
ರಾಯಚೂರು, 24 ನವೆಂಬರ್ (ಹಿ.ಸ.) :
ಆ್ಯಂಕರ್ : ರಾಯಚೂರು ನಗರದ ಅಲ್ಲಮಪ್ರಭು ಗೃಹ ನಿರ್ಮಾಣ ಸಹಕಾರ ಸಂಘದ ನಿರ್ದೇಶಕರ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮೋದಿ ಕೃಷ್ಣಮೂರ್ತಿ ಬಣ ಜಯ ಬೇರಿ ಬಾರಿಸಿದೆ.
ಸಂಘದ 13 ನಿರ್ದೇಶಕರ ಸ್ಥಾನಗಳ ಪೈಕಿ ಲಕ್ಷ್ಮಣ ಹುಲಿಗಾರ, ರಂಗಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಇನ್ನುಳಿದ 11 ಸ್ಥಾನಗಳಿಗೆ 25 ಜನರು ಸ್ಪರ್ಧೆ ಮಾಡಿದ್ದರು. ಅವರಲ್ಲಿ ಮೋದಿ ಕೃಷ್ಣಮೂರ್ತಿ , ಬಾಸುಮಿಯ, ಡಿ. ಶರಣಮ್ಮ, ವಿ. ಲಕ್ಷ್ಮೀದೇವಿ, ರಾಯಪ್ಪ ಮಾಸ್ಟರ್, ಚಂದ್ರಶೇಖರ್, ವೀರೇಶ್, ತಿಮ್ಮಣ್ಣ ಯಾದವ್, ಸುರೇಶ್ ಸಾಹುಕಾರ, ಶರಣಗೌಡ , ರಾಮಪ್ಪ ಅವರು ಆಯ್ಕೆಯಾಗಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್