
ಬಳ್ಳಾರಿ, 16 ಸೆಪ್ಟೆಂಬರ್ (ಹಿ.ಸ.)
ಆ್ಯಂಕರ್ : ಸತ್ಯ ಮಾರ್ಗ ಮೆಡಿಟೇಶನ್ ಫೌಂಡೇಶನ್ ವತಿಯಿಂದ ಗ್ರಾಂಡ್ ಮಾಸ್ಟರ್ ಅರುಣ್ ಕುಮಾರ್ ಮಾರ್ಗದರ್ಶನದಲ್ಲಿ ನಗರದ ಸಂಗನಕಲ್ಲು ರಸ್ತೆಯ ಕೆ ಆರ್ ಎಸ್ ಫಂಕ್ಷನ್ ಹಾಲ್ನಲ್ಲಿ ಸೆಪ್ಟೆಂಬರ್ 18, 19 ಮತ್ತು 20ರಂದು ಮೂರು ದಿನಗಳ ಕಾಲ ಬಳ್ಳಾರಿ ಧ್ಯಾನ ಮಹಾ ಯಜ್ಞಂ 10 ಎಂಬ ಪಿರಮಿಡ್ ಧ್ಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಶ್ವೇತಾ ಅರುಣ್ ಕುಮಾರ್ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಬುಧವಾರದಂದು ಸುದ್ದಿಗೋಷ್ಠಿಯನ್ನು ನಡೆಸಿ ಮಾತನಾಡಿದ ಅರುಣ್ ಕುಮಾರ್, ಮನುಷ್ಯ ಇಂದಿನ ಆಧುನಿಕ ಯುಗದಲ್ಲಿ ಮಾನಸಿಕ ದೈಹಿಕ ಸೇರಿದಂತೆ ಹಲವಾರು ಒತ್ತಡಗಳಲ್ಲಿ ಜೀವನ ಕಳೆಯುತ್ತಿದ್ದಾನೆ ಇದರಿಂದ ಬಿಪಿ ಶುಗರ್ ಸೇರಿದಂತೆ ಹಲವು ರೋಗಗಳಿಗೆ ತುತ್ತಾಗುತ್ತಿದ್ದಾನೆ ಈ ಎಲ್ಲಾ ಮಾನಸಿಕ ಒತ್ತಡವನ್ನು ದೂರ ಮಾಡುವ ಸಲುವಾಗಿ ಈ ಧ್ಯಾನ ಮಹಾಯಜ್ಞ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ, ನಗರದ ಸಾರ್ವಜನಿಕರು ಈ ನಮ್ಮ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಮಾನಸಿಕ ಒತ್ತಡವನ್ನು ನಿವಾರಿಸಿಕೊಂಡು ಮಾನಸಿಕ ದೈಹಿಕ ಮತ್ತು ಆಧ್ಯಾತ್ಮಿಕ ಪ್ರಯೋಜನಗಳನ್ನು ಪಡೆದುಕೊಳ್ಳಬೇಕು ಎಂದು ವಿನಂತಿಸಿದರು.
ಈ ಕಾರ್ಯಕ್ರಮದಲ್ಲಿ ಸುಮಾರು 5000 ಜನ ಧ್ಯಾನ ಆಸಕ್ತರು ಧ್ಯಾನ ಸಾಧಕರು ಭಾಗವಹಿಸುವ ನಿರೀಕ್ಷೆ ಇದೆ ಈ ದ್ಯಾನ ಕಾರ್ಯಕ್ರಮದಲ್ಲಿ ಭಾಗವಹಿಸುವ ಎಲ್ಲರಿಗೂ ಊಟ ಮತ್ತು ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ ಎಲ್ಲರೂ ಈ ಧ್ಯಾನ ಕಾರ್ಯಕ್ರಮದ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದರು.
ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಯಾವುದೇ ಶುಲ್ಕ ಇರುವುದಿಲ್ಲ ಸಂಪೂರ್ಣವಾಗಿ ಉಚಿತವಾಗಿರುತ್ತದೆ ಮೊದಲನೇ ದಿನ
ಸೆಪ್ಟಂಬರ್ 18ರಂದು ಮುಂಜಾನೆ 9:00 ಗಂಟೆಗೆ ಆರಂಭವಾಗಿ ರಾತ್ರಿ 9ಕ್ಕೆ ಮುಕ್ತಾಯಗೊಳ್ಳಲಿದೆ ಹಾಗೆ ಸೆಪ್ಟೆಂಬರ್ 19 ಮತ್ತು 20ರಂದು ಬೆಳಗಿನ ಜಾವ ನಾಲ್ಕು ಗಂಟೆಯಿಂದ ಸಂಜೆ 5:00 ವರೆಗೂ ದಾನ ಕಾರ್ಯಕ್ರಮ ನಡೆಯುವುದು ಆಸಕ್ತರು ಈ ಧ್ಯಾನ ಕೇಂದ್ರದಲ್ಲಿ ಭಾಗವಹಿಸಿ ತಮ್ಮ ಒತ್ತಡಗಳನ್ನು ನಿವಾರಿಸಿಕೊಂಡು ಆರೋಗ್ಯದ ಜೀವನ ರೂಪಿಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಪತ್ರಿಕಾಗೋಷ್ಠಿಯಲ್ಲಿ ಗ್ರಾಂಡ್ ಮಾಸ್ಟರ್ ಅರುಣ್ ಕುಮಾರ್, ಹನುಮನ ಗೌಡ ಪರಶುರಾಮ್ ವೈ ಬಾಲಕೃಷ್ಣ ವಿಜಯಲಕ್ಷ್ಮಿ ಮಹೇಶ್ ಇದ್ದರು.
---------------
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್