ಮಹಾರಾಷ್ಟ್ರದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ರನ್ವೇಯಿಂದ ಜಾರಿದ ತರಬೇತಿ ವಿಮಾನ , ಇಬ್ಬರು ಪೈಲಟ್ಗಳು ಸುರಕ್ಷಿತ
ಮುಂಬೈ, 09 ಆಗಸ್ಟ್ (ಹಿ.ಸ.): ಆ್ಯಂಕರ್:ಮಹಾರಾಷ್ಟ್ರದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಭಾನುವಾರ ತರಬೇತಿ ವಿಮಾನವೊಂದು ಇಳಿಯುವ ವೇಳೆ ರನ್‌ವೇಯಿಂದ ಜಾರಿ ಹಾನಿಗೊಳಗಾಗಿದೆ. ವಿಮಾನದಲ್ಲಿದ್ದ ತರಬೇತುದಾರ ಹಾಗೂ ತರಬೇತಿ ಪೈಲಟ್ ಇಬ್ಬರೂ ಸುರಕ್ಷಿತವಾಗಿದ್ದಾರೆ. ಪುಣೆಯ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸ
फोटो: बारामती एयरपोर्ट पर क्षतिग्रस्त प्रशिक्षु विमान का दृश्य


ಮುಂಬೈ, 09 ಆಗಸ್ಟ್ (ಹಿ.ಸ.):

ಆ್ಯಂಕರ್:ಮಹಾರಾಷ್ಟ್ರದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಭಾನುವಾರ ತರಬೇತಿ ವಿಮಾನವೊಂದು ಇಳಿಯುವ ವೇಳೆ ರನ್‌ವೇಯಿಂದ ಜಾರಿ ಹಾನಿಗೊಳಗಾಗಿದೆ. ವಿಮಾನದಲ್ಲಿದ್ದ ತರಬೇತುದಾರ ಹಾಗೂ ತರಬೇತಿ ಪೈಲಟ್ ಇಬ್ಬರೂ ಸುರಕ್ಷಿತವಾಗಿದ್ದಾರೆ.

ಪುಣೆಯ ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಸಿಂಗ್ ಗಿಲ್ ಮಾಹಿತಿ ನೀಡಿ, ಕಾರ್ವರ್ ಏವಿಯೇಷನ್ ಸಂಸ್ಥೆಯ ಸೆಸ್ನಾ-172 ವಿಮಾನ ಇಳಿಯುವ ವೇಳೆ ರನ್‌ವೇಯಿಂದ ಜಾರಿದ್ದು, ವಿಮಾನಕ್ಕೆ ಸಣ್ಣ ಪ್ರಮಾಣದ ಹಾನಿಯಾಗಿದೆ ಎಂದು ತಿಳಿಸಿದ್ದಾರೆ.

ಪ್ರಾಥಮಿಕ ಮಾಹಿತಿಯಂತೆ, ವಿಮಾನದ ಒಂದು ಭಾಗ ಸಮೀಪದ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಬಳಿಕ ರನ್‌ವೇ ವ್ಯಾಪ್ತಿಯಿಂದ ಹೊರಗೆ ಹೋಗಿದೆ. ಘಟನೆಯಲ್ಲಿ ಯಾರಿಗೂ ಗಂಭೀರ ಗಾಯಗಳಾಗಿಲ್ಲ.

ಅಪಘಾತದ ಮಾಹಿತಿ ದೊರೆತ ಕೂಡಲೇ ಸ್ಥಳೀಯ ಪೊಲೀಸರು ಹಾಗೂ ವಿಮಾನ ನಿಲ್ದಾಣದ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ತಾಂತ್ರಿಕ ದೋಷದಿಂದ ಘಟನೆ ಸಂಭವಿಸಿದೆಯೇ ಅಥವಾ ಬೇರೆ ಕಾರಣವಿದೆಯೇ ಎಂಬುದರ ಕುರಿತು ತನಿಖೆ ಮುಂದುವರಿದಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande