ಶಾಮನೂರು ಶಿವಶಂಕರಪ್ಪ ಆದರ್ಶ ಪಾಲನೆಗೆ ಬೊಮ್ಮಾಯಿ ಕರೆ
ದಾವಣಗೆರೆ, 26 ಡಿಸೆಂಬರ್ (ಹಿ.ಸ.) : ಆ್ಯಂಕರ್ : ದಿವಂಗತ ಶಾಮನೂರು ಶಿವಶಂಕರಪ್ಪ ಅವರು ಕರ್ನಾಟಕಕ್ಕೆ ಆದರ್ಶಮಯ ಜೀವನ ಬಿಟ್ಟು ಹೋಗಿದ್ದಾರೆ‌ ಅವರ ಆದರ್ಶಗಳನ್ನು ಎಲ್ಲರೂ ಪಾಲನೆ ಮಾಡೋಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ನುಡಿನಮನ ಸಲ್ಲಿಸಿದರು. ದಾವಣಗೆರೆಯಲ್ಲಿ ಶುಕ್ರವಾರ ನಡೆ
Bommai


ದಾವಣಗೆರೆ, 26 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ದಿವಂಗತ ಶಾಮನೂರು ಶಿವಶಂಕರಪ್ಪ ಅವರು ಕರ್ನಾಟಕಕ್ಕೆ ಆದರ್ಶಮಯ ಜೀವನ ಬಿಟ್ಟು ಹೋಗಿದ್ದಾರೆ‌ ಅವರ ಆದರ್ಶಗಳನ್ನು ಎಲ್ಲರೂ ಪಾಲನೆ ಮಾಡೋಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ನುಡಿನಮನ ಸಲ್ಲಿಸಿದರು.

ದಾವಣಗೆರೆಯಲ್ಲಿ ಶುಕ್ರವಾರ ನಡೆದ ಅಖಿಲ ಭಾರತ ವೀರಶೈವ-ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರು, ಮಾಜಿ ಸಚಿವರು, ಶಾಸಕರಾಗಿದ್ದ ಲಿಂಗೈಕ್ಯ ಡಾ. ಶಾಮನೂರು ಶಿವಶಂಕರಪ್ಪ ಅವರ ಶಿವಗಣಾರಾಧನೆ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕ್ಯಾಲೆಂಡರ್ ಬಿಡುಗಡೆ ಮಾಡಿ ಮಾತನಾಡಿದರು.

ಶಾಮನೂರು ಶಿವಶಂಕರಪ್ಪ ಅವರು ಬಸವಣ್ಣನವರ ಕಾಯಕ ನಿಷ್ಠೆ ಮತ್ತು ದಾಸೋಹ ನಡೆಸಿಕೊಟ್ಟವರು. ಅವರಿಗೆ ಸಮಯ ಪ್ರಜ್ಞೆ ಸ್ಥಿತ ಪ್ರಜ್ಞೆ ಇದ್ದಿದ್ದರಿಂದ ವ್ಯಾಪಾರದಲ್ಲೂ ಯಶಸ್ವಿಯಾದರು. ಸಾಮಜಿಕ ಮತ್ತು ರಾಜಕೀಯ ರಂಗದಲ್ಲೂ ಯಶಸ್ಸಿ ಆಗಿದ್ದಾರೆ. ಬಾಪೂಜಿ ಸಂಸ್ಥೆಯನ್ನು ಕಟ್ಟಿ ಬೆಳೆಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ತೆಗೆದುಕೊಂಡು ಹೋಗಿರುವ ಖ್ಯಾತಿ ಶಾಮನೂರು ಅವರಿಗಿದೆ. ಅದರಲ್ಲಿ ನೂರಾರು ಜನರಿಗೆ ಉದ್ಯೋಗ ಲಕ್ಷಾಂತರ ಜನರಿಗೆ ಆರೊಗ್ಯ ಭಾಗ್ಯ ಕೊಟ್ಟಿದ್ದಾರೆ. ಶಿವಶಂಕರಪ್ಪ ಅವರು ಲೆಕ್ಕದಲ್ಲಿ ಬಹಳ ಪಕ್ಕಾ ಇದ್ದರು. ಯಾರಿಗಾದರೂ ಏನಾದರು ಕೊಡುವುದಿದ್ದರೆ ನೆನಪು ಮಾಡಿ ಕೊಡುತ್ತಿದ್ದರು. ತೆಗೆದುಕೊಳ್ಳುವುದಿದ್ದರೆ ಅಷ್ಟೇ ನೆನಪು ಮಾಡಿ ತೆಗೆದುಕೊಳ್ಳುತ್ತಿದ್ದರು. ಅವರು ವಯಸ್ಸಿಗೆ ಮೀರಿ ಸ್ನೇಹ ಬೆಳೆಸಿದ್ದರು. ನಾವು ವಯಸ್ಸಿನಲ್ಲಿ ಸಣ್ಣವರಿದ್ದರೂ ಮನಸ್ಸು ಬಿಚ್ಚಿ ಮಾತನಾಡುವ ವಾತಾವರಣ ನಿರ್ಮಾಣ ಮಾಡುತ್ತಿದ್ದರು. ಅವರಿಗೆ ಹಾಸ್ಯ ಪ್ರಜ್ಞೆ ಬಹಳ ಇತ್ತು. ಜೀವನ ಉತ್ಸಾಹವನ್ನು ಸದಾಕಾಲ ಜೀವಂತ ಇಟ್ಟಿದ್ದರು. ಅವರ ಬದುಕು ಪೂರ್ಣಮಯ ಬದುಕು. ಅವರ ಬದುಕು ದಾವಣಗೆರೆಗೆ ಮಾತ್ರ ಸೀಮಿತ ಅಲ್ಲ ಇಡೀ ಕರ್ನಾಟಕಕ್ಕೆ ಆದರ್ಶಮಯ ಜೀವನ ಬಿಟ್ಟು ಹೋಗಿದ್ದಾರೆ‌ ಅವರ ಆದರ್ಶಗಳನ್ನು ಪಾಲನೆ ಮಾಡೋಣ ಎಂದು ನುಡಿನಮನ ಸಲ್ಲಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande