
ಕೋಲ್ಕತ್ತಾ, 17 ನವೆಂಬರ್ (ಹಿ.ಸ.) :
ಆ್ಯಂಕರ್ : 1962ರ ವಾಲೋಂಗ್ ಯುದ್ಧದಲ್ಲಿ ಹೋರಾಡಿದ ಭಾರತೀಯ ಸೈನಿಕರ ಶೌರ್ಯವನ್ನು ಸ್ಮರಿಸುವ 63ನೇ ವಾಲೋಂಗ್ ದಿನದ ಸಮಾರೋಪ ಸಮಾರಂಭ ನವೆಂಬರ್ 15-16ರಂದು ವಾಲೋಂಗ್‌ನಲ್ಲಿ ಆಯೋಜಿಸಲಾಗಿತ್ತು.
ಪೂರ್ವ ಸೇನಾ ಕಮಾಂಡರ್ ಲೆ.ಜೆ. ಆರ್‌ಸಿ ತಿವಾರಿ, ಮಾಸ್ಟರ್ ಜನರಲ್ ಲೆ.ಜೆ. ವಿಎಂಬಿ ಕೃಷ್ಣನ್, ಸ್ಪಿಯರ್ ಕಾರ್ಪ್ಸ್ ಜಿಒಸಿ ಲೆ.ಜೆ. ಅಭಿಜಿತ್ ಎಸ್. ಪೆಂಧಾರ್ಕರ್ ಹಾಗೂ ಅರುಣಾಚಲ ಉಪಮುಖ್ಯಮಂತ್ರಿ ಚೌನಾ ಮೇನ್ ಸೇರಿದಂತೆ ಯೋಧರು ಮತ್ತು ಕುಟುಂಬ ಸದಸ್ಯರು ಹಾಜರಿದ್ದರು.
ಬೆಳಕು-ಧ್ವನಿ ಪ್ರದರ್ಶನ, ಡ್ರೋನ್ ಶೋ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವೀರರ ಪ್ರತಿಮೆಗಳ ಅನಾವರಣ ಮತ್ತು ಯುದ್ಧ ಸ್ಮಾರಕದಲ್ಲಿ ಪುಷ್ಪಾರ್ಪಣೆ ನಡೆಯಿತು. ಇದೇ ವೇಳೆ ಯುದ್ಧಯೋಧರಿಗೆ ಗೌರವ ಪತ್ರಗಳನ್ನು ಪ್ರದಾನ ಮಾಡಲಾಯಿತು.
ಈ ಸಮಾರಂಭವು 1962ರ ಯುದ್ಧದಲ್ಲಿ ಭಾರತೀಯ ಸೇನೆಯ ಅದಮ್ಯ ಧೈರ್ಯ ಮತ್ತು ದೇಶಭಕ್ತಿಯನ್ನು ಪುನರುಚ್ಚರಿಸಿತು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa