ಬಳ್ಳಾರಿಯಲ್ಲಿ ಕೆಆರ್‍ಎಸ್ ಪಕ್ಷದಿಂದ ಸದಸ್ಯತ್ವ ಅಭಿಯಾನ
ಬಳ್ಳಾರಿ, 07 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಬಲಪಡಿಸಿ ಜನರ ಬಳಿಗೆ ಪಕ್ಷವನ್ನು ಕೊಂಡೊಯ್ಯಲು `ಎದ್ದೇಳು ಕನ್ನಡಿಗ, ಸಮೃದ್ಧ ಕರ್ನಾಟಕ ಕಟ್ಟಲು - ಕೆಆರ್‍ಎಸ್‍ಪಕ್ಷ ಸೇರು ಬಾ, ಶಕ್ತಿ `ಚೈತನ್ಯ ಪಡೆಯಲು'' ಶೀರ್ಷಿಕೆ ಅಡಿಯಲ್ಲಿ ಸದಸ್ಯತ್ವ ಅಭಿಯಾನವನ್ನು
ಬಳ್ಳಾರಿಯಲ್ಲಿ ಕೆಆರ್‍ಎಸ್ ಪಕ್ಷದಿಂದ ಸದಸ್ಯತ್ವ ಅಭಿಯಾನ


ಬಳ್ಳಾರಿ, 07 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವನ್ನು ಬಲಪಡಿಸಿ ಜನರ ಬಳಿಗೆ ಪಕ್ಷವನ್ನು ಕೊಂಡೊಯ್ಯಲು `ಎದ್ದೇಳು ಕನ್ನಡಿಗ, ಸಮೃದ್ಧ ಕರ್ನಾಟಕ ಕಟ್ಟಲು - ಕೆಆರ್‍ಎಸ್‍ಪಕ್ಷ ಸೇರು ಬಾ, ಶಕ್ತಿ `ಚೈತನ್ಯ ಪಡೆಯಲು' ಶೀರ್ಷಿಕೆ ಅಡಿಯಲ್ಲಿ ಸದಸ್ಯತ್ವ ಅಭಿಯಾನವನ್ನು ಹಮ್ಮಿಕೊಂಡಿದೆ.

ಪಕ್ಷದ ಮುಖಂಡರು ಮಂಗಳವಾರ ಈ ಮಾಹಿತಿ ನೀಡಿದ್ದು, ಕನ್ನಡ ಹೊರಾಟಗಾರ ಸಾ.ರಾ. ಗೋವಿಂದ್ ಅವರು ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ರಾಜ್ಯ ಕಾರ್ಯಾಧ್ಯಕ್ಷ ರಘು ಜಾಣಗೆರೆ, ಉಪಾಧ್ಯಕ್ಷರುಗಳಾದ ಮಂಜುನಾಥ್ ಎಸ್. ಮತ್ತು ಸೋಮಸುಂದರ್ ಕೆ.ಎಸ್. ಅವರ ನೇತೃತ್ವದಲ್ಲಿ ಮೂರು ತಂಡಗಳು ರಾಜ್ಯಾದ್ಯಂತ ಸಂಚರಿಸಿ ಸದಸ್ಯತ್ವ ಅಭಿಯಾನವನ್ನು ನಡೆಸುತ್ತಿವೆ ಎಂದರು.

ಸೋಮಸುಂದರ್ ಕೆ.ಎಸ್ ಅವರ ನೇತೃತ್ವದ ತಂಡವು ಬಳ್ಳಾರಿ ಜಿಲ್ಲೆಗೆ ಬುಧವಾರ ಆಗಮಿಸಿ, ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸದಸ್ಯತ್ವವನ್ನು ನೀಡಲಿದೆ. ಸಾರ್ವಜನಿಕರು ಪಕ್ಷದ ಸದಸ್ಯತ್ವವನ್ನು ಪಡೆಯುವ ಮೂಲಕ ಹೊಸ ರಾಜಕೀಯ ಶಕ್ತಿಗೆ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande