ಸಚಿವ ಪಾಟೀಲ ಜನ್ಮ ದಿನ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಬೃಹತ್ ಶಿಬಿರ ಆಯೋಜನೆ
ವಿಜಯಪುರ, 07 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರ ಜನ್ಮದಿನದ ಅಂಗವಾಗಿ ಮಂಗಳವಾರ ಜಿಲ್ಲೆಯ ಉಕ್ಕಲಿ, ದೇವರಗೆಣ್ಣೂರ, ಬಬಲೇಶ್ವರ ಹಾಗೂ ತಿಕೋಟಾಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಬೃಹತ್ ಶಿಬಿರ ಆಯೋಜ
ಪಾಟೀಲ


ವಿಜಯಪುರ, 07 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಅವರ ಜನ್ಮದಿನದ ಅಂಗವಾಗಿ ಮಂಗಳವಾರ ಜಿಲ್ಲೆಯ ಉಕ್ಕಲಿ, ದೇವರಗೆಣ್ಣೂರ, ಬಬಲೇಶ್ವರ ಹಾಗೂ ತಿಕೋಟಾಗಳಲ್ಲಿ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಬೃಹತ್ ಶಿಬಿರ ಆಯೋಜಿಸಲಾಗಿತ್ತು.

ಈ ಶಿಬಿರಗಳಲ್ಲಿ 2000ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ನಡೆಸಿ ಹೆಚ್ಚಿನ ಚಿಕಿತ್ಸೆ ಇರುವ ರೋಗಿಗಳಿಗೆ ವಿಜಯಪುರ ನಗರದ ಬಿ.ಎಲ್.ಡಿ.ಈ ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು.

ಬಿ.ಎಲ್.ಡಿ.ಇ ಡೀಮ್ಡ್ ವಿಶ್ವವಿದ್ಯಾಲಯ ಶ್ರೀ ಬಿ. ಎಂ. ಪಾಟೀಲ ವೈದ್ಯಕೀಯ ಕಾಲೇಜು, ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದ ವತಿಯಿಂದ ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆದ ಈ ಚಿಕಿತ್ಸೆ ಶಿಬಿರದಲ್ಲಿ ವೈದ್ಯಕೀಯ ವಿಭಾಗ, ಶಸ್ತ್ರಚಿಕಿತ್ಸೆ, ಎಲುಬು ಮತ್ತು ಕೀಲು ಚಿಕಿತ್ಸೆ, ಕಿವಿ, ಮೂಗು ಹಾಗೂ ಗಂಟಲು, ಹೆರಿಗೆ ಮತ್ತು ಪ್ರಸೂತಿ, ಚಿಕ್ಕಮಕ್ಕಳ ಚಿಕಿತ್ಸೆ, ಚರ್ಮರೋಗ ಚಿಕಿತ್ಸೆ, ನೇತ್ರ ಚಿಕಿತ್ಸೆ, ಹೃದ್ರೋಗ ಚಿಕಿತ್ಸೆ ಹಾಗೂ ನರ ರೋಗ ಚಿಕಿತ್ಸೆ ವಿಭಾಗಗಳ ವೈದ್ಯರು ತಪಾಸಣೆ ನಡೆಸಲಾಯಿತು.

ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಗ್ರಾಮದ ಪಿ.ಕೆ.ಪಿ.ಎಸ್ ಅಧ್ಯಕ್ಷ ಎ. ಎಂ. ಪಾಟೀಲ ಅವರು ಕೆಕ್ ಕಟ್ ಮಾಡುವ ಮೂಲಕ ಶಿಬಿರವನ್ನು ಉದ್ಘಾಟಿಸಿದರು.

ಈ ಶಿಬಿರದಲ್ಲಿ ಸುಮಾರು 500ಕ್ಕೂ ಹೆಚ್ಚು ಜನರ ಆರೋಗ್ಯ ತಪಾಸಣೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಮೆಡಿಕಲ್ ಕಾಲೇಜಿನ ಪ್ರಾಚಾರ್ಯೆ ಡಾ. ತೇಜಸ್ವಿನಿ ವಲ್ಲಭ, ವೈದ್ಯರಾದ ಡಾ. ಅರುಣ ಎಂ. ಬಿರಾದಾರ, ಡಾ. ಎಸ್. ಎಂ. ಬಿರಾದಾರ, ಡಾ. ರಮಾಕಾಂತ ಬಳೂರಕರ, ಡಾ. ಅನೀಲ ಬುಳಗೊಂಡ, ಡಾ. ಪ್ರವೀಣ ಗಂಗನಹಳ್ಳಿ, ಡಾ. ಶೃತಿ ಕುಲಕರ್ಣಿ, ಡಾ. ಪೂಜಾ ತೊದಲಬಾಗಿ, ಗ್ರಾ. ಪಂ. ಅಧ್ಯಕ್ಷ ನಿoಗೊಂಡ ಸಿಂದಗಿ, ಚನ್ನಪ್ಪಗೌಡ ಬಿರಾದಾರ, ಮುಖಂಡರಾದ ಸುಭಾಷ ಕಲ್ಯಾಣ, ಬಾಳಪ್ಪ ಮಸಳಿ, ಕಲ್ಲನಗೌಡ ಪಾಟೀಲ, ಅಡಿವೆಪ್ಪ ಮಂಗಾನವರ, ದ್ಯಾವನಗೌಡ ಪಾಟೀಲ, ಬಿ. ಬಿ. ಬಿರಾದಾರ, ಕಾಶಿರಾಯ ಸೊನ್ನದ, ಮಲ್ಲಿಕಾರ್ಜುನ ಪಡಗಾನೂರ ಮುಂತಾದವರು ಉಪಸ್ಥಿತರಿದ್ದರು.

ಬಬಲೇಶ್ವರ ತಾಲೂಕಿನ ದೇವರ ಗೆಣ್ಣೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ವಿ. ಜಿ. ಅರಕೇರಿ ಶಿಬಿರವನ್ನು ಉದ್ಘಾಟಿಸಿದರು. ಈ ವೇಳೆ 629 ಜನರು ಚಿಕಿತ್ಸೆ ಪಡೆದುಕೊಂಡರು. ಉದ್ಘಾಟನೆ ಕಾರ್ಯಕ್ರಮದಲ್ಲಿ ಗಂಗಯ್ಯಸ್ವಾಮಿ ಹಿರೇಮಠ ಸಾನಿಧ್ಯ ವಹಿಸಿದ್ದರು. ಈ ಸಂದರ್ಭದಲ್ಲಿ ಮುಖಂಡರಾದ ಶಟ್ಟಪ್ಪಗೌಡ ಬಿರಾದಾರ, ತಿಮ್ಮಣ್ಣ ಬಿರಾದಾರ, ರಾಜು ಮ್ಯಾಗೇರಿ, ಅಶೋಕ ಗುರಡ್ಡಿ, ರಾಮನಗೌಡ ಪಾಟೀಲ, ಗೋವಿಂದಗೌಡ ಪಾಟೀಲ, ರಾಚಪ್ಪ ವಿ. ಗಡದಾನಿ, ಗೌಡಪ್ಪ ಯಡಹಳ್ಳಿ, ಗೂಳಪ್ಪ ಯಡಹಳ್ಳಿ, ರಾಜುಗೌಡ ಪಾಟೀಲ, ಶಿವಾನಂದ ಆರ್. ಬಿರಾದಾರ, ಭಗವಂತ ಚಲವಾದಿ, ಬಾಬು ಚಲವಾದಿ, ಸೋಮಲಿಂಗ ಜಮಖಂಡಿ, ಶಿವಪ್ಪ ಎಮ್ಮೆಣ್ಣವರ, ಶಿವನಗೌಡ ಪಾಟೀಲ, ರವಿ ಬಿರಾದಾರ, ಭರತ ಗಸ್ತಿ, ಹಣಮಂತ ಸಿದರಡ್ಡಿ, ಶಂಕ್ರೆಪ್ಪ ಜನವಾಡ, ಕಲ್ಲಪ್ಪ ಗಡದಾನಿ, ಬಂದಗಿಸಾಬ ಮುಲ್ಲಾ, ವೈದ್ಯರಾದ ಡಾ. ಶರಣು ಬಡಿಗೇರ, ಡಾ. ಎಚ್. ಆರ್. ಬಿರಾದಾರ, ಡಾ. ನೀಲಮ್ಮ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ತಿಕೋಟಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರೇಮಠದ ಶ್ರೀ ಶಿವಬಸವ ಶಿವಾಚಾರ್ಯರು ಶಿಬಿರ ಉದ್ಗಾಟಿಸಿದರು. ಈ ಶಿಬಿರದಲ್ಲಿ 500ಕ್ಕೂ ಹೆಚ್ಚು ಜನರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು.

ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸಂಪತ ಗುಣಾರಿ, ಬಿ.ಎಲ್.ಡಿ.ಇ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ತಾಲೂಕು ಆರೋಗ್ಯಾಧಿಕಾರಿ ಕೆ. ಸಿ. ಗುಂಡಬಾವಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮುಖಂಡರಾದ ಜಗದೀಶಗೌಡ ಪಾಟೀಲ, ವಿಜುಗೌಡ ಪಾಟೀಲ, ಬಸಯ್ಯ ಸ್ವಾಮಿ, ಯಾಕೂಬ್ ಜತ್ತಿ, ಹಾಜಿಲಾಲ ಭಾಗವಾನ, ಹಸನ್, ಹಾಜಿಲಾಲ ಕೊಟ್ಟಲಗಿ, ಮಮ್ಮು ಮುಜಾವರ, ಯಮನಪ್ಪ ಮಲಕನವರ, ಸದಾಶಿವ ಪೂಜಾರಿ, ಡಾ. ಅಕ್ಷಯ ವಾಗಮೋರೆ ಮುಂತಾದವರು ಉಪಸ್ಥಿತರಿದ್ದರು.

ಬಬಲೇಶ್ವರದಲ್ಲಿ ನಡೆದ ಆರೋಗ್ಯ ತಪಾಸಣೆ ಶಿಬಿರವನ್ನು ಜಿ. ಪಂ. ಮಾಜಿ ಅಧ್ಯಕ್ಷ ವಿ. ಎಸ್. ಪಾಟೀಲ ಉದ್ಘಾಟಿಸಿದರು. ಈ ಶಿಬಿರದಲ್ಲಿ 415 ಜನರ ಆರೋಗ್ಯ ತಪಾಸಣೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ವೈದ್ಯರಾದ ಡಾ. ಆನಂದ ಪಾಟೀಲ, ಡಾ. ವಿಜಯಕುಮಾರ ವಾರದ, ಡಾ. ಉದಯಕುಮಾರ ನುಚ್ಚಿ, ಡಾ. ವಲ್ಲಭ ಕೆ., ಡಾ. ಸಮೀರ, ಡಾ. ಹುಸೇನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ಮುಖಂಡರಾದ ಬಿ. ಜಿ. ಬಿರಾದಾರ, ಮಲ್ಲು ಮರ್ಯಾಣಿ, ಆನಂದ ಬೂದಿಹಾಳ, ಪರಶುರಾಮ ಪಡಾಗರ, ವಿಶ್ವಾಸ ಕಾಂಬಳೆ, ಸಿದ್ದರಾಯ ಆಡಿನ್ ಮುಂತಾದವರು ಉಪಸ್ಥಿತರಿದ್ದರು.

ಆಧುನಿಕ ಭಗೀರಥ ಮತ್ತು ಜಲನಾಯಕ ಎಂದೇ ಹೆಸರಾಗಿರುವ ಎಂ. ಬಿ. ಪಾಟೀಲ ಅವರ ಜನ್ಮದಿನವನ್ನು ನಾಲ್ಕು ಕಡೆಗಳಲ್ಲಿ ಸಾರ್ವಜನಿಕರ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಬೃಹತ್ ಶಿಬಿರ ಆಯೋಜಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ್ದು ಗಮನ ಸೆಳೆಯಿತು.

ಸಚಿವ ಎಂ. ಬಿ. ಪಾಟೀಲ ಅವರ ಜನ್ಮದಿನದ ಅಂಗವಾಗಿ ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿಯಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಬೃಹತ್ ಶಿಬಿರವನ್ನು ಗ್ರಾಮದ ಪಿ.ಕೆ.ಪಿ.ಎಸ್ ಅಧ್ಯಕ್ಷ ಎ. ಎಂ. ಪಾಟೀಲ ಅವರು ಕೆಕ್ ಕಟ್ ಮಾಡುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮೆಡಿಕಲ್ ಕಾಲೇಜಿನ ಪ್ರಾಚಾರ್ಯೆ ಡಾ. ತೇಜಸ್ವಿನಿ ವಲ್ಲಭ, ವೈದ್ಯರಾದ ಡಾ. ಅರುಣ ಎಂ. ಬಿರಾದಾರ, ಡಾ. ಎಸ್. ಎಂ. ಬಿರಾದಾರ, ಡಾ. ರಮಾಕಾಂತ ಬಳೂರಕರ, ಡಾ. ಅನೀಲ ಬುಳಗೊಂಡ, ಡಾ. ಪ್ರವೀಣ ಗಂಗನಹಳ್ಳಿ, ಡಾ. ಶೃತಿ ಕುಲಕರ್ಣಿ, ಡಾ. ಪೂಜಾ ತೊದಲಬಾಗಿ, ಗ್ರಾ. ಪಂ. ಅಧ್ಯಕ್ಷ ನಿoಗೊಂಡ ಸಿಂದಗಿ, ಚನ್ನಪ್ಪಗೌಡ ಬಿರಾದಾರ, ಮುಖಂಡರಾದ ಸುಭಾಷ ಕಲ್ಯಾಣ, ಬಾಳಪ್ಪ ಮಸಳಿ, ಕಲ್ಲನಗೌಡ ಪಾಟೀಲ, ಅಡಿವೆಪ್ಪ ಮಂಗಾನವರ, ದ್ಯಾವನಗೌಡ ಪಾಟೀಲ, ಬಿ. ಬಿ. ಬಿರಾದಾರ, ಕಾಶಿರಾಯ ಸೊನ್ನದ, ಮಲ್ಲಿಕಾರ್ಜುನ ಪಡಗಾನೂರ ಮುಂತಾದವರು ಉಪಸ್ಥಿತರಿದ್ದರು.

ಸಚಿವ ಎಂ. ಬಿ. ಪಾಟೀಲ ಅವರ ಜನ್ಮದಿನದ ಅಂಗವಾಗಿ ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ದೇವರ ಗೆಣ್ಣೂರಿನಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಬೃಹತ್ ಶಿಬಿರವನ್ನು ನಿವೃತ್ತ ಶಿಕ್ಷಕ ವಿ. ಜಿ. ಅರಕೇರಿ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಗಂಗಯ್ಯಸ್ವಾಮಿ ಹಿರೇಮಠ, ಮುಖಂಡರಾದ ಶಟ್ಟಪ್ಪಗೌಡ ಬಿರಾದಾರ, ತಿಮ್ಮಣ್ಣ ಬಿರಾದಾರ, ರಾಜು ಮ್ಯಾಗೇರಿ, ಅಶೋಕ ಗುರಡ್ಡಿ, ರಾಮನಗೌಡ ಪಾಟೀಲ, ಗೋವಿಂದಗೌಡ ಪಾಟೀಲ, ರಾಚಪ್ಪ ವಿ. ಗಡದಾನಿ, ಗೌಡಪ್ಪ ಯಡಹಳ್ಳಿ, ಗೂಳಪ್ಪ ಯಡಹಳ್ಳಿ, ರಾಜುಗೌಡ ಪಾಟೀಲ, ಶಿವಾನಂದ ಆರ್. ಬಿರಾದಾರ, ಭಗವಂತ ಚಲವಾದಿ, ಬಾಬು ಚಲವಾದಿ, ಸೋಮಲಿಂಗ ಜಮಖಂಡಿ, ಶಿವಪ್ಪ ಎಮ್ಮೆಣ್ಣವರ, ಶಿವನಗೌಡ ಪಾಟೀಲ, ರವಿ ಬಿರಾದಾರ, ಭರತ ಗಸ್ತಿ, ಹಣಮಂತ ಸಿದರಡ್ಡಿ, ಶಂಕ್ರೆಪ್ಪ ಜನವಾಡ, ಕಲ್ಲಪ್ಪ ಗಡದಾನಿ, ಬಂದಗಿಸಾಬ ಮುಲ್ಲಾ, ವೈದ್ಯರಾದ ಡಾ. ಶರಣು ಬಡಿಗೇರ, ಡಾ. ಎಚ್. ಆರ್. ಬಿರಾದಾರ, ಡಾ. ನೀಲಮ್ಮ ಪಾಟೀಲ ಮುಂತಾದವರು ಉಪಸ್ಥಿತರಿದ್ದರು.

ಸಚಿವ ಎಂ. ಬಿ. ಪಾಟೀಲ ಅವರ ಜನ್ಮದಿನದ ಅಂಗವಾಗಿ ವಿಜಯಪುರ ಜಿಲ್ಲೆಯ ತಿಕೋಟಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹಿರೇಮಠದ ಶ್ರೀ ಶಿವಬಸವ ಶಿವಾಚಾರ್ಯರು ಶಿಬಿರ ಉದ್ಗಾಟಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸಂಪತ ಗುಣಾರಿ, ಬಿ.ಎಲ್.ಡಿ.ಇ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ರಾಜೇಶ ಹೊನ್ನುಟಗಿ, ತಾಲೂಕು ಆರೋಗ್ಯಾಧಿಕಾರಿ ಕೆ. ಸಿ. ಗುಂಡಬಾವಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮುಖಂಡರಾದ ಜಗದೀಶಗೌಡ ಪಾಟೀಲ, ವಿಜುಗೌಡ ಪಾಟೀಲ, ಬಸಯ್ಯ ಸ್ವಾಮಿ, ಯಾಕೂಬ್ ಜತ್ತಿ, ಹಾಜಿಲಾಲ ಭಾಗವಾನ, ಹಸನ್, ಹಾಜಿಲಾಲ ಕೊಟ್ಟಲಗಿ, ಮಮ್ಮು ಮುಜಾವರ, ಯಮನಪ್ಪ ಮಲಕನವರ, ಸದಾಶಿವ ಪೂಜಾರಿ, ಡಾ. ಅಕ್ಷಯ ವಾಗಮೋರೆ ಮುಂತಾದವರು ಉಪಸ್ಥಿತರಿದ್ದರು.

ಸಚಿವ ಎಂ. ಬಿ. ಪಾಟೀಲ ಅವರ ಜನ್ಮದಿನದ ಅಂಗವಾಗಿ ವಿಜಯಪುರ ಜಿಲ್ಲೆಯ ತಿಕೋಟಾದಲ್ಲಿ ನಡೆದ ಆರೋಗ್ಯ ತಪಾಸಣೆ ಶಿಬಿರವನ್ನು ಜಿ. ಪಂ. ಮಾಜಿ ಅಧ್ಯಕ್ಷ ವಿ. ಎಸ್. ಪಾಟೀಲ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬಿ.ಎಲ್.ಡಿ.ಇ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ. ವಿಜಯಕುಮಾರ ಕಲ್ಯಾಣಪ್ಪಗೋಳ, ವೈದ್ಯರಾದ ಡಾ. ಆನಂದ ಪಾಟೀಲ, ಡಾ. ವಿಜಯಕುಮಾರ ವಾರದ, ಡಾ. ಉದಯಕುಮಾರ ನುಚ್ಚಿ, ಡಾ. ವಲ್ಲಭ ಕೆ., ಡಾ. ಸಮೀರ, ಡಾ. ಹುಸೇನ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಗೊಂಡ ಬಿರಾದಾರ, ಮುಖಂಡರಾದ ಬಿ. ಜಿ. ಬಿರಾದಾರ, ಮಲ್ಲು ಮರ್ಯಾಣಿ, ಆನಂದ ಬೂದಿಹಾಳ, ಪರಶುರಾಮ ಪಡಾಗರ, ವಿಶ್ವಾಸ ಕಾಂಬಳೆ, ಸಿದ್ದರಾಯ ಆಡಿನ್ ಮುಂತಾದವರು ಉಪಸ್ಥಿತರಿದ್ದರು.

ಆಧುನಿಕ ಭಗೀರಥ ಮತ್ತು ಜಲನಾಯಕ ಎಂದೇ ಹೆಸರಾಗಿರುವ ಎಂ. ಬಿ. ಪಾಟೀಲ ಅವರ ಜನ್ಮದಿನವನ್ನು ನಾಲ್ಕು ಕಡೆಗಳಲ್ಲಿ ಸಾರ್ವಜನಿಕರ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆ ಬೃಹತ್ ಶಿಬಿರ ಆಯೋಜಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಿದ್ದು ಗಮನ ಸೆಳೆಯಿತು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande