ಉತ್ತಮ ನಡವಳಿಕೆ, ಶ್ರೇಷ್ಠ ಗುಣಗಳೊಂದಿಗೆ ಬದುಕಲು ಪ್ರಧಾನಿ ಮೋದಿ ಕರೆ
ನವದೆಹಲಿ, 10 ಆಗಸ್ಟ್ (ಹಿ.ಸ.): ಆ್ಯಂಕರ್: ಸತ್ಯ, ಶುಭ ಮತ್ತು ಜ್ಞಾನವರ್ಧಕ ಮಾತುಗಳನ್ನು ಆಲಿಸಿ, ಉತ್ತಮ ಆಲೋಚನೆಗಳನ್ನು ಅಳವಡಿಸಿಕೊಂಡು, ಉತ್ತಮ ನಡವಳಿಕೆ ಹಾಗೂ ಶ್ರೇಷ್ಠ ಗುಣಗಳೊಂದಿಗೆ ಬದುಕುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ಪ್ರಧಾನಿ ಮೋದಿ ಅವರು ಸೋಮವಾರ ಬೆಳಗ್ಗೆ ತಮ್ಮ ‘ಎಕ್ಸ
प्रधानमंत्री नरेन्द्र मोदी के एक्स हैंडल पर आज प्रातः साझा किया गया सुभाषितम्।


ನವದೆಹಲಿ, 10 ಆಗಸ್ಟ್ (ಹಿ.ಸ.):

ಆ್ಯಂಕರ್:

ಸತ್ಯ, ಶುಭ ಮತ್ತು ಜ್ಞಾನವರ್ಧಕ ಮಾತುಗಳನ್ನು ಆಲಿಸಿ, ಉತ್ತಮ ಆಲೋಚನೆಗಳನ್ನು ಅಳವಡಿಸಿಕೊಂಡು, ಉತ್ತಮ ನಡವಳಿಕೆ ಹಾಗೂ ಶ್ರೇಷ್ಠ ಗುಣಗಳೊಂದಿಗೆ ಬದುಕುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

ಪ್ರಧಾನಿ ಮೋದಿ ಅವರು ಸೋಮವಾರ ಬೆಳಗ್ಗೆ ತಮ್ಮ ‘ಎಕ್ಸ್’ ಖಾತೆಯಲ್ಲಿ ವೈದಿಕ ಶಾಂತಿ ಮಂತ್ರವನ್ನು ಒಳಗೊಂಡ ಸುಭಾಷಿತವನ್ನು ಹಂಚಿಕೊಂಡಿದ್ದಾರೆ. ಋಗ್ವೇದದ ಪ್ರಥಮ ಮಂಡಲ, 89ನೇ ಸೂಕ್ತದ 8ನೇ ಮಂತ್ರವಾಗಿರುವ ಈ ಶಾಂತಿ ಮಂತ್ರವು ಉಪನಿಷತ್ತುಗಳಲ್ಲಿಯೂ ಉಲ್ಲೇಖವಾಗಿದೆ.

ಮಂತ್ರದ ಅರ್ಥವನ್ನು ವಿವರಿಸಿರುವ ಪ್ರಧಾನಿ, ಆರೋಗ್ಯಕರ ದೇಹ, ಉತ್ತಮ ನಡವಳಿಕೆ ಹಾಗೂ ಶ್ರೇಷ್ಠ ಗುಣಗಳೊಂದಿಗೆ ಜೀವನವನ್ನು ಲೋಕಕಲ್ಯಾಣಕ್ಕೆ ಸಮರ್ಪಿಸಬೇಕು ಎಂದು ತಿಳಿಸಿದ್ದಾರೆ. ಸತ್ಯ, ಪ್ರಾಮಾಣಿಕ ಹಾಗೂ ಜನಹಿತಕಾರಿ ಮಾಹಿತಿಯನ್ನು ಪ್ರಸಾರ ಮಾಡುವ ಮೂಲಕ ರಾಷ್ಟ್ರ ಮತ್ತು ಸಮಾಜವನ್ನು ಜಾಗೃತ, ಸಶಕ್ತ ಹಾಗೂ ಸಾಮರಸ್ಯದಿಂದ ಕೂಡಿರಿಸಲು ಪ್ರತಿಯೊಬ್ಬರೂ ಕೊಡುಗೆ ನೀಡಬೇಕು ಎಂದು ಕರೆ ನೀಡಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande