ರಾಜಕೀಯ ವಲಯದಲ್ಲಿ ಸಂಚಲನ ಹುಟ್ಟಿಸಿದ ಹುಲ್ಲಿಗೆಮ್ಮ ದೇವಿ ಭವಿಷ್ಯ
ಗದಗ, 24 ನವೆಂಬರ್ (ಹಿ.ಸ.) : ಆ್ಯಂಕರ್ : ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ಜೋರಾಗಿರುವ ಈ ವೇಳೆಗೆ, ಗದಗದ ಜೋಗತಿ ಅಮ್ಮನೊಬ್ಬರ ಭವಿಷ್ಯ ನುಡಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಗದಗ ನಗರದ ರಾಚೋಟೇಶ್ವರ ನಗರದಲ್ಲಿ ವಾಸಿಸುವ ಹುಲ್ಲಿಗೆಮ್ಮ ದೇವಿಯ ಜೋಗತಿ ಭೈಲಮ್ಮ ಬಾಳಣ್ಣವರ ದೇವಿ ಕ
ಫೋಟೋ


ಗದಗ, 24 ನವೆಂಬರ್ (ಹಿ.ಸ.) :

ಆ್ಯಂಕರ್ : ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಬದಲಾವಣೆಯ ಚರ್ಚೆಗಳು ಜೋರಾಗಿರುವ ಈ ವೇಳೆಗೆ, ಗದಗದ ಜೋಗತಿ ಅಮ್ಮನೊಬ್ಬರ ಭವಿಷ್ಯ ನುಡಿ ಹೊಸ ಸಂಚಲನಕ್ಕೆ ಕಾರಣವಾಗಿದೆ. ಗದಗ ನಗರದ ರಾಚೋಟೇಶ್ವರ ನಗರದಲ್ಲಿ ವಾಸಿಸುವ ಹುಲ್ಲಿಗೆಮ್ಮ ದೇವಿಯ ಜೋಗತಿ ಭೈಲಮ್ಮ ಬಾಳಣ್ಣವರ ದೇವಿ ಕೊಡ ಎತ್ತುವ ಮೂಲಕ ನೀಡಿರುವ ಭವಿಷ್ಯ ಚರ್ಚೆಗೆ ಗ್ರಾಸವಾಗಿದೆ.

ಭೈಲಮ್ಮ ಜೋಗತಿ ಹೇಳುವ ಪ್ರಕಾರ, ಮುಂದಿನ ಎರಡುವರೆ ತಿಂಗಳೊಳಗೆ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಏರುವರು ಎಂದು ಹುಲ್ಲಿಗೆಮ್ಮ ದೇವಿ “ಸ್ಪಷ್ಟ ಸಂದೇಶ” ನೀಡಿದಂತೆ ಹೇಳಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ವಯಂಪ್ರೇರಿತವಾಗಿ ಸ್ಥಾನ ಬಿಡುವರು ಹಾಗೂ ಖುಷಿಯಿಂದ ಅಧಿಕಾರ ಹಸ್ತಾಂತರ ಮಾಡುತ್ತಾರೆ ಎಂಬ ಭವಿಷ್ಯವನ್ನೂ ಜೋಗತಿ ತಿಳಿಸಿದ್ದಾರೆ.

ಜೋಗತಿ ಭೈಲಮ್ಮ ಅವರ ಮಾತುಗಳು:

“ಡಿ.ಕೆ. ಶಿವಕುಮಾರ್ ನೀವು ಚಿಂತೆ ಮಾಡ್ಬೇಡಿ, ನೀವು ಮುಖ್ಯಮಂತ್ರಿ ಆಗ್ತೀರಪ್ಪಾ… ಹುಲ್ಲಿಗೆಮ್ಮ ದೇವಿಯ ಆಶೀರ್ವಾದ ನಿಮ್ಮ ಜೊತೆ ಇದೆ. ಎರಡೂವರೆ ತಿಂಗಳಲ್ಲಿ ಗದ್ದುಗೆ ಏರುವಿರಿ. ಎರಡೂವರೆ ವರ್ಷದವರೆಗೆ ರಾಜ್ಯವನ್ನು ಆಡಳಿತ ನಡೆಸುತ್ತೀರಿ” ಎಂದು ಭೈಲಮ್ಮ ಜೋಗತಿ ಹೇಳಿದ್ದಾರೆ.

ಹುಲ್ಲಿಗೆಮ್ಮ ದೇವಿಯ ಭವಿಷ್ಯ ತಪ್ಪಾಗುವುದೇ ಇಲ್ವೆಂದು ನಂಬುವ ಜೋಗತಿ ಭೈಲಮ್ಮ ಅವರ ಈ ಹೇಳಿಕೆ, ಈಗಾಗಲೇ ರಾಜಕೀಯ ಚರ್ಚೆಗೆ ಹೊಸ ತಿರುವು ನೀಡಿದೆ. ಮುಖ್ಯಮಂತ್ರಿ ಬದಲಾವಣೆ ಕುರಿತ ಗಾಳಿ ಸುದ್ದಿಯ ನಡುವೆ ಜೋಗತಿಯ ಈ ಭವಿಷ್ಯ ಮಾತು ಕಾಂಗ್ರೆಸ್ ಒಳಜಗಳ, ನಾಯಕತ್ವದ ಸ್ಪರ್ಧೆ ಮತ್ತು ರಾಜಕೀಯ ವಲಯದಲ್ಲಿ ಸಂಚಲ ಮೂಡಿಸಿದೆ.

ರಾಜಕೀಯ ನಾಯಕರು ಯಾವುದೇ ಪ್ರತಿಕ್ರಿಯೆ ನೀಡದಿದ್ದರೂ, ಜನಸಾಮಾನ್ಯರು ಈ ಹೇಳಿಕೆಯನ್ನು ಕುತೂಹಲದಿಂದ ಚರ್ಚೆ ಮಾಡುತ್ತಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande