ದಲೈಲಾಮಾ ನೇತೃತ್ವದಲ್ಲಿ ಟಿಬೆಟ್ ಜಾಗತಿಕ ಇತಿಹಾಸದಲ್ಲಿ ಹೊಸ ಅಧ್ಯಾಯ ಸೃಷ್ಟಿಸಿದೆ: ಶಾಂತ ಕುಮಾರ್
ಹೊಸ ಅಧ್ಯಾಯ ಸೃಷ್ಟಿಸಿದೆ: ಶಾಂತ ಕುಮಾರ್
dalai-lama-tibetan-history-shanta-kumar


ಶಿಮ್ಲಾ, 05 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

ಟಿಬೆಟಿಯನ್ ಧರ್ಮಗುರು ದಲೈಲಾಮಾ ಅವರ ನೇತೃತ್ವದಲ್ಲಿ ಟಿಬೆಟ್ ಜನತೆ ಜಾಗತಿಕ ಇತಿಹಾಸದಲ್ಲಿ ಒಂದು ಹೊಸ ಅಧ್ಯಾಯವನ್ನು ಸೇರಿಸಿದ್ದಾರೆ ಎಂದು ಹಿಮಾಚಲ ಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ಕೇಂದ್ರ ಸಚಿವ ಶಾಂತ ಕುಮಾರ್ ಬಣ್ಣಿಸಿದ್ದಾರೆ.

ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ಅವರು, ಟಿಬೆಟ್ ಗೆ ಇಂದು ಸ್ವತಂತ್ರ ದೇಶವಿಲ್ಲದಿರಬಹುದು ಮತ್ತು ಅಲ್ಲಿನ ಸಂಸ್ಕೃತಿ, ಗುರುತು ಹಾಗೂ ಅಸ್ತಿತ್ವವನ್ನು ನಾಶಮಾಡುವ ಪ್ರಯತ್ನಗಳು ನಡೆಯುತ್ತಿರಬಹುದು. ಆದರೂ ಟಿಬೆಟ್ ರಾಷ್ಟ್ರವು ಜಾಗತಿಕ ಇತಿಹಾಸದಲ್ಲಿ ತನ್ನ ಅಸ್ತಿತ್ವ ಮತ್ತು ಗೌರವವನ್ನು ಉಳಿಸಿಕೊಂಡಿದೆ ಎಂದು ತಿಳಿಸಿದ್ದಾರೆ.

ಟಿಬೆಟ್ಗೆ ಸ್ವಂತ ದೇಶವಿಲ್ಲದಿದ್ದರೂ ತನ್ನದೇ ಆದ ಸರ್ಕಾರ, ಸಂಸತ್ತು, ಪ್ರಧಾನಮಂತ್ರಿ ಮತ್ತು ಸಚಿವರನ್ನು ಹೊಂದಿದೆ. ಸಂಸತ್ತಿಗೆ ನಿಯಮಿತವಾಗಿ ಚುನಾವಣೆಗಳು ನಡೆಯುತ್ತವೆ ಮತ್ತು ಜಗತ್ತಿನ ವಿವಿಧ ದೇಶಗಳಲ್ಲಿ ವಾಸಿಸುವ ಟಿಬೆಟಿಯನ್ ನಾಗರಿಕರು ಇದರಲ್ಲಿ ಮತ ಚಲಾಯಿಸುತ್ತಾರೆ.ವಿಶ್ವದಲ್ಲೇ ಅಪರೂಪದ ವಿದ್ಯಮಾನ: ಯಾವುದೇ ರಾಷ್ಟ್ರವು ತನ್ನ ದೇಶವನ್ನು ಕಳೆದುಕೊಂಡರೂ ಅದರ ರಾಷ್ಟ್ರೀಯ ಗುರುತು, ಸರ್ಕಾರ ಮತ್ತು ಸಂಸತ್ತು ಜೀವಂತವಾಗಿ, ಪ್ರಜಾಸತ್ತಾತ್ಮಕ ವ್ಯವಸ್ಥೆಯ ಮೂಲಕ ಕಾರ್ಯನಿರ್ವಹಿಸುತ್ತಿರುವುದು ಜಾಗತಿಕ ಇತಿಹಾಸದಲ್ಲೇ ಅತ್ಯಂತ ಅನನ್ಯ ಘಟನೆಯಾಗಿದೆ.

ಟಿಬೆಟ್ ದೀರ್ಘಕಾಲದಿಂದ ಶಾಂತಿಯುತ ಜೀವನ ನಡೆಸುತ್ತ ಬಂದಿರುವ ದೇಶವಾಗಿದೆ. ಮಹಾತ್ಮ ಬುದ್ಧ ಭಾರತದಲ್ಲಿ ಜನಿಸಿದರೂ, ಬೌದ್ಧ ಧರ್ಮದ ಆಳವಾದ ತತ್ವಜ್ಞಾನ ಮತ್ತು ಆಧ್ಯಾತ್ಮಿಕ ಪರಂಪರೆಗಳು ಟಿಬೆಟ್ನಲ್ಲಿ ವ್ಯಾಪಕವಾಗಿ ಬೆಳೆದು ಬಂದವು. ಸಣ್ಣ ದೇಶವಾದ ಟಿಬೆಟ್ ಎಂದಿಗೂ ಯಾರ ಮೇಲೂ ಆಕ್ರಮಣಕಾರಿ ದೃಷ್ಟಿಹಾಯಿಸಿರಲಿಲ್ಲ.

ಚೀನಾವು ಟಿಬೆಟ್ ಮೇಲೆ ಅಕ್ರಮವಾಗಿ ಕಬಳಿಕೆ ನಡೆಸಿ, ಅಲ್ಲಿನ ಗುರುತನ್ನು ನಾಶಮಾಡಲು ನಡೆಸುತ್ತಿರುವ ಪ್ರಯತ್ನಗಳು ಈ ಶತಮಾನದ ದೊಡ್ಡ ದುರಂತ ಮತ್ತು ಮಹಾಪಾಪ ಎಂದು ಶಾಂತ ಕುಮಾರ್ ತೀವ್ರವಾಗಿ ಟೀಕಿಸಿದ್ದಾರೆ.

ಟಿಬೆಟ್ ಈ ಸಾಧನೆ ಮಾಡಲು ಮತ್ತು ಜಾಗತಿಕ ಮಟ್ಟದಲ್ಲಿ ತನ್ನ ಅಸ್ತಿತ್ವವನ್ನು ಜೀವಂತವಾಗಿಡಲು ಧರ್ಮಗುರು ದಲೈಲಾಮಾ ಅವರ ದೀರ್ಘ ಹೋರಾಟ ಹಾಗೂ ಶಾಂತಿಯುತ ಪ್ರಯತ್ನಗಳೇ ಪ್ರಮುಖ ಕಾರಣ ಎಂದು ಅವರು ಶ್ಲಾಘಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande