
ಹೊಸದಿಲ್ಲಿ, 05 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್:
ಸ್ವಾತಂತ್ರ್ಯ ಹೋರಾಟಗಾರ ವಿ.ಒ. ಚಿದಂಬರಂ ಪಿಳ್ಳೈ ಅವರ ಜನ್ಮದಿನದ ಅಂಗವಾಗಿ ಉಪರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರು ಶನಿವಾರ ಗೌರವ ನಮನ ಸಲ್ಲಿಸಿದ್ದಾರೆ.
ಉಪರಾಷ್ಟ್ರಪತಿಗಳು ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ , ಸ್ವಾತಂತ್ರ್ಯ ಹೋರಾಟಗಾರ ವಿ.ಒ. ಚಿದಂಬರಂ ಪಿಳ್ಳೈ ಅವರ ಜನ್ಮದಿನದಂದು ಈ ಮಹಾನ್ ದೇಶಭಕ್ತನಿಗೆ ನನ್ನ ನಮನಗಳು. ಅವರ ಧೈರ್ಯ, ತ್ಯಾಗ ಮತ್ತು ರಾಷ್ಟ್ರದ ಕಡೆಗಿನ ಅಚಲ ಸಮರ್ಪಣಾ ಭಾವವು ನಮ್ಮೆಲ್ಲರಿಗೂ ಸದಾ ಸ್ಫೂರ್ತಿಯಾಗಿದೆ. 'ಕಪ್ಪಲೊಟ್ಟಿಯಾ ತಮಿಳನ್' ತಮಿಳು ನಾವಿಕ ಎಂದೇ ಪ್ರೀತಿಯಿಂದ ಸ್ಮರಿಸಲ್ಪಡುವ ಅವರು, ದೇಶಸೇವೆಗಾಗಿ ಸೌಕರ್ಯಗಳ ಜೀವನವನ್ನೇ ತ್ಯಜಿಸಿದ್ದರು. ಸ್ವದೇಶಿ ಸ್ಟೀಮ್ ನ್ಯಾವಿಗೇಷನ್ ಕಂಪನಿ ಮೂಲಕ ಬ್ರಿಟಿಷರ ವ್ಯಾಪಾರ ಪ್ರಾಬಲ್ಯವನ್ನು ಸವಾಲಿಗೆೊಡ್ಡಿ, ಸ್ವದೇಶಿ ಹಾಗೂ ಆತ್ಮನಿರ್ಭರತೆಯ ಸ್ವಾವಲಂಬನೆ ಭಾವನೆಗೆ ಬಲವಾದ ಸ್ಪೂರ್ತಿ ನೀಡಿದರು.
ಭಾರತದ ಸ್ವಾತಂತ್ರ್ಯಕ್ಕಾಗಿ ಅವರು ಅಸಾಧಾರಣ ಧೈರ್ಯದಿಂದ ಸೆರೆವಾಸ ಹಾಗೂ ಕಠಿಣ ಯಾತನೆಗಳನ್ನು ಎದುರಿಸಿದರು. ಬಲವಾದ, ಸಮೃದ್ಧ, ವಿಕಸಿತ ಮತ್ತು ಸ್ವಾವಲಂಬಿ ಭಾರತ ನಿರ್ಮಾಣದ ಸಂಕಲ್ಪ ಮಾಡುವ ಮೂಲಕ ಅವರ ಸ್ಮರಣೆಗೆ ಗೌರವ ಸಲ್ಲಿಸೋಣ ಎಂದಿದ್ದಾರೆ.
ಸೆಪ್ಟೆಂಬರ್ 5, 1872ರಂದು ತಮಿಳುನಾಡಿನ ತಿರುನೆಲ್ವೇಲಿ ಜಿಲ್ಲೆಯ ಒಟ್ಟಪಿಡಾರಮ್ನಲ್ಲಿ ಜನಿಸಿದ ಚಿದಂಬರಂ ಪಿಳ್ಳೈ ಅವರು ಸ್ವಾತಂತ್ರ್ಯ ಹೋರಾಟಗಾರರ ಜತೆಗೆ ವಕೀಲರು, ಉದ್ಯಮಿ ಮತ್ತು ತಮಿಳು ವಿದ್ವಾಂಸರೂ ಆಗಿದ್ದರು.
ಬ್ರಿಟಿಷರ ವ್ಯಾಪಾರ ಏಕಸ್ವಾಮ್ಯವನ್ನು ಮುರಿಯಲು ಅವರು 1906ರಲ್ಲಿ 'ಸ್ವದೇಶಿ ಸ್ಟೀಮ್ ನ್ಯಾವಿಗೇಷನ್ ಕಂಪನಿ'ಯನ್ನು ಸ್ಥಾಪಿಸಿದರು. ಅಲ್ಲದೆ, ತೂತ್ತುಕುಡಿ (ಟುಟಿಕೋರಿನ್) ಮತ್ತು ಕೊಲಂಬೊ ನಡುವೆ ಪ್ರಥಮ ಸ್ವದೇಶಿ ಭಾರತೀಯ ನೌಕಾ ಸೇವೆಯನ್ನು ಆರಂಭಿಸಿದರು.
ಚಿದಂಬರಂ ಅವರು 1908ರಲ್ಲಿ ತೂತ್ತುಕುಡಿಯ ಕೋರಲ್ ಮಿಲ್ ಕಾರ್ಮಿಕರನ್ನು ಒಗ್ಗೂಡಿಸಿ ಐತಿಹಾಸಿಕ ಮುಷ್ಕರದ ನೇತೃತ್ವ ವಹಿಸಿದ್ದರು. ಬ್ರಿಟಿಷ್ ಸರ್ಕಾರವು ಅವರ ಸ್ವದೇಶಿ ಹಾಗೂ ರಾಷ್ಟ್ರೀಯವಾದಿ ಚಟುವಟಿಕೆಗಳಿಂದ ಕೆರಳ, ರಾಜದ್ರೋಹದ ಆರೋಪ ಹೊರಿಸಿ ಕಠಿಣ ಸೆರೆವಾಸ ವಿಧಿಸಿತು. ಜೈಲಿನಲ್ಲಿ ಅವರನ್ನು ಎತ್ತುಗಳ ಬದಲು ಕೊಕ್ಕರೆಗೆ (ಕೋಲುಗೆ) ಕಟ್ಟಿ ಎಣ್ಣೆ ಆಡಿಸುವಂತೆ ಕಠಿಣ ಹಿಂಸೆ ನೀಡಲಾಗಿದ್ದು, ಇದರಿಂದಾಗಿ ಅವರನ್ನು 'ಸೆಕ್ಕಿಜುತ್ಥ ಸೆಮ್ಮಲ್' ಎಂದೂ ಕರೆಯಲಾಗುತ್ತದೆ ಎಂದಿದ್ದಾರೆ.
---------------
ಹಿಂದೂಸ್ತಾನ್ ಸಮಾಚಾರ್ / BHARGAVI G R