ಯುಪಿಐ ಶುಲ್ಕ: ಲಾಭ ಅಮೆರಿಕನ್ ಕಂಪನಿಗಳಿಗೆ, ಹೊರೆ ಸಾಮಾನ್ಯ ಭಾರತೀಯರಿಗೆ; ಸುರ್ಜೇವಾಲ
ಸುರ್ಜೇವಾಲ
Surjewala-slams-UPI-transaction-charge-says-benefit-to-US-companies-burden-on-common-Indians


ಬೆಂಗಳೂರು, 16 ಸೆಪ್ಟೆಂಬರ್ (ಹಿ.ಸ.)

ಆ್ಯಂಕರ್:

₹2,000ಕ್ಕಿಂತ ಹೆಚ್ಚಿನ ಯುಪಿಐ ವಹಿವಾಟುಗಳಿಗೆ ಶುಲ್ಕ ವಿಧಿಸುವ ಸಾಧ್ಯತೆಯ ಕುರಿತು ಕಾಂಗ್ರೆಸ್ ನಾಯಕ ಹಾಗೂ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೇವಾಲ ಕೇಂದ್ರ ಸರ್ಕಾರದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಕ್ರಮದಿಂದ ಅಂತಿಮವಾಗಿ ಸಾಮಾನ್ಯ ಗ್ರಾಹಕರು ಹಾಗೂ ಸಣ್ಣ ವ್ಯಾಪಾರಿಗಳ ಮೇಲೆ ಹೊರೆ ಬೀಳಲಿದೆ ಎಂದು ಅವರು ಆರೋಪಿಸಿದ್ದಾರೆ.

₹2,000ಕ್ಕಿಂತ ಹೆಚ್ಚಿನ ಹಣ ವ್ಯಕ್ತಿಯಿಂದ ವ್ಯಾಪಾರಿಗೆ ನಡೆಯುವ ಯುಪಿಐ ವಹಿವಾಟುಗಳಿಗೆ ಶೇ 0.4ರಷ್ಟು ಶುಲ್ಕ ವಿಧಿಸುವ ಸಾಧ್ಯತೆ ಕುರಿತು ಸುರ್ಜೇವಾಲ ಪ್ರಶ್ನೆ ಎತ್ತಿದ್ದಾರೆ. ವಹಿವಾಟು ಶುಲ್ಕವನ್ನು ವ್ಯಾಪಾರಿಗಳಿಂದ ವಸೂಲಿ ಮಾಡಿದರೂ, ಅದರ ಪರಿಣಾಮ ವಸ್ತುಗಳ ಬೆಲೆ ಏರಿಕೆಯ ಮೂಲಕ ಗ್ರಾಹಕರಿಗೆ ವರ್ಗಾವಣೆಯಾಗಬಹುದು ಎಂದು ಅವರು ಹೇಳಿದ್ದಾರೆ.

“ಅಮೆರಿಕನ್ ಕಂಪನಿಗಳು ಲಾಭ ಪಡೆಯಲಿವೆ, ಸಾಮಾನ್ಯ ಭಾರತೀಯರು ಹೊರೆ ಹೊರಬೇಕಾಗುತ್ತದೆ. ಯುಪಿಐ ಅನ್ನು ತೆರಿಗೆ ಮತ್ತು ಶುಲ್ಕ ಸಂಗ್ರಹದ ವ್ಯವಸ್ಥೆಯನ್ನಾಗಿ ಪರಿವರ್ತಿಸಲಾಗುತ್ತಿದೆ” ಎಂದು ಸುರ್ಜೇವಾಲ ಆರೋಪಿಸಿದ್ದಾರೆ.

ಯುಪಿಐ ವಹಿವಾಟುಗಳ ಮೇಲೆ ಶುಲ್ಕ ವಿಧಿಸುವ ಅವಕಾಶ ಕಲ್ಪಿಸುವ ಕಾನೂನು ಬದಲಾವಣೆಯನ್ನೂ ಅವರು ಪ್ರಶ್ನಿಸಿದ್ದಾರೆ. ಮುಂದಿನ ದಿನಗಳಲ್ಲಿ ಶುಲ್ಕ ಹೆಚ್ಚಿಸುವ ಅಥವಾ ಇತರ ಯುಪಿಐ ವಹಿವಾಟುಗಳಿಗೂ ವಿಸ್ತರಿಸುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande