ಕೊಪ್ಪಳ ಜಾತ್ರೆಯಲ್ಲಿ ಉಚಿತ ಆರೋಗ್ಯ ಮತ್ತು ವೈದ್ಯಕೀಯ ಸೇವೆ
ಕೊಪ್ಪಳ, 26 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ವೈದ್ಯಕೀಯ ಸೇವೆಯನ್ನು ಕಲ್ಪಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು ಶ್ರೀ ಮಠವು ಉಚಿತ ವೈದ್ಯಕೀಯ ಸೇವೆಗೆ ಹೆಚ್ಚು ಒತ್ತು ಕೊಟ್ಟು ಬಂದಿರುವ
ಕೊಪ್ಪಳ ಜಾತ್ರೆಯಲ್ಲಿ ಉಚಿತ ಆರೋಗ್ಯ ಮತ್ತು ವೈದ್ಯಕೀಯ ಸೇವೆ


ಕೊಪ್ಪಳ, 26 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಜಾತ್ರಾಮಹೋತ್ಸವಕ್ಕೆ ಆಗಮಿಸುವ ಭಕ್ತರಿಗೆ ವೈದ್ಯಕೀಯ ಸೇವೆಯನ್ನು ಕಲ್ಪಿಸುತ್ತಿದೆ. ವರ್ಷದಿಂದ ವರ್ಷಕ್ಕೆ ಭಕ್ತರ ಸಂಖ್ಯೆ ಹೆಚ್ಚುತ್ತಿದ್ದು ಶ್ರೀ ಮಠವು ಉಚಿತ ವೈದ್ಯಕೀಯ ಸೇವೆಗೆ ಹೆಚ್ಚು ಒತ್ತು ಕೊಟ್ಟು ಬಂದಿರುವ ಭಕ್ತಾದಿಗಳಲ್ಲಿ ಕಂಡು ಬಂದ ರೋಗಕ್ಕೆ ಅನುಗುಣವಾಗಿ ಪರಿಣಿತ ವೈದ್ಯರಿಂದ ಚಿಕಿತ್ಸೆ ಹಾಗೂ ಸಲಹೆಯನ್ನು ಕೊಡುವ ಸೇವೆಯನ್ನು ಸಲ್ಲಿಸುತ್ತಿದೆ. ಕಳೆದ ವರ್ಷ 2024ರ ಜಾತ್ರೆಯಲ್ಲಿ ರೋಗಿಗಳ ತಪಾಸಣೆ ಮಾಡಿ ಉಚಿತ ಚಿಕಿತ್ಸೆಯನ್ನು ಯಶಸ್ವಿಯಾಗಿ ನೀಡಲಾಗಿತ್ತು.

ಈ ವರ್ಷದ ಜಾತ್ರೆಗೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗುವ ನಿರೀಕ್ಷೆ ಇರುವುದರಿಂದ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಆಸ್ಪತ್ರೆ ಮತ್ತು ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸ್ಥಳೀಯ ವೈದ್ಯಕೀಯ ಸಿಬ್ಬಂದಿಗಳ ಸಹಯೋಗದೊಂದಿಗೆ ಬರುವಂತಹ ಭಕ್ತಾದಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗುವುದು.

ಇದರ ಜೊತೆಗೆ ಔಷಧಿಯ ವ್ಯವಸ್ಥೆ, ಪ್ರಥಮ ಚಿಕಿತ್ಸೆಯ ವ್ಯವಸ್ಥೆಯನ್ನು ಮಾಡಲಾಗಿದೆ. ವಿಶೇಷವಾಗಿ ಜಾತ್ರೆಯ ಆವರಣ, ಪ್ರಸಾದ ನಿಲಯ ಹಾಗೂ ಪೆÇೀಲಿಸ್ ಚೌಕಿ ಹತ್ತಿರ ಸದರಿ ವ್ಯವಸ್ಥೆಯನ್ನು ಮಾಡಲಾಗುತ್ತಿದ್ದು 24 ಘಂಟೆ ತುರ್ತು ವೈದ್ಯಕೀಯ ಚಿಕಿತ್ಸೆ ಲಭ್ಯವಿರುತ್ತದೆ. ಸದರಿ ವ್ಯವಸ್ಥೆಯು 01/01/2026ರಿಂದ 18/01/2026ರವರೆಗೆ ಬೆಳಿಗ್ಗೆ 8.00 ಗಂಟೆಯಿಂದ ರಾತ್ರಿ 12.00ಗಂಟೆಯವರೆಗೆ ಜಾರಿಯಲ್ಲಿರುತ್ತದೆ.

ರಾತ್ರಿ 12 ಗಂಟೆಯ ನಂತರ ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯದ ಆಸ್ಪತ್ರೆಯಲ್ಲಿ ಚಿಕಿತ್ಸೆ ಲಭ್ಯವಿರುತ್ತದೆ ಹಾಗೂ ಕೆ.ಎಸ್ ಹಾಸ್ಪಿಟಲ್ ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಸೇವೆ ಹಾಗೆಯೇ ಅಂಬುಲೆನ್ಸ ಸೇವೆ ಸಹ 24 ಗಂಟೆ ಲಭ್ಯವಿರುತ್ತದೆ. ದಾಸೋಹದಲ್ಲಿ ನಿರಂತರ ಸೌಲಭ್ಯಗಳು ಹಾಗೂ ವೈದ್ಯಕೀಯ ಸಿಬ್ಬಂದಿ ವಿವರವನ್ನು ಲಗತ್ತಿಸಲಾಗಿದೆ

ವೈದ್ಯಕೀಯ ಸೌಲಭ್ಯ ಸ್ಥಳಗಳು

• ಜಾತ್ರೆಯ ಆವರಣ, ಮಹಾದಾಸೋಹ, ಪೆÇೀಲಿಸ್ ಚೌಕಿ ಪಕ್ಕದಲ್ಲಿ, ನಿಯೋಜಿತ ವಸತಿ ಸ್ಥಳಗಳು

ಲಭ್ಯವಿರುವ ಸೌಲಭ್ಯಗಳು

• ತುರ್ತು ವೈದ್ಯಕೀಯಚಿಕಿತ್ಸೆ, ಪ್ರಥಮಚಿಕಿತ್ಸೆ, ಉಚಿತ ಚಿಕಿತ್ಸಾ ಸಲಹೆ ಮತ್ತು ಔಷಧಿ ವಿತರಣೆ

ದಿನಾಂಕ 01/01/2026ರಿಂದ 18/01/2026ರವರೆಗೆ,

ಸಮಯ ಬೆಳಿಗ್ಗೆ 8.00 ರಿಂದ ರಾತ್ರಿ 12.00ರವರೆಗೆ

24 ಗಂಟೆ ತುರ್ತು ವೈದ್ಯಕೀಯ ಚಿಕಿತ್ಸೆ

• ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆಯ ಚಿಕಿತ್ಸಕರು

• ಆಯುರ್ವೇದ ಮಹಾವಿದ್ಯಾಲಯದ ವೈದ್ಯರು 32

• ಸ್ನಾತಕೋತ್ತರ ವಿದ್ಯಾರ್ಥಿಗಳು 100

• ಕೊಪ್ಪಳ ವೈದ್ಯಕೀಯ ಮಹಾವಿದ್ಯಾಲಯದ ಪರಿಣಿತ ವೈದ್ಯರು (ಕಿಮ್ಸ ಕೊಪ್ಪಳ) - 10

• ಅಂಬುಲೆನ್ಸ ವ್ಯವಸ್ಥೆ ಸಹ ಇರುತ್ತದೆ 03

• ಅಂಬುಲೆನ್ಸ ವ್ಯವಸ್ಥೆಗಾಗಿ ಸಂಪರ್ಕಿಸುವ ದೂರವಾಣಿ ಸಂಖ್ಯೆ :-9632002808, 9741624504, 8747926455, 8088939400,

• ಕೆ ಎಸ್ ಹಾಸ್ಪಿಟಲ್ ಸಿಬ್ಬಂದಿ ನುರಿತ ತಜ್ಞ ವೈದ್ಯರು ಎಲ್ಲ ವಿಧದ ತುರ್ತು ಸೇವೆ 24 x 7 ಲಭ್ಯವಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಡಾ ಗುರುರಾಜ್ – 9480193373, ಡಾ ಎಂ ಸೂರ್ಯನಾರಾಯಣ – 9845631442, ಡಾ ಎಸ್. ಎಂ ಸಾಲಿಮಠ – 9845010950, ಶ್ರೀ ಜಗದ್ಗುರು ಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ಆಸ್ಪತ್ರೆ ದೂರವಾಣಿ ಸಂಖ್ಯೆ :08539 -221989 ಸಂಪರ್ಕಿಸಲು ಶ್ರೀ ಗವಿಮಠ ತಿಳಿಸಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande