ಧಾರ್ಮಿಕ ಕೇಂದ್ರಗಳಲ್ಲಿ ಹೈಮಾಸ್ ಲೈಟ್ ಅಳವಡಿಕೆ : ಎನ್ಎಸ್ ಬೋಸರಾಜು
ರಾಯಚೂರು, 24 ನವೆಂಬರ್ (ಹಿ.ಸ.) : ಆ್ಯಂಕರ್ : ಡ್ಯಾಡಿ‌ ಕಾಲೋನಿಯಲ್ಲಿರುವ ಶ್ರೀ ಈಶ್ವರ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ದೇವಸ್ಥಾನದ ಆವರಣದಲ್ಲಿ ಹೈ-ಮಾಸ್ ಲೈಟ್ ಹಾಕಲಾಗಿದೆ. ಜಾಗ್ರತೆಯಿಂದ ಉಪಯೋಗಿಸುವ ಮೂಲಕ ಹೈಮಾಸ್ ಲೈಟನ್ನು ಉಪಯೋಗಿಸಬೇಕು. ಈ ದೇವ
ಭಕ್ತಾದಿಗಳಿಗೆ ಅನುಕೂಲ ಕಲ್ಪಿಸಲು ಧಾರ್ಮಿಕ ಕೇಂದ್ರಗಳಲ್ಲಿ ಹೈಮಾಸ್ ಲೈಟ್ ಅಳವಡಿಕೆ : ಎನ್ಎಸ್ ಬೋಸರಾಜು


ಭಕ್ತಾದಿಗಳಿಗೆ ಅನುಕೂಲ ಕಲ್ಪಿಸಲು ಧಾರ್ಮಿಕ ಕೇಂದ್ರಗಳಲ್ಲಿ ಹೈಮಾಸ್ ಲೈಟ್ ಅಳವಡಿಕೆ : ಎನ್ಎಸ್ ಬೋಸರಾಜು


ರಾಯಚೂರು, 24 ನವೆಂಬರ್ (ಹಿ.ಸ.) :

ಆ್ಯಂಕರ್ : ಡ್ಯಾಡಿ‌ ಕಾಲೋನಿಯಲ್ಲಿರುವ ಶ್ರೀ ಈಶ್ವರ ದೇವಸ್ಥಾನಕ್ಕೆ ಬರುವ ಭಕ್ತಾದಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿ ಎಂದು ದೇವಸ್ಥಾನದ ಆವರಣದಲ್ಲಿ ಹೈ-ಮಾಸ್ ಲೈಟ್ ಹಾಕಲಾಗಿದೆ. ಜಾಗ್ರತೆಯಿಂದ ಉಪಯೋಗಿಸುವ ಮೂಲಕ ಹೈಮಾಸ್ ಲೈಟನ್ನು ಉಪಯೋಗಿಸಬೇಕು. ಈ ದೇವಸ್ಥಾನ ಆವರಣದಲ್ಲಿ ಸಿಸಿ ನೆಲಹಾಸಿಗಾಗಿ ಸಿಸಿ ಕಾಂಕ್ರೆಟ್ ನೆಲಹಾಸಿಗಾಗಿ 5 ಲಕ್ಷ ಅನುದಾನ ನೀಡಿದ್ದೇನೆ ಎಂದು ಸಣ್ಣ ನೀರಾವರಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆಯ ಸಚಿವರಾದ ಎನ್ಎಸ್ ಬೋಸರಾಜು ಅವರು ತಿಳಿಸಿದರು.

ರಾಯಚೂರು ನಗರದ ಡ್ಯಾಡಿ ಕಾಲೋನಿ ಬಡಾವಣೆಯಲ್ಲಿರುವ ಶ್ರೀ ಈಶ್ವರ ದೇವಸ್ಥಾನದಲ್ಲಿ ಹೈ ಮಾಸ್ ಲೈಟನ್ನು ಉದ್ಘಾಟಿಸಿ ಮಾತನಾಡಿದರು.

ಹೆಚ್ಚಿನ ಜನ ಸಂಪರ್ಕ ಮತ್ತು ಸಂಚಾರ ಜಾಸ್ತಿಯಿರುವಲ್ಲಿ ಕತ್ತಲೆ ಪ್ರದೇಶವಿದ್ದರೆ ಅಂತಹ ಸ್ಥಳಗಳಲ್ಲಿ ಲೈಟ್ ಅಳವಡಿಸಲು ಪ್ರಯತ್ನಿಸುತ್ತಿದ್ದೇವೆ. ಹಂತ ಹಂತವಾಗಿ ಜನರ ಬೇಡಿಕೆಯಿರುವಲ್ಲಿ ಲೈಟ್ ಅಳವಡಿಸಲು ಕ್ರಮ ಕೈಗೊಳ್ಳಲಾಗುವುದು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿ ದೃಷ್ಟೀಯಿಂದ ರಾಯಚೂರು ನಗರವನ್ನು ಮಹಾನಗರ ಪಾಲಿಕೆಯಾಗಿ ಮೇಲ್ದರ್ಜೆಗೇರಿಸಲಾಗಿದೆ. ಏರ್ಪೋರ್ಟ್ ಕಾಮಗಾರಿ ಪ್ರಗತಿಯಲ್ಲಿದೆ, ಚಂದ್ರ ಮೌಳೇಶ್ವರ ವೃತ್ತದಿಂದ ಗಂಜ್ ಸಂಪರ್ಕಿಸುವ ರಸ್ತೆ ಹಾಗೂ ನಗರ ಸಂಪರ್ಕಿಸುವ ರಾಜ್ಯ ಹೆದ್ದಾರಿ ಅಭಿವೃದ್ಧಿ ಸೇರಿದಂತೆ ಇತರ ಅಭಿವೃದ್ಧಿ ಕಾಮಗಾರಿಗಳಿಗೆ ಕ್ರಮ ಕೈಗೊಳ್ಳಲಾಗಿದೆ.

ಆಸ್ತಿಯ ಇ-ಖಾತಾ ತೊಂದರೆ ಕುರಿತು ನನ್ನ ಗಮನಕ್ಕೆ ಬಂದಿದೆ ಈ ಕುರಿತು ಆಯುಕ್ತರೊಂದಿಗೆ ಮಾತನಾಡಲಾಗಿದೆ. ಖುದ್ದು ಅಧಿಕಾರಿಗಳು ಬಡಾವಣೆಗೆ ತೆರಳಿ ಇ-ಖಾತಾ ನೀಡಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಲಾಗಿದೆ. ಹಂತ ಹಂತವಾಗಿ ಎಲ್ಲಾ‌ ಸಮಸ್ಯೆಗಳ ಇತ್ಯರ್ಥಕ್ಕೆ ಪ್ರಯತ್ನಿಸಲಾಗುವುದು ಎಂದರು.

ಡ್ಯಾಡಿ‌ ಕಾಲೋನಿಯ ಪ್ರಮೂಖ ರಸ್ತೆಯಾದ 80 ಅಡಿ ರಸ್ತೆ ಅಭಿವೃದ್ಧಿಗೆ ನಿರಂತರ ಪ್ರಯತ್ನಿಸುತ್ತಿದ್ದೇವೆ. ಮಳೆ ಹಾಗೂ ಕೆಲ ತಾಂತ್ರಿಕ ತೊಂದರೆಗಳಿಂದ ರಸ್ತೆ ಕಾಮಗಾರಿ ವಿಳಂಬವಾಗಿರಬಹುದು ಆದರೇ ಶೀಘ್ರದಲ್ಲಿ ಕಾಮಗಾರಿ‌ ಮುಗಿಸಲು ಸೂಚನೆ ನೀಡಿದ್ದೇನೆ.

ಈ ಸಂದರ್ಭದಲ್ಲಿ ವೀರಶೈವ ಸಮಾಜದ ಜಿಲ್ಲಾ ಅದ್ಯಕ್ಷರಾದ ಚಂದ್ರಶೇಖರ್ ಮಿರ್ಜಾಪೂರ್, ಉದಯ ಕುಮಾರ್ ಯಾಪಲದಿನ್ನಿ, ಕಾಂಗ್ರೆಸ್ ಹಿರಿಯ ಮುಖಂಡರಾದ ಜಯಣ್ಣ, ಕೆ ಶಾಂತಪ್ಪ, ರುದ್ರಪ್ಪ ಅಂಗಡಿ, ಜಿಂದಪ್ಪ, ಸತ್ಯ ನಾರಾಯಣ, ಸಂಗನಗೌಡ, ಶಿವಾನಂದ ಚುಕ್ಕಿ, ಶರಣಗೌಡ, ಮಲ್ಲನಗೌಡ ಪಾಟೀಲ್, ಚುಕ್ಕಿ ಶಿವಾನಂದ, ದೊಡ್ಡ ಬಸಪ್ಪಗೌಡ ಉದಯ ಕುಮಾರ್, ಬಸವರಾಜ ಪಾಟೀಲ್ ಅತ್ತನೂರು, ದಾನಗೌಡ ಸಿರವಾರ ಸೇರಿದಂತೆ ಅನೇಕರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande