


ಕೊಪ್ಪಳ, 24 ನವೆಂಬರ್ (ಹಿ.ಸ.) :
ಆ್ಯಂಕರ್ : ಭಾಗ್ಯನಗರ ಕುಷ್ಟಗಿ ಭಾಗ್ಯನಗರ ಕಿನ್ನಾಳ ರಸ್ತೆ ವೃತ್ತದ ನೂತನ ಬಸವೇಶ್ವರ ವೃತ್ತ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ, ಪೂಜ್ಯರಿಗೆ ಪುಷ್ಪಾರ್ಚನೆ ಮಾಡಿ ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಅವರು ಸಭೆ ಉದ್ಘಾಟಿಸಿ ಮಾತನಾಡಿದರು.
ಈ ವೇಳೆ ಅತ್ಯಂತ ಭಾವುಲವಾಗಿ ಮಾತನಾಡಿದ ಶಾಸಕರು, ಮಹನೀಯರ ನೆನಹು ಬಹಳ ಮುಖ್ಯ, ವೃತ್ತದ ಮೂಲಕ ಹಾದು ಹೋಗುವಾಗ ಅವರ ನೆನಪು ಬರುತ್ತದೆ, ಆಗ ಅವರ ಜೀವನ ಆದರ್ಶ ವಿಚಾರಗಳು ಬರುತ್ತವೆ ಹಾಗಾಗಿ ಇಂತಹ ವೃತ್ತ ಬೇಕು. ಈಚೆಗೆ ಕನಕದಾಸ ಮಾಡಿದ್ದೇವೆ ಬಸವಣ್ಣ ಮಾಡಿದ್ದೇವೆ ವಾಲ್ಮೀಕಿ ಹಾಗೂ ಇತರೆ ಮಹನಿಯರ ವೃತ್ತಕ್ಕೆ ಸಿದ್ಧತೆ ಮಾಡಿಕೊಳ್ಳುತ್ತಿದ್ದೇವೆ ಎಂದರು. ನಗರ ಬಹಳ ವೇಗವಾಗಿ ಬೆಳೆಯುತ್ತಿದೆ, ಲಕ್ಷದ ಸಮೀಪ ಜನಸಂಖ್ಯೆ ಬಂದಿದೆ, ಟ್ರ್ಯಾಫಿಕ್ ಹೆವಿ ಆಗಿರುವದರಿಂದ ಮಳೆ ಹೆಚ್ಚಾದರಿಂದ ರಸ್ತೆ ಕೆಟ್ಟಿವೆ ಎಂದರು.
ಕಿನ್ನಾಳ ರಸ್ತೆ ಹಾಗೂ ಭಾಗ್ಯನಗರದ ಮುಖ್ಯ ರಸ್ತೆಗಳ ನಿರ್ಮಾಣ ಶೀಘ್ರವೇ ಕೈಗೆತ್ತಿಕೊಳ್ಳಲಾಗುವದು ಎಂದರು. ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ವೃತ್ತ ಉದ್ಘಾಟನೆ ಆಗಿದ್ದು, ಹೈ ಮಾಸ್ಕ್ ಶೀಘ್ರದಲ್ಲಿ ಬರಲಿದೆ ಎಂದರು. ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಮಾತನಾಡಿ ಶಾಸಕರು ಬಹಳ ಶ್ರದ್ಧೆಯಿಂದ ಕೊಪ್ಪಳ ಕ್ಷೇತ್ರದ ಅಭಿವೃದ್ಧಿ ಮಾಡುತ್ತಿದ್ದಾರೆ, ಕೆಲವೇ ದಿನಗಳಲ್ಲಿ ಅವರ ಕನಸಾದ 2 ಕೋಟಿ ವೆಚ್ಚದ ಅದ್ಭುತ ಗಡಿಯಾರ ಕಂಬದ ಅಭಿವೃದ್ಧಿ ಕಾಣಬಹುದು ಎಂದರು.
ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರ ಉಪಾಧ್ಯಕ್ಷ ಮಂಜುನಾಥ ಜಿ. ಗೊಂಡಬಾಳ ಶಾಸಕರಿಗೆ ಭಾಗ್ಯನಗರದ ಎರಡು ಪ್ರಮುಖ ರಸ್ತೆ ಚರಂಡಿ ನಿರ್ಮಾಣ ಮತ್ತು ಸ್ವಚ್ಚತಾ ಕಾರ್ಯದ ಬಗ್ಗೆ ಮನವಿ ಮಾಡಿ, ಶಾಸಕರ ಅಭಿವೃದ್ಧಿ ಪರ್ವ ಮೆಚ್ಚಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷ ತುಕಾರಾಮಪ್ಪ ಗಡಾದ, ಉಪಾಧ್ಯಕ್ಷ ಹೊನ್ನೂರಸಾಬ ಭೈರಾಪೂರ, ಜಿ. ಪಂ. ಮಾಜಿ ಉಪಾಧ್ಯಕ್ಷ ಯಮನಪ್ಪ ಕಬ್ಬೇರ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಹಾಗೂ ಗ್ಯಾರಂಟಿ ಸದಸ್ಯರಾದ ಜ್ಯೋತಿ ಎಂ. ಗೊಂಡಬಾಳ, ನಗರಸಭೆ ಸದಸ್ಯರಾದ ಮುತ್ತುರಾಜ ಕುಷ್ಟಗಿ, ಗುರುರಾಜ ಹಲಗೇರಿ, ಪ.ಪಂ. ಮುಖ್ಯಾಧಿಕಾರಿ ಸುರೇಶ ಬಬಲಾದ, ನಗರಾಭಿವೃದ್ಧಿ ಪ್ರಾಧಿಕಾರ ಆಯುಕ್ತ ಶರಣಪ್ಪ ಇತರರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್