ಹುಬ್ಬಳ್ಳಿ, 07 ಅಕ್ಟೋಬರ್ (ಹಿ.ಸ.) :
ಆ್ಯಂಕರ್ : ಶ್ರೀರಾಮನನ್ನು ನೆನೆಯುವ ಹಾಗೆ ಶ್ರೀ ಮಹರ್ಷಿ ವಾಲ್ಮೀಕಿ ಅವರನ್ನು ನೆನೆಯಬೇಕು. ಏಕೆಂದರೆ ಜಗತ್ತಿಗೆ ಶ್ರೀರಾಮನ ಇತಿಹಾಸವನ್ನು ತಿಳಿಸಿದವರು ಶ್ರೀ ಮಹರ್ಷಿ ವಾಲ್ಮೀಕಿಯವರು ಎಂದು ಹುಬ್ಬಳ್ಳಿ ಸೆಂಟ್ರಲ್ ಕ್ಷೇತ್ರದ ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಹುಬ್ಬಳ್ಳಿ ತಾಲೂಕು ಆಡಳಿತ ಸೌಧದ ತಾಲ್ಲೂಕು ಪಂಚಾಯತ ಸಭಾಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಹಾಗೂ ತಾಲೂಕು ಆಡಳಿತದಿಂದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಾಲ್ಮೀಕಿ ಅವರು ಇಲ್ಲದಿದ್ದರೆ ರಾಮಾಯಣವನ್ನು ಮತ್ತು ರಾಮನನ್ನು ಜಗತ್ತಿಗೆ ಇಷ್ಟು ಆಳವಾಗಿ ತಿಳಿಸುತ್ತಿರಲಿಲ್ಲ. ತಮ್ಮ ಜೀವಮಾನ ಸಾಧನೆಯಾಗಿ 28,000 ಶ್ಲೋಕಗಳನ್ನು ಬರೆದರು. ಸಮಾಜದಲ್ಲಿ ಬದುಕುತ್ತಿರುವ ಯಾವುದೇ ಮನುಷ್ಯನಾದರೂ ಅವನಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಎರಡು ಇರುತ್ತವೆ. ನಾವು ಯಾವುದನ್ನು ಬಳಸುತ್ತೇವೆ ಹಾಗೆ ನಮ್ಮ ವ್ಯಕ್ತಿತ್ವ ಸಮಾಜದಲ್ಲಿ ತೋರ್ಪಡಿಸುತ್ತದೆ. ವಿದ್ಯಾರ್ಥಿಗಳು ಸಮಾಜಕ್ಕೆ ಕೊಡುಗೆ ನೀಡಲು ಮುಂದಾಗಬೇಕು. ಸಮಾಜದ ಪರಿವರ್ತನೆಗೆ ಶ್ರಮಿಸಬೇಕಿದೆ ಎಂದು ಅವರು ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa