
ಇಂಫಾಲ್, 26 ನವೆಂಬರ್ (ಹಿ.ಸ.) :
ಆ್ಯಂಕರ್ : ಮಣಿಪುರದ ಚುರಚಂದ್‌ಪುರ, ಕಾಂಗ್‌ಪೋಕ್ಪಿ ಮತ್ತು ಇಂಫಾಲ ಪಶ್ಚಿಮ ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ ನಡೆದ ಭದ್ರತಾ ಕಾರ್ಯಾಚರಣೆಗಳಲ್ಲಿ ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು, ಮದ್ದುಗುಂಡುಗಳು ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಂಡಿದ್ದಾರೆ.
ಚುರಚಂದ್‌ಪುರದಲ್ಲಿ 40 ಕೆಜಿ ಸ್ಫೋಟಕ, ರಾಕೆಟ್ ಮತ್ತು ಲಾಂಚರ್‌ನ್ನು, ಕಾಂಗ್‌ಪೋಕ್ಪಿಯಲ್ಲಿ ಕಾರ್ಬೈನ್, ರೈಫಲ್‌ಗಳು, ಪಿಸ್ತೂಲ್‌ಗಳು, ಗ್ರೆನೇಡ್‌ಗಳು ಮತ್ತು ರೇಡಿಯೋಗಳನ್ನು ಹಾಗೂ ಇಂಫಾಲ ಪಶ್ಚಿಮದಲ್ಲಿ G3 ರೈಫಲ್ ಸೇರಿದಂತೆ ಅನೇಕ ಶಸ್ತ್ರಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.
ಈ ವೇಳೆ ಕೆಸಿಪಿ ಸಂಘಟನೆಯ ಕೇಡರ್ ರೊನಾಲ್ಡೊ ತೌಡಮ್ (23) ಎಂಬ ಉಗ್ರನನ್ನು ಪೊಲೀಸರು ಬಂಧಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa