ಬಾಗೇಪಲ್ಲಿಯಲ್ಲಿ ಪಟ್ಟಣದಲ್ಲಿ ಕೃಷ್ಣಜನ್ಮಾಷ್ಠಮಿ ಮಹೋತ್ಸವ
ಬಾಗೇಪಲ್ಲಿಯಲ್ಲಿ ಪಟ್ಟಣದಲ್ಲಿ ಕೃಷ್ಣಜನ್ಮಾಷ್ಠಮಿ ಮಹೋತ್ಸವ
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯಲ್ಲಿ ಸೋಮವಾರ ಕೃಷ್ಣಜನ್ಮಾಷ್ಟಮಿ ಮೆರವಣಿಗೆ ನಡೆಯಿತು.


ಕೋಲಾರ, 14 ಸೆಪ್ಟೆಂಬರ್ (ಹಿ.ಸ)

ಆ್ಯಂಕರ್ : ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದಲ್ಲಿ ತ್ರೈತಸಿದ್ಧಾಂತ ಅಡಿಯಲ್ಲಿ ಪ್ರಬೋಧ ಸೇವಾ ಸಮಿತಿ ಮತ್ತು ಇಂದೂಜ್ಞಾನ ವೇದಿಕೆ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು.

ಸೆಪ್ಟೆಂಬರ್ ೦೪ ರಿಂದ ೧೩ರವರೆಗೆ ವಿವಿಧ ಕಾರ್ಯಕ್ರಮಗಳು ನಡೆದವು. ಜರುಗಿದ ಈ ಮಹೋತ್ಸವದ ೧೧ನೇ ದಿನವಾದ ಸೋಮವಾರದಂದು, ನಗರದ ಪ್ರಮುಖ ರಸ್ತೆಗಳಲ್ಲಿ ಕೋಲಾಟ ಮತ್ತು ವಿವಿಧ ತಲಾ ತಂಡಗಳ ವೈಭವದೊಂದಿಗೆ ಶ್ರೀ ಕೃಷ್ಣನ ಪಲ್ಲಕ್ಕಿ ಉತ್ಸವ ಹಾಗೂ ಭಗವದ್ಗೀತಾ ಶೋಭಾಯಾತ್ರೆಯನ್ನು ಭಾರಿ ಪ್ರಮಾಣದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದ ಆರಂಭದ ದಿನದಿಂದಲೂ ಊರಿನ ಗ್ರಾಮಸ್ಥರು, ದೈವಭಕ್ತರು, ಆಧ್ಯಾತ್ಮಿಕ ಪ್ರಿಯರು ಹಾಗೂ ಜ್ಞಾನ ಜಿಜ್ಞಾಸುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಆಗಮಿಸಿದ ಮಹಿಳೆಯರಿಗೆ ಅರಿಶಿನ-ಕುಂಕುಮ ಮತ್ತು ದೈವಿಕ ಗ್ರಂಥಗಳನ್ನು ಸೇವಾ ರೂಪದಲ್ಲಿ ನೀಡಲಾಯಿತು. ಸ್ಥಳೀಯ ಯಾದವ ಸಂಘದ ಪ್ರಮುಖರು ವಿಶೇಷ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿದ್ದರು. ಇದೇ ವೇಳೆ ಶ್ರೀ ಕೃಷ್ಣ ಜನ್ಮಾಷ್ಟಮಿಯ ವಿಶಿಷ್ಟತೆ ಹಾಗೂ ಭಗವದ್ಗೀತೆಯ ಮಹತ್ವದ ಕುರಿತು ಉಪನ್ಯಾಸ ನೀಡಲಾಯಿತು.

ತ್ರೈತ ಸಿದ್ಧಾಂತದ ಆದಿಕರ್ತೃಗಳಾದ ಶ್ರೀ ಶ್ರೀ ಶ್ರೀ ಆಚಾರ್ಯ ಪ್ರಬೋಧಾನಂದ ಯೋಗೀಶ್ವರರು ರಚಿಸಿರುವ ಆಧ್ಯಾತ್ಮಿಕ ತ್ರಿಮತ ಗ್ರಂಥಗಳನ್ನು ಸಾರ್ವಜನಿಕರ ಪ್ರದರ್ಶನಕ್ಕೆ ಇರಿಸಲಾಗಿತ್ತು. ಭಕ್ತಾದಿಗಳು ಶ್ರದ್ಧಾಪೂರ್ವಕವಾಗಿ ಈ ಗ್ರಂಥಗಳನ್ನು ವೀಕ್ಷಿಸಿ ಸ್ವೀಕರಿಸಿದರು.

ಶೋಭಾಯಾತ್ರೆ ಹಾಗೂ ಮಹೋತ್ಸವದಲ್ಲಿ ಬಾಗೇಪಲ್ಲಿಯ ಸ್ಥಳೀಯ ನಾಗರಿಕರು ಮಾತ್ರವಲ್ಲದೆ ಬೆಂಗಳೂರು, ಕುಪ್ಪಂ, ಬಂಗಾರುಪಾಳ್ಯ, ಮುಳಬಾಗಿಲು, ನೆಲಮಂಗಲ, ವಿಕೋಟ ಮತ್ತು ಪ್ರಬೋಧ ಆಶ್ರಮ ಸೇರಿದಂತೆ ವಿವಿಧ ಪ್ರಾಂತ್ಯಗಳ ಪ್ರಬೋಧ ಸೇವಾ ಸಮಿತಿಯ ಸರ್ವ ಸದಸ್ಯರು ಮತ್ತು ಭಕ್ತಾದಿಗಳು ಸೇರಿದಂತೆ ಸುಮಾರು ೫೦೦ಕ್ಕೂ ಹೆಚ್ಚು ಜನರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಆಗಮಿಸಿದ ಎಲ್ಲಾ ಭಕ್ತಾದಿಗಳಿಗೆ ತೀರ್ಥ ಪ್ರಸಾದ ವಿನಿಯೋಗ ಮಾಡಲಾಯಿತು.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande