ದೆಹಲಿ ಸರ್ಕಾರದಿಂದ ಅಕ್ಕಿ ಹಗರಣದ ಸಂಚು: ಸೌರಭ್ ಭಾರದ್ವಾಜ್
ನವದೆಹಲಿ, 09 ಆಗಸ್ಟ್ (ಹಿ.ಸ.): ಆ್ಯಂಕರ್:ದೆಹಲಿಯ ಬಿಜೆಪಿ ಸರ್ಕಾರವು ಹಗರಣ ನಡೆಸಲು ಸಂಚು ರೂಪಿಸಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿಯ ಮಾಜಿ ಸಚಿವ ಸೌರಭ್ ಭಾರದ್ವಾಜ್ ಆರೋಪಿಸಿದ್ದಾರೆ. ಭಾನುವಾರ ‘ಎಕ್ಸ್‌’ನಲ್ಲಿ ಹಂಚಿಕೊಂಡ ವಿಡಿಯೊದಲ್ಲಿ ಅವರು, ದೆಹಲಿ ಸರ್ಕಾರ ಹಾಗೂ ಅಸ್ಸಾಂನ ಸಂಸ್ಥೆ
आआप के नेता एवं दिल्ली के पूर्व मंत्री सौरभ भारद्वाज


ನವದೆಹಲಿ, 09 ಆಗಸ್ಟ್ (ಹಿ.ಸ.):

ಆ್ಯಂಕರ್:ದೆಹಲಿಯ ಬಿಜೆಪಿ ಸರ್ಕಾರವು ಹಗರಣ ನಡೆಸಲು ಸಂಚು ರೂಪಿಸಿದೆ ಎಂದು ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿಯ ಮಾಜಿ ಸಚಿವ ಸೌರಭ್ ಭಾರದ್ವಾಜ್ ಆರೋಪಿಸಿದ್ದಾರೆ.

ಭಾನುವಾರ ‘ಎಕ್ಸ್‌’ನಲ್ಲಿ ಹಂಚಿಕೊಂಡ ವಿಡಿಯೊದಲ್ಲಿ ಅವರು, ದೆಹಲಿ ಸರ್ಕಾರ ಹಾಗೂ ಅಸ್ಸಾಂನ ಸಂಸ್ಥೆಯೊಂದು ಸೇರಿಕೊಂಡು ಭಾರತೀಯ ಆಹಾರ ನಿಗಮದಿಂದ ಸಬ್ಸಿಡಿ ದರದಲ್ಲಿ ಅಕ್ಕಿ ಪಡೆದು ಅದನ್ನು ಖಾಸಗಿ ಸಂಸ್ಥೆಗೆ ಮಾರಾಟ ಮಾಡುವ ಯೋಜನೆ ರೂಪಿಸಿತ್ತು ಎಂದು ದೂರಿದ್ದಾರೆ.

ಬಡವರಿಗೆ ವಿತರಿಸುವ ನೆಪದಲ್ಲಿ ಪ್ರತಿ ವಾರ ಭಾರತೀಯ ಆಹಾರ ನಿಗಮದಿಂದ 31 ಸಾವಿರ ಮೆಟ್ರಿಕ್ ಟನ್ ರಿಯಾಯಿತಿ ದರದ ಅಕ್ಕಿ ಪಡೆಯಲು ಬೇಡಿಕೆ ಸಲ್ಲಿಸಲಾಗಿತ್ತು. ಆದರೆ ಈ ಅಕ್ಕಿ ದೆಹಲಿಯ ಬಡವರಿಗೆ ತಲುಪದೆ, ಹರಿಯಾಣದ ಖಾಸಗಿ ಕಂಪನಿಯೊಂದಕ್ಕೆ ಭಾರಿ ಲಾಭದಲ್ಲಿ ಮಾರಾಟ ಮಾಡುವ ಉದ್ದೇಶವಿತ್ತು ಎಂದು ಅವರು ಆರೋಪಿಸಿದ್ದಾರೆ.

ಈ ವ್ಯವಸ್ಥೆಯಿಂದ ಪ್ರತಿ ವಾರ ಸುಮಾರು 143 ಕೋಟಿ ರೂ.ಗಳ ಹಗರಣಕ್ಕೆ ಯೋಜನೆ ರೂಪಿಸಲಾಗಿತ್ತು. ಇದು ಮೂರು ವರ್ಷಗಳ ಕಾಲ ಮುಂದುವರಿದಿದ್ದರೆ ಸುಮಾರು 22 ಸಾವಿರ ಕೋಟಿ ರೂ.ಗಳ ಬೃಹತ್ ಹಗರಣವಾಗುತ್ತಿತ್ತು ಎಂದು ಸೌರಭ್ ಭಾರದ್ವಾಜ್ ಆರೋಪಿಸಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande