ಬಿಜೆಪಿ ಜಿಲ್ಲಾ ಯುವ ಮೋರ್ಚಾದಿಂದ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ
ರಾಯಚೂರು, 26 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ರೂಪಿಸಿದ್ದ ಗ್ರಾಮಸಡಕ್‌ ಸೇರಿದಂತೆ ಹಲವು ಯೋಜನೆಗಳು ಈಗಲೂ ಜಾರಿಯಾಗುತ್ತಿವೆ. ಇದರಿಂದ ಜನರಿಗೆ ಲಾಭವಾಗುತ್ತಿದೆ’ ಎಂದು ಶಾಸಕರಾದ ಡಾ.ಶಿವರಾಜ್ ಪಾಟೀಲರು ತಿಳಿಸಿದರು. ಅವರಿಂದು ಅ
ಬಿಜೆಪಿ ಜಿಲ್ಲಾ ಯುವಮೋರ್ಚಾದಿಂದ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ


ಬಿಜೆಪಿ ಜಿಲ್ಲಾ ಯುವಮೋರ್ಚಾದಿಂದ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ


ಬಿಜೆಪಿ ಜಿಲ್ಲಾ ಯುವಮೋರ್ಚಾದಿಂದ ಅಟಲ್ ಬಿಹಾರಿ ವಾಜಪೇಯಿ ಜನ್ಮದಿನಾಚರಣೆ


ರಾಯಚೂರು, 26 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರು ರೂಪಿಸಿದ್ದ ಗ್ರಾಮಸಡಕ್‌ ಸೇರಿದಂತೆ ಹಲವು ಯೋಜನೆಗಳು ಈಗಲೂ ಜಾರಿಯಾಗುತ್ತಿವೆ. ಇದರಿಂದ ಜನರಿಗೆ ಲಾಭವಾಗುತ್ತಿದೆ’ ಎಂದು ಶಾಸಕರಾದ ಡಾ.ಶಿವರಾಜ್ ಪಾಟೀಲರು ತಿಳಿಸಿದರು.

ಅವರಿಂದು ಅಂಬಿಗರ ಚೌಡಯ್ಯ ವೃತ್ತದಲ್ಲಿಂದು ಬಿಜೆಪಿ ಜಿಲ್ಲಾ ಯುವಮೋರ್ಚಾದ ವತಿಯಿಂದ ಮಾಜಿ ಪ್ರಧಾನಿಮಂತ್ರಿಗಳಾದ ಅಟಲ್ ಬಿಹಾರಿ ವಾಜಪೇಯಿಯವರ ಜನ್ಮ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಅಟಲ್ ಜಿಯವರು ವಿಕಸಿತ ಭಾರತಕ್ಕೆ ಅವರು ಅಡಿಪಾಯ ಹಾಕಿದ್ದರು. ಪಕ್ಷದ ಸಂಘಟನೆ, ಹೋರಾಟ ಸಾಧ್ಯವಾಗಿರುವುದು ಅವರ ಪರಿಶ್ರಮ ಮತ್ತು ನಾಯಕತ್ವದಿಂದಲೇ. ಇದಕ್ಕಾಗಿ ಅವರ ಜೀವನವನ್ನು ಸದಾ ಸ್ಮರಿಸಬೇಕು’ ಎಂದರು.

ಮಾಜಿ ವಿಧಾನ ಪರಿಷತ್ ಸದಸ್ಯರಾದ ಎನ್.ಶಂಕ್ರಪ್ಪರವರು ಮಾತನಾಡಿ ವಾಜಪೇಯಿ ಅಜಾತ ಶತ್ರು ಆಗಿದ್ದರು. ಕೋಟ್ಯಂತರ ಕಾರ್ಯಕರ್ತರ ಮಾರ್ಗದರ್ಶಕರಾಗಿದ್ದರು. ಅವರ ಉತ್ತಮ ಆಡಳಿತ ಮಾದರಿಯಾದುದು’ ಎಂದು ಸ್ಮರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ವೀರನಗೌಡ ಲೆಕ್ಕಿಹಾಳ್ , ಆರ್.ಡಿ.ಎ ಮಾಜಿ ಅಧ್ಯಕ್ಷರಾದ ತಿಮ್ಮಪ್ಪ ನಾಡಗೌಡ , ಜಿಲ್ಲಾ ಯುವಮೋರ್ಚಾದ ಅಧ್ಯಕ್ಷರಾದ ವಿನಾಯಕರಾವ್, ಅರುಣ್ ಪಾಟೀಲ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande