ಬಳ್ಳಾರಿ : ಕೇಂದ್ರದ 'ಶ್ರಮ ಶಕ್ತಿ ನೀತಿ - 2025' ಹಿಂಪಡೆಯಲು ನವೆಂಬರ್ 26 ರಂದು ಪ್ರತಿಭಟನೆ
ಬಳ್ಳಾರಿ, 24 ನವೆಂಬರ್ (ಹಿ.ಸ.) : ಆ್ಯಂಕರ್ : ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಸ್ವತಂತ್ರ ಕೈಗಾರಿಕಾ ಒಕ್ಕೂಟಗಳ ಜಂಟಿ ವೇದಿಕೆಯು ಸಂಯುಕ್ತ ಕಿಸಾನ್ ಮೋರ್ಚಾದ ನೇತೃತ್ವದಲ್ಲಿ ರೈತರೊಂದಿಗೆ ಸೇರಿ ''ಶ್ರಮ ಶಕ್ತಿ ನೀತಿ - 2025'' ಹಿಂಪಡೆಯಲು ಆಗ್ರಹಿಸಿ ನವೆಂಬರ್ 26ರ ಬುಧವಾ
ಬಳ್ಳಾರಿ : ಕೇಂದ್ರದ 'ಶ್ರಮ ಶಕ್ತಿ ನೀತಿ - 2025' ಹಿಂಪಡೆಯಲು ನವೆಂಬರ್ 26 ರಂದು ಪ್ರತಿಭಟನೆ


ಬಳ್ಳಾರಿ, 24 ನವೆಂಬರ್ (ಹಿ.ಸ.) :

ಆ್ಯಂಕರ್ : ಕೇಂದ್ರ ಕಾರ್ಮಿಕ ಸಂಘಗಳು ಮತ್ತು ಸ್ವತಂತ್ರ ಕೈಗಾರಿಕಾ ಒಕ್ಕೂಟಗಳ ಜಂಟಿ ವೇದಿಕೆಯು ಸಂಯುಕ್ತ ಕಿಸಾನ್ ಮೋರ್ಚಾದ ನೇತೃತ್ವದಲ್ಲಿ ರೈತರೊಂದಿಗೆ ಸೇರಿ 'ಶ್ರಮ ಶಕ್ತಿ ನೀತಿ - 2025' ಹಿಂಪಡೆಯಲು ಆಗ್ರಹಿಸಿ ನವೆಂಬರ್ 26ರ ಬುಧವಾರ ದೇಶವ್ಯಾಪಿ ಪ್ರತಿಭಟನೆ ನಡೆಸಲಿವೆ.

ಸಿಐಟಿಯುನ ಜೆ. ಸತ್ಯಬಾಬು ಅವರು ಈ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರ 21 ನವೆಂಬರ್ 2025 ರಂದು ಅಧಿಸೂಚಿಸಲಾದ ನಾಲ್ಕು `ಕಾರ್ಮಿಕ ಸಂಹಿತೆಗಳ’ ನಿರಂಕುಶ ಮತ್ತು ಅಪ್ರಜಾಸತ್ತಾತ್ಮಕ ಅಧಿಸೂಚನೆಯು ಎಲ್ಲಾ ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ಧಿಕ್ಕರಿಸುತ್ತದೆ. ಅಸ್ತಿತ್ವದಲ್ಲಿದ್ದ 29 ಕೇಂದ್ರ ಕಾರ್ಮಿಕ ಕಾನೂನುಗಳನ್ನು ರದ್ದುಗೊಳಿಸಿದೆ.

ಕೇಂದ್ರ ಸರ್ಕಾರದ ಕಾರ್ಮಿಕ ಸಂಹಿತೆಗಳ ಅಧಿಸೂಚನೆಯನ್ನು ವಿರೋಧಿಸಿ. ಕರ್ನಾಟಕ ಸರ್ಕಾರ ಈ ಸಂಹಿತೆಗಳಿಗೆ ನಿಯಮಗಳನ್ನು ರೂಪಿಸಬಾರದು ಎಂದು ಒತ್ತಾಯಿಸಿ. ರಾಷ್ಟ್ರದ ದುಡಿಯುವ ಜನರ ಮೇಲೆ ಎಸಗಲಾದ ಮೋಸದ ವಂಚನೆಯನ್ನು ವಿರೋಧಿಸಿ ಕಾರ್ಮಿಕರಿಂದ ಸ್ವಯಂ ಪ್ರೇರಿತ ಪ್ರತಿಭಟನೆ ಮತ್ತು ನವೆಂಬರ್ 26 ರಂದು ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸ್ವಾಮೂಹಿಕ ಪ್ರತಿಭಟನೆ ನಡೆಸಲು ಸಿಐಟಿಯು ಕರೆ ನೀಡಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande