
ಕೊರ್ಬಾ, 26 ನವೆಂಬರ್ (ಹಿ.ಸ.) :
ಆ್ಯಂಕರ್ : ಛತ್ತೀಸ್‌ಗಢದ ಜಂಜ್‌ಗಿರ್-ಚಂಪಾ ಜಿಲ್ಲೆಯ ಸುಕ್ಲಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ–49ರಲ್ಲಿ ನಿನ್ನೆ ರಾತ್ರಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಐದು ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಮೂರು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಜಾಂಜ್‌ಗಿರ್ ಪೊಲೀಸ್ ನೀಡಿರುವ ಮಾಹಿತಿ ಪ್ರಕಾರ, ಮದುವೆ ಮೆರವಣಿಗೆಯಿಂದ ಹಿಂತಿರುಗುತ್ತಿದ್ದ ಸ್ಕಾರ್ಪಿಯೋ ಕಾರು ಎದುರುಗಡೆಯಿಂದ ಬಂದ ಟ್ರಕ್‌ಗೆ ಭೀಕರವಾಗಿ ಡಿಕ್ಕಿ ಹೊಡೆದಿದೆ. ಡಿಕ್ಕಿಯ ತೀವ್ರತೆಗೆ ಸ್ಕಾರ್ಪಿಯೋ ಸಂಪೂರ್ಣವಾಗಿ ನುಜ್ಜುಗುಜ್ಜಾಗಿದೆ.
ಅಪಘಾತದಲ್ಲಿ ಮೃತರಾದವರನ್ನು ನವಗಢ ಪ್ರದೇಶದ ಸಡಕ್ ಪಾರಾ ಮತ್ತು ಶಾಂತಿನಗರ ನಿವಾಸಿಗಳಾದ ವಿಶ್ವನಾಥ್ ದೇವಗನ್ (43),ರಾಜೇಂದ್ರ ಕಶ್ಯಪ್ (27),ಪೊಮೇಶ್ವರ ಜಲತಾರೆ (33),ಭೂಪೇಂದ್ರ ಸಾಹು (40), ಕಮಲನಯನ್ ಸಾಹು (22) ಎಂದು ಗುರುತಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa