ಗಣೇಶ ಚತುರ್ಥಿ: ದೇಶವಾಸಿಗಳಿಗೆ ಪ್ರಧಾನಿ ಮೋದಿ ಶುಭಾಶಯ
ನವದೆಹಲಿ, 14 ಸೆಪ್ಟೆಂಬರ್ (ಹಿ.ಸ.): ಆ್ಯಂಕರ್:ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಶುಭಾಶಯ ಕೋರಿದ್ದು, ವಿಘ್ನಹರ್ತನ ಆಶೀರ್ವಾದದಿಂದ ಎಲ್ಲರ ಜೀವನದಲ್ಲಿ ಹೊಸ ಶಕ್ತಿ ಮತ್ತು ಉತ್ಸಾಹ ಮೂಡಲಿ ಎಂದು ಹಾರೈಸಿದ್ದಾರೆ. ಈ ಕುರಿತು ಎಕ್ಸ್‌ನಲ್ಲಿ ಸಂದೇಶ ಹಂ
ಪ್ರಧಾನಿ ನರೇಂದ್ರ ಮೋದಿ ಎಕ್ಸ್ ಪೋಸ್ಟ್


ನವದೆಹಲಿ, 14 ಸೆಪ್ಟೆಂಬರ್ (ಹಿ.ಸ.):

ಆ್ಯಂಕರ್:ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ದೇಶವಾಸಿಗಳಿಗೆ ಶುಭಾಶಯ ಕೋರಿದ್ದು, ವಿಘ್ನಹರ್ತನ ಆಶೀರ್ವಾದದಿಂದ ಎಲ್ಲರ ಜೀವನದಲ್ಲಿ ಹೊಸ ಶಕ್ತಿ ಮತ್ತು ಉತ್ಸಾಹ ಮೂಡಲಿ ಎಂದು ಹಾರೈಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಸಂದೇಶ ಹಂಚಿಕೊಂಡಿರುವ ಪ್ರಧಾನಿ ಮೋದಿ, ವಿಘ್ನಹರ್ತನ ದರ್ಶನ ಹಾಗೂ ಪೂಜೆಯ ಈ ಪವಿತ್ರ ಹಬ್ಬವು ಎಲ್ಲರ ಜೀವನದಲ್ಲಿ ಹೊಸ ಶಕ್ತಿ ಮತ್ತು ಹೊಸ ಉತ್ಸಾಹವನ್ನು ತುಂಬಲಿ ಎಂದು ತಿಳಿಸಿದ್ದಾರೆ. ಗಣಪತಿಯ ದಿವ್ಯ ಆಶೀರ್ವಾದದಿಂದ ಎಲ್ಲರ ಪ್ರಯತ್ನಗಳು ಯಶಸ್ವಿಯಾಗಲಿ ಹಾಗೂ ರಾಷ್ಟ್ರವು ನಿರಂತರವಾಗಿ ಪ್ರಗತಿಯ ಪಥದಲ್ಲಿ ಮುನ್ನಡೆಯುತ್ತಿರಲಿ ಎಂದು ಅವರು ಆಶಯ ವ್ಯಕ್ತಪಡಿಸಿದ್ದಾರೆ.

‘ಗಣಪತಿ ಬಪ್ಪಾ ಮೋರಯಾ’ ಎಂದು ಶುಭಾಶಯ ಕೋರಿರುವ ಪ್ರಧಾನಿ ಮೋದಿ, ವಿನಾಯಕನ ಮಹಿಮೆಯನ್ನು ಸಾರುವ ಸಂಸ್ಕೃತ ಶ್ಲೋಕವನ್ನೂ ತಮ್ಮ ಸಂದೇಶದೊಂದಿಗೆ ಹಂಚಿಕೊಂಡಿದ್ದಾರೆ.

ವಿನಾಯಕನ ಮಹಿಮೆ ಸಾರುವ ಶ್ಲೋಕ

> ಮುದಾಕರಾತ್ತಮೋದಕಂ ಸದಾ ವಿಮುಕ್ತಿಸಾಧಕಂ

ಕಲಾಧರಾವತಂಸಕಂ ವಿಲಾಸಿಲೋಕರಕ್ಷಕಮ್।

ಅನಾಯಕೈಕನಾಯಕಂ ವಿನಾಶಿತೇಭದೈತ್ಯಕಂ

ನತಾಶುಭಾಶುನಾಶಕಂ ನಮಾಮಿ ತಂ ವಿನಾಯಕಮ್॥

ಈ ಶ್ಲೋಕದಲ್ಲಿ ಗಣಪತಿಯನ್ನು ಸಂತೋಷವನ್ನು ನೀಡುವ ಮೋದಕವನ್ನು ಧರಿಸಿರುವ, ಸದಾ ಮುಕ್ತಿಯ ಮಾರ್ಗವನ್ನು ಸಾಧಿಸಲು ನೆರವಾಗುವ ಹಾಗೂ ಶಿರದಲ್ಲಿ ಚಂದ್ರನನ್ನು ಧರಿಸಿರುವ ದೇವರೆಂದು ಸ್ತುತಿಸಲಾಗಿದೆ. ಜಗತ್ತಿನ ರಕ್ಷಕನಾಗಿರುವ ವಿನಾಯಕನು ನಾಯಕನಿಲ್ಲದವರಿಗೆ ಏಕೈಕ ನಾಯಕನಾಗಿದ್ದಾನೆ ಎಂಬ ಭಾವವನ್ನೂ ಶ್ಲೋಕ ವ್ಯಕ್ತಪಡಿಸುತ್ತದೆ.

ಆನೆಯ ರೂಪದ ದೈತ್ಯರನ್ನು ಸಂಹರಿಸಿದ ಗಣಪತಿಯು ತನ್ನನ್ನು ಭಕ್ತಿಯಿಂದ ನಮಿಸುವವರ ಅಶುಭ ಹಾಗೂ ಸಂಕಷ್ಟಗಳನ್ನು ಶೀಘ್ರವಾಗಿ ದೂರ ಮಾಡುತ್ತಾನೆ ಎಂದು ಶ್ಲೋಕದಲ್ಲಿ ವರ್ಣಿಸಲಾಗಿದೆ. ಹೀಗಾಗಿ ವಿಘ್ನಗಳನ್ನು ನಿವಾರಿಸಿ, ಭಕ್ತರಿಗೆ ಶುಭ, ಯಶಸ್ಸು ಮತ್ತು ಮುಕ್ತಿಯ ಮಾರ್ಗವನ್ನು ತೋರಿಸುವ ವಿನಾಯಕನಿಗೆ ನಮಸ್ಕರಿಸುವ ಭಕ್ತಿಭಾವವನ್ನು ಈ ಶ್ಲೋಕ ಸಾರುತ್ತದೆ.

---------------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande