಣ್ಣ ಶಲಿಯಪ್ಪನವರ, ಅಡಿವೆಪ್ಪ ಕನ್ನೂರ, ಮಹದೇವಪ್ಪ ಹಡಪದ ಸೇರಿದಂತೆ ಮತ್ತಿತರರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande