ಅಬಕಾರಿ ಇಲಾಖೆ ಇ-ಹರಾಜು : ಜನವರಿ 5ರಂದು ತರಬೇತಿ
ರಾಯಚೂರು, 26 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಅಬಕಾರಿ ಇಲಾಖೆಯಲ್ಲಿ ಇದೇ ಪ್ರಥಮವಾಗಿ ಇ-ಹರಾಜು ಮೂಲಕ ಸನ್ನದುಗಳ ವಿಲೆವಾರಿಗೆ ಕ್ರಮ ಕೈಗೊಂಡಿದ್ದು, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಸಾರ್ವಜನರಿಗೆ ನಗರದ ಕೃಷಿ ವಿಶ್ವವಿದ್ಯಾಲಯದ ಸಭಾಂಗಣ-2ರಲ್ಲಿ 2026ರ ಜನವರಿ 5ರ ಬೆಳಿಗ್ಗೆ 11ಗಂಟೆಗೆ
ಅಬಕಾರಿ ಇಲಾಖೆ ಇ-ಹರಾಜು : ಜನವರಿ 5ರಂದು ತರಬೇತಿ


ರಾಯಚೂರು, 26 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಅಬಕಾರಿ ಇಲಾಖೆಯಲ್ಲಿ ಇದೇ ಪ್ರಥಮವಾಗಿ ಇ-ಹರಾಜು ಮೂಲಕ ಸನ್ನದುಗಳ ವಿಲೆವಾರಿಗೆ ಕ್ರಮ ಕೈಗೊಂಡಿದ್ದು, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯ ಸಾರ್ವಜನರಿಗೆ ನಗರದ ಕೃಷಿ ವಿಶ್ವವಿದ್ಯಾಲಯದ ಸಭಾಂಗಣ-2ರಲ್ಲಿ 2026ರ ಜನವರಿ 5ರ ಬೆಳಿಗ್ಗೆ 11ಗಂಟೆಗೆ ಒಂದು ದಿನದ ತರಬೇತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಮಹೇಂದ್ರ ಕುಮಾರ್ ಅವರು ತಿಳಿಸಿದ್ದಾರೆ.

ರಾಯಚೂರು ಜಿಲ್ಲೆಗೆ ಹಂಚಿಕೆಯಾಗಿರುವ ಒಟ್ಟು 09 ಸನ್ನದುಗಳ ಇ-ಹರಾಜು ನಡೆಯಲಿದೆ. ಅಬಕಾರಿ ಆಯುಕ್ತರು ಹೊರಡಿಸಿರುವ ತರಬೇತಿ ವೇಳಾಪಟ್ಟಿಯನ್ನು ಅಬಕಾರಿ ಇಲಾಖೆಯ ವೆಬ್‌ಸೈಟ್: https://stateexcise.karnataka.gov.in ಮತ್ತು ಎಮ್‌ಎಸ್‌ಟಿಸಿ ಲಿಮಿಟೆಡ್ ಸಂಸ್ಥೆಯ ವೆಬ್‌ಸೈಟ್ ; https://www.mstcecommerce.com ನಲ್ಲಿ ಲಭ್ಯವಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ರಾಯಚೂರು ವಿಭಾಗದ ಉಪ ಅಧೀಕ್ಷಕರಾದ ಮೋನಪ್ಪ ಮೊಬೈಲ್ ಸಂಖ್ಯೆ: 9606604154, ರಾಯಚೂರು ವಲಯ ಅಬಕಾರಿ ನಿರೀಕ್ಷಕರಾದ ಸತ್ಯನಾರಾಯಣ ಮೊಬೈಲ್ ಸಂಖ್ಯೆ: 9008036727, ಮಾನವಿ ವಲಯ ಅಬಕಾರಿ ನಿರೀಕ್ಷಕರಾದ ಯಮನೂರ್ ಸಾಬ್ ಮೊಬೈಲ್ ಸಂಖ್ಯೆ: 9481857923, ಸಿಂಧನೂರು ವಲಯ ಅಬಕಾರಿ ನಿರೀಕ್ಷಕರಾದ ಗಂಗಾಧರ್ ಬಡಿಗೇರ್ ಮೊಬೈಲ್ ಸಂಖ್ಯೆ: 9110452279, ಲಿಂಗಸುಗೂರು ವಲಯ ಅಬಕಾರಿ ನಿರೀಕ್ಷಕರಾದ ಲಕ್ಷ್ಮಿದೇವಿ ಮೊಬೈಲ್ ಸಂಖ್ಯೆ: 8317359297ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಅಬಕಾರಿ ಇಲಾಖೆಯ ಉಪ ಆಯುಕ್ತರಾದ ಮಹೇಂದ್ರ ಕುಮಾರ್ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande