ಎಚ್.ಡಿ.ದೇವೇಗೌಡ ಶೀಘ್ರ ಚೇತರಿಕೆಗೆ ವಿಜಯೇಂದ್ರ ಹಾರೈಕೆ
ಬೆಂಗಳೂರು, 07 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಚೇತರಿಸಿಕೊಂಡು, ಪೂರ್ಣ ಆರೋಗ್ಯವಂತರಾಗಿ ಹೊರಬರಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾರೈಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಹಂಚಿಕೊಂಡಿರುವ
ಎಚ್.ಡಿ.ದೇವೇಗೌಡ ಶೀಘ್ರ ಚೇತರಿಕೆಗೆ ವಿಜಯೇಂದ್ರ ಹಾರೈಕೆ


ಬೆಂಗಳೂರು, 07 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿರುವ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಚೇತರಿಸಿಕೊಂಡು, ಪೂರ್ಣ ಆರೋಗ್ಯವಂತರಾಗಿ ಹೊರಬರಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾರೈಸಿದ್ದಾರೆ.

ಸಾಮಾಜಿಕ ಮಾಧ್ಯಮದಲ್ಲಿ ಸಂದೇಶ ಹಂಚಿಕೊಂಡಿರುವ ಅವರು, ಆರೋಗ್ಯ ವಯಸ್ಸು ಎರಡನ್ನೂ ಲೆಕ್ಕಿಸದೇ ಈ ಕ್ಷಣಕ್ಕೂ ಜನರ ದುಃಖ – ದುಮ್ಮಾನಗಳಿಗೆ ಮಿಡಿಯುವ ದೇವೇಗೌಡರ ರಾಜಕೀಯ ಕ್ರಿಯಾಶೀಲತೆ ಹಾಗೂ ಜನರ ಸಮಸ್ಯೆಗಳ ಪರವಾಗಿ, ರಾಜ್ಯ ಹಾಗೂ ದೇಶದ ಅಭಿವೃದ್ಧಿಯ ಸಲುವಾಗಿ ಸಕಾಲದಲ್ಲಿ ಜಾಗೃತ ದನಿಯೆತ್ತುವ ಅವರ ಹೋರಾಟದ ಗುಣ ನಮ್ಮಂತವರಿಗೆ ಪ್ರೇರಣಾ ಶಕ್ತಿಯಾಗಿದೆ‌ ಎಂದಿದ್ದಾರೆ.

ದೇವೇಗೌಡರು ಶತಾಯುಷಿಯಾಗಿ ನಾಡಿಗೆ ಹಾಗೂ ದೇಶಕ್ಕೆ ಮಾರ್ಗದರ್ಶನ ನೀಡುವ ಶಕ್ತಿಯಾಗಿ ನಿಲ್ಲಬೇಕೆನ್ನುವುದು ಕೋಟಿ, ಕೋಟಿ ಕನ್ನಡಿಗರ ಮಹದಾಸೆಯಾಗಿದೆ. ಅವರು ಎಂದಿನಂತೆ ತಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲಿ ಎಂದು ಹಾರೈಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande