ಯಶವಂತಪುರ–ತಾಳಗುಪ್ಪ ನಡುವೆ ರೈಲು ಸೇವೆಗಳ ವಿಸ್ತರಣೆ
ಮೈಸೂರು, 07 ಅಕ್ಟೋಬರ್ (ಹಿ.ಸ.) : ಆ್ಯಂಕರ್ : ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸುವ ಸಲುವಾಗಿ ಯಶವಂತಪುರ–ತಾಳಗುಪ್ಪ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ವಿಸ್ತರಿಸಲಾಗಿದೆ. ಈ ರೈಲು ಪ್ರತಿ ದಿಕ್ಕಿನಲ್ಲಿ ಎರಡು ಟ್ರಿಪ್ಗಳನ್ನು ಪೂರ್ಣಗೊಳಿಸಲಿದೆ.
ಯಶವಂತಪುರ–ತಾಳಗುಪ್ಪ ನಡುವೆ ರೈಲು ಸೇವೆಗಳ ವಿಸ್ತರಣೆ


ಮೈಸೂರು, 07 ಅಕ್ಟೋಬರ್ (ಹಿ.ಸ.) :

ಆ್ಯಂಕರ್ : ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ಹೆಚ್ಚುವರಿ ದಟ್ಟಣೆ ನಿವಾರಿಸುವ ಸಲುವಾಗಿ ಯಶವಂತಪುರ–ತಾಳಗುಪ್ಪ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ವಿಸ್ತರಿಸಲಾಗಿದೆ. ಈ ರೈಲು ಪ್ರತಿ ದಿಕ್ಕಿನಲ್ಲಿ ಎರಡು ಟ್ರಿಪ್ಗಳನ್ನು ಪೂರ್ಣಗೊಳಿಸಲಿದೆ.

ರೈಲು ಸಂಖ್ಯೆ 06587 ಯಶವಂತಪುರ–ತಾಳಗುಪ್ಪ ಎಕ್ಸ್‌ಪ್ರೆಸ್‌ ವಿಶೇಷ ರೈಲು ಅಕ್ಟೋಬರ್ 17 ಮತ್ತು 24 ರಂದು ರಾತ್ರಿ 10.30ಕ್ಕೆ ಯಶವಂತಪುರ ನಿಲ್ದಾಣದಿಂದ ಹೊರಟು, ಮರುದಿನ ಮುಂಜಾನೆ 4.15ಕ್ಕೆ ತಾಳಗುಪ್ಪ ತಲುಪಲಿದೆ. ಮತ್ತೊಂದೆಡೆ, ರೈಲು ಸಂಖ್ಯೆ 06588 ತಾಳಗುಪ್ಪ–ಯಶವಂತಪುರ ಎಕ್ಸ್‌ಪ್ರೆಸ್‌ ವಿಶೇಷ ರೈಲು ಅಕ್ಟೋಬರ್ 18 ಮತ್ತು 25 ರಂದು ತಾಳಗುಪ್ಪದಿಂದ ಬೆಳಗ್ಗೆ 10 ಗಂಟೆಗೆ ಹೊರಟು, ಅದೇ ದಿನ ಸಂಜೆ 5.15ಕ್ಕೆ ಯಶವಂತಪುರ ತಲುಪಲಿದೆ.

ಈ ವಿಶೇಷ ರೈಲು, ಎರಡೂ ಮಾರ್ಗದಲ್ಲಿ ತುಮಕೂರು, ತಿಪಟೂರು, ಅರಸೀಕೆರೆ, ಬೀರೂರು, ತರೀಕೆರೆ, ಭದ್ರಾವತಿ, ಶಿವಮೊಗ್ಗ ಟೌನ್, ಆನಂದಪುರಂ ಹಾಗೂ ಸಾಗರ ಜಂಬಗಾರು ನಿಲ್ದಾಣಗಳಲ್ಲಿ ನಿಲುಗಡೆಗೊಳ್ಳಲಿದೆ.

ಈ ವಿಶೇಷ ರೈಲಿನಲ್ಲಿ ಒಟ್ಟು 20 ಬೋಗಿಗಳಿರಲಿವೆ. ಅವುಗಳಲ್ಲಿ ಒಂದು ಎಸಿ ಟು-ಟಯರ್, ಎರಡು ಎಸಿ ಥ್ರೀ-ಟಯರ್, ಹತ್ತು ಸ್ಲೀಪರ್ ಕ್ಲಾಸ್, ಐದು ಸಾಮಾನ್ಯ ದ್ವಿತೀಯ ದರ್ಜೆ ಹಾಗೂ ಎರಡು ದ್ವಿತೀಯ ದರ್ಜೆ ಲಗೇಜ್-ಕಮ್-ಬ್ರೇಕ್ ವ್ಯಾನ್ಗಳು ಇರಲಿವೆ ಎಂದು ಮೈಸೂರು ವಿಭಾಗ ಸಾರ್ವಜನಿಕ ಸಂಪರ್ಕ ಅಧಿಕಾರಿ ಪೃಥ್ವಿ ಎಸ್ ಹುಲ್ಲತ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande