ಭಾನುವಾರ ಶಿಲ್ಪ–ಕಾವ್ಯಗಳಿಗೆ ನಾಟ್ಯ ಜೀವ: ನಿರುಪಮಾ ರಾಜೇಂದ್ರ ರಸಾರಾಧನೆ
ಬೆಂಗಳೂರು, 16 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್: ದಕ್ಷಿಣ ಭಾರತದ ದೇವಾಲಯಗಳ ಶಿಲ್ಪಕಲೆ ಹಾಗೂ ಸಾಹಿತ್ಯ–ಕಾವ್ಯಗಳನ್ನು ನೃತ್ಯದ ಮೂಲಕ ರಂಗದ ಮೇಲೆ ಜೀವಂತಗೊಳಿಸುವ ಉದ್ದೇಶದ ‘ರಸಾರಾಧನೆ’ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ ಸೆ.20ರಂದು ನಡೆಯಲಿದೆ. ಪ್ರಸಿದ್ಧ ನೃತ್ಯ ಕಲಾವಿದೆ ಹಾಗೂ ಸಂಗೀತ ನಾಟಕ ಅಕಾಡೆಮಿ
NIRUPAMA-RAJENDRA-RASARADHANE-BHARATANATYAM-PROGRAMME-SEPTEMBER-20-BENGALURU


ಬೆಂಗಳೂರು, 16 ಸೆಪ್ಟೆಂಬರ್ (ಹಿ.ಸ.) ಆ್ಯಂಕರ್:

ದಕ್ಷಿಣ ಭಾರತದ ದೇವಾಲಯಗಳ ಶಿಲ್ಪಕಲೆ ಹಾಗೂ ಸಾಹಿತ್ಯ–ಕಾವ್ಯಗಳನ್ನು ನೃತ್ಯದ ಮೂಲಕ ರಂಗದ ಮೇಲೆ ಜೀವಂತಗೊಳಿಸುವ ಉದ್ದೇಶದ ‘ರಸಾರಾಧನೆ’ ಏಕವ್ಯಕ್ತಿ ಭರತನಾಟ್ಯ ಪ್ರದರ್ಶನ ಸೆ.20ರಂದು ನಡೆಯಲಿದೆ.

ಪ್ರಸಿದ್ಧ ನೃತ್ಯ ಕಲಾವಿದೆ ಹಾಗೂ ಸಂಗೀತ ನಾಟಕ ಅಕಾಡೆಮಿ ಪುರಸ್ಕೃತೆ ನಿರುಪಮಾ ರಾಜೇಂದ್ರ ಅವರು ಅಭಿನವ ನೃತ್ಯ ಕಂಪನಿಯ ಮೂಲಕ ಈ ವಿಶೇಷ ನೃತ್ಯ ರೂಪಕವನ್ನು ಪ್ರಸ್ತುತಪಡಿಸಲಿದ್ದಾರೆ.

ಪದ್ಮಭೂಷಣ ಪುರಸ್ಕೃತ ಶತಾವಧಾನಿ ಡಾ. ಆರ್. ಗಣೇಶ್ ಅವರ ಸಾಹಿತ್ಯ ಮತ್ತು ಕಾವ್ಯಗಳನ್ನು ಆಧರಿಸಿ ಪ್ರದರ್ಶನ ರೂಪಿಸಲಾಗಿದೆ. ಕಾರ್ಯಕ್ರಮಕ್ಕೆ ಅವರ ಸಾಹಿತ್ಯಕ್ಕಾಗಿ ವಿಶೇಷವಾಗಿ ಸಂಗೀತ ಸಂಯೋಜನೆ ಮಾಡಲಾಗಿದೆ.

ದಕ್ಷಿಣ ಭಾರತದ ದೇವಾಲಯಗಳ ಶಿಲ್ಪಕಲೆಗಳನ್ನು ನೃತ್ಯಕ್ಕೆ ಅಳವಡಿಸಿಕೊಂಡಿರುವ ಪ್ರದರ್ಶನದಲ್ಲಿ ಶಿಲ್ಪಗಳ ಆಧಾರಿತ ವಿವಿಧ ಕಥಾನಕಗಳು ಮೂಡಿಬರಲಿವೆ. ಕಾಳಿದಾಸನ ‘ಕುಮಾರಸಂಭವ’ ಆಧಾರಿತ ‘ಆತ್ಮ ಸೌಂದರ್ಯ’ ರೂಪಕದಲ್ಲಿ ಪಾರ್ವತಿಯ ತಪಸ್ಸು ಮತ್ತು ಆಂತರಿಕ ಸೌಂದರ್ಯದ ಕಥನವನ್ನು ಸಲಾಗುತ್ತದೆ. ‘ಹರಿಹರ’ ಕೃತಿಯಲ್ಲಿ ಶಿವ–ವಿಷ್ಣುಗಳ ನಡುವಿನ ಪರಸ್ಪರ ಗೌರವ ಹಾಗೂ ದೈವಿಕ ಸಮಾನತೆಯನ್ನು ಬಿಂಬಿಸಲಾಗುತ್ತದೆ.

ಗೃಹಸ್ಥ ಜೀವನದಲ್ಲಿ ನಿಷ್ಠೆ, ಸಂಕಷ್ಟದ ಸಂದರ್ಭದಲ್ಲಿ ಸಂಯಮ ಹಾಗೂ ಆಂತರಿಕ ಸೌಂದರ್ಯದಂತಹ ಮೌಲ್ಯಗಳನ್ನೂ ನೃತ್ಯ–ಭಾವಾಭಿನಯದ ಮೂಲಕ ಪ್ರೇಕ್ಷಕರ ಮುಂದಿಡಲಾಗುತ್ತದೆ.

“ಶಾಸ್ತ್ರೀಯ ಕಲೆಯು ಕೇವಲ ಪುಸ್ತಕದ ಸಾಲುಗಳಾಗಿ ಉಳಿಯದೆ, ರಂಗದ ಮೇಲೆ ‘ರಸ’ವಾಗಿ ಹರಿದಾಗ ಮಾತ್ರ ಸಾರ್ಥಕತೆ ಪಡೆಯುತ್ತದೆ. ಡಾ. ಗಣೇಶ್ ಅವರ ಕಾವ್ಯದಲ್ಲಿನ ಶಾಂತತೆ, ಆಂತರಿಕ ಸೌಂದರ್ಯ ಮತ್ತು ಕಷ್ಟಕಾಲದ ಸಂಯಮದಂತಹ ಮೌಲ್ಯಗಳನ್ನು ಭಾವಾಭಿನಯದ ಮೂಲಕ ಪ್ರೇಕ್ಷಕರಿಗೆ ತಲುಪಿಸುವ ಪ್ರಯತ್ನ ಇದಾಗಿದೆ,” ಎಂದು ಕಾರ್ಯಕ್ರಮದ ಕುರಿತು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

---------------

ಹಿಂದೂಸ್ತಾನ್ ಸಮಾಚಾರ್ / BHARGAVI G R


 rajesh pande