
ನವದೆಹಲಿ, 26 ನವೆಂಬರ್ (ಹಿ.ಸ.) :
ಆ್ಯಂಕರ್ : ಸಂವಿಧಾನ ಭವನದ ಸೆಂಟ್ರಲ್ ಹಾಲ್‌ನಲ್ಲಿ ಇಂದು ನಡೆಯಲಿರುವ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಭಾರತದ ಸಂವಿಧಾನವನ್ನು ಅಂಗೀಕರಿಸಿದ 76ನೇ ವರ್ಷದ ಆಚರಣೆ ಅಂಗವಾಗಿ ಸಮಾರಂಭ ನಡೆಯಲಿದೆ.
ರಾಷ್ಟ್ರಪತಿ, ಉಪರಾಷ್ಟ್ರಪತಿ, ಲೋಕ ಸಭಾಧ್ಯಕ್ಷ, ಉಭಯ ಸದನಗಳ ಸಂಸತ್ ಸದಸ್ಯರು ಹಾಗೂ ಇತರ ಗಣ್ಯರು ಕಾರ್ಯಕ್ರಮದಲ್ಲಿ ಹಾಜರಾಗಲಿದ್ದಾರೆ. ಈ ಸಂದರ್ಭದಲ್ಲಿ ರಾಷ್ಟ್ರಪತಿಗಳು ಭಾರತೀಯ ಸಂವಿಧಾನದ ಪೀಠಿಕೆಯ ಪಠಣ ನಡೆಸಲಿದ್ದಾರೆ.
ಸಮಾರಂಭದ ಪ್ರಮುಖ ಅಂಶವಾಗಿ ಮಲಯಾಳಂ, ಮರಾಠಿ, ನೇಪಾಳಿ, ಪಂಜಾಬಿ, ಬೋಡೋ, ಕಾಶ್ಮೀರಿ, ತೆಲುಗು, ಒಡಿಯಾ ಮತ್ತು ಆಸಾಮಿ ಸೇರಿ ಒಂಬತ್ತು ಭಾಷೆಗಳಲ್ಲಿ ಸಂವಿಧಾನದ ಅನುವಾದಿತ ಆವೃತ್ತಿಗಳು ಬಿಡುಗಡೆ ಮಾಡಲಾಗುತ್ತದೆ. ಜೊತೆಗೆ, ಭಾರತದ ಸಂವಿಧಾನದಲ್ಲಿ ಕಲೆ ಮತ್ತು ಕ್ಯಾಲಿಗ್ರಫಿ ಎಂಬ ಸ್ಮರಣಾರ್ಥ ಕಿರುಪುಸ್ತಕ ಬಿಡುಗಡೆಯಾಗಲಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa