ಭಾರತೀಯ ಕರಾವಳಿ ಪಡೆಯಿಂದ 29 ಬಾಂಗ್ಲಾದೇಶಿ ಮೀನುಗಾರರ ಬಂಧನ
ಕೋಲ್ಕತ್ತಾ, 17 ನವೆಂಬರ್ (ಹಿ.ಸ.) : ಆ್ಯಂಕರ್ : ಬಂಗಾಳಕೊಲ್ಲಿಯಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ಕರಾವಳಿ ಕಾವಲು ಪಡೆ ಅನುಮಾನಾಸ್ಪದ ಚಟುವಟಿಕೆ ಕಂಡುಬಂದ ಹಿನ್ನೆಲೆಯಲ್ಲಿ 29 ಬಾಂಗ್ಲಾದೇಶಿ ಮೀನುಗಾರರಿದ್ದ ಟ್ರಾಲರ್ ದೋಣಿಯನ್ನು ವಶಪಡಿಸಿಕೊಂಡಿದೆ. ದೋಣಿ ಅಂತಾರಾಷ್ಟ್ರೀಯ ಸಮುದ್ರ ಗಡಿಯನ್ನು ಉಲ್ಲ
Arrest


ಕೋಲ್ಕತ್ತಾ, 17 ನವೆಂಬರ್ (ಹಿ.ಸ.) :

ಆ್ಯಂಕರ್ : ಬಂಗಾಳಕೊಲ್ಲಿಯಲ್ಲಿ ಗಸ್ತು ತಿರುಗುತ್ತಿದ್ದ ಭಾರತೀಯ ಕರಾವಳಿ ಕಾವಲು ಪಡೆ ಅನುಮಾನಾಸ್ಪದ ಚಟುವಟಿಕೆ ಕಂಡುಬಂದ ಹಿನ್ನೆಲೆಯಲ್ಲಿ 29 ಬಾಂಗ್ಲಾದೇಶಿ ಮೀನುಗಾರರಿದ್ದ ಟ್ರಾಲರ್ ದೋಣಿಯನ್ನು ವಶಪಡಿಸಿಕೊಂಡಿದೆ. ದೋಣಿ ಅಂತಾರಾಷ್ಟ್ರೀಯ ಸಮುದ್ರ ಗಡಿಯನ್ನು ಉಲ್ಲಂಘಿಸಿ ಭಾರತೀಯ ಜಲಪ್ರದೇಶಕ್ಕೆ ಪ್ರವೇಶಿಸಿದ್ದುದಾಗಿ ತನಿಖೆಯಲ್ಲಿ ಬಹಿರಂಗವಾಗಿದೆ.

ಕೋಸ್ಟ್ ಗಾರ್ಡ್ ದೋಣಿಯನ್ನು ತೀರಕ್ಕೆ ಕರೆತಂದು, ಮೀನುಗಾರರನ್ನು ಫ್ರೇಸರ್‌ಗಂಜ್ ಕರಾವಳಿ ಪೊಲೀಸ್ ಠಾಣೆಗೆ ಹಸ್ತಾಂತರಿಸಿದೆ. ಭಾರತೀಯ ಜಲಪ್ರದೇಶಕ್ಕೆ ಅತಿಕ್ರಮಣ ಪ್ರವೇಶ ಮಾಡಿದ ಆರೋಪದ ಮೇಲೆ ಅವರನ್ನು ಬಂಧಿಸಲಾಗಿದ್ದು, ಪ್ರಕರಣವನ್ನು ಸುಂದರ್‌ಬನ್ಸ್ ಜಿಲ್ಲಾ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚೆಗೆ ಬಾಂಗ್ಲಾದೇಶದ ಜೈಲಿನಲ್ಲಿ ಭಾರತೀಯ ಮೀನುಗಾರನೊಬ್ಬ ಸಾವು ಸಂಭವಿಸಿರುವ ಹಿನ್ನೆಲೆಯಲ್ಲಿ ಕರಾವಳಿ ಭದ್ರತೆ ಹೆಚ್ಚಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande