ರಾಯಚೂರು ಮಹಾನಗರ ಪಾಲಿಕೆಯಿಂದ ಆಕ್ಷೇಪಣೆ ಆಹ್ವಾನ
ರಾಯಚೂರು, 26 ಡಿಸೆಂಬರ್ (ಹಿ.ಸ.) : ಆ್ಯಂಕರ್ : ರಾಯಚೂರು ಮಹಾನಗರ ಪಾಲಿಕೆಯ ವಾರ್ಡ್ ನಂ.35 ನಿವೇಶನ ಮುನ್ಸಿಪಾಲ್ ನಂ.1-11-49/35/1 & 1-11-49/37/2ರಲ್ಲಿ ಡಾ.ನರಸಿಂಹಲು ನಂದಿನಿ ಮೆಮೊರೇಬಲ್ ಟ್ರಸ್ಟ್, ಶಿಕ್ಷಣ ಸಂಸ್ಥೆ, ಕಟ್ಟಡ ನಿರ್ಮಾಣ ಮಾಡಲು ಡಾ.ಶ್ರೀನರಸಿಂಹಲು ನಂದಿನಿ ಅವರು ಅರ್ಜಿ ಸಲ್
ರಾಯಚೂರು ಮಹಾನಗರ ಪಾಲಿಕೆಯಿಂದ ಆಕ್ಷೇಪಣೆ ಆಹ್ವಾನ


ರಾಯಚೂರು, 26 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ರಾಯಚೂರು ಮಹಾನಗರ ಪಾಲಿಕೆಯ ವಾರ್ಡ್ ನಂ.35 ನಿವೇಶನ ಮುನ್ಸಿಪಾಲ್ ನಂ.1-11-49/35/1 & 1-11-49/37/2ರಲ್ಲಿ ಡಾ.ನರಸಿಂಹಲು ನಂದಿನಿ ಮೆಮೊರೇಬಲ್ ಟ್ರಸ್ಟ್, ಶಿಕ್ಷಣ ಸಂಸ್ಥೆ, ಕಟ್ಟಡ ನಿರ್ಮಾಣ ಮಾಡಲು ಡಾ.ಶ್ರೀನರಸಿಂಹಲು ನಂದಿನಿ ಅವರು ಅರ್ಜಿ ಸಲ್ಲಿಸಿದ್ದು, ಅಕ್ಕ-ಪಕ್ಕದ ಹಾಗೂ ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆ ಇದ್ದಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಲಿಖಿತವಾಗಿ ಸಲ್ಲಿಸಬಹುದಾಗಿದೆ ಎಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.

ಈ ಜಮೀನು ಶೈಕ್ಷಣಿಕ ಉದ್ದೇಶಕ್ಕಾಗಿ ಏಕ ನಿವೇಶನ ಅನುಮೋದನೆಯನ್ನು ಮಾನ್ಯ ಜಿಲ್ಲಾಧಿಕಾರಿಗಳಿಂದ ಪಡೆದುಕೊಂಡಿರುತ್ತದೆ. ಮತ್ತು ನಗರಾಭಿವೃದ್ಧಿ ಪ್ರಾಧಿಕಾರದಿಂದ ಮತ್ತು ನಗರಸಭೆಯಿಂದ ಅನುಮತಿ ಪಡೆದಿರುತ್ತಾರೆ. ಈ ಕಚೇರಿಯಿಂದ ಆಸ್ತಿತೆರಿಗೆ ವಿನಾಯಿತಿ ಪಡೆದುಕೊಂಡಿದ್ದು, ಈ ಸ್ಥಳದಲ್ಲಿ ನಕ್ಷೆ ಪ್ರಕಾರ ಕಟ್ಟಡ ಪರವಾನಿಗೆ ಕೋರಿ ಅರ್ಜಿಸಲ್ಲಿಸಿರುವುದರಿಂದ ಇದಕ್ಕೆ ಅಕ್ಕ-ಪಕ್ಕದ ಹಾಗೂ ಸಾರ್ವಜನಿಕರಿಂದ ಯಾವುದೇ ಆಕ್ಷೇಪಣೆ ಇದ್ದಲ್ಲಿ 15 ದಿನಗಳ ಒಳಗಾಗಿ ದಾಖಲೆಳೊಂದಿಗೆ ಈ ಕಾರ್ಯಾಲಯಕ್ಕೆ ದೂರು ಸಲ್ಲಿಸತಕ್ಕದ್ದು, ಅವಧಿ ಮುಗಿದ ನಂತರ ಬಂದ ಆಕ್ಷೇಪಣೆ, ತಕರಾರರನ್ನು ಪರಿಗಣಿಸಲಾಗುವುದಿಲ್ಲವೆಂದು ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande