ಮಾಲಪ್ಪುರಂ ಅಕ್ರಮ ಸ್ಫೋಟಕ ಪ್ರಕರಣ: ಪ್ರಮುಖ ಸಂಚುಕೋರನನ್ನು ಬಂಧಿಸಿದ ಎನ್ಐಎ
ನವದೆಹಲಿ, 09 ಆಗಸ್ಟ್ (ಹಿ.ಸ.): ಆ್ಯಂಕರ್:ಕೇರಳದ ಮಾಲಪ್ಪುರಂನಲ್ಲಿ ಅಕ್ರಮ ಸ್ಫೋಟಕಗಳ ವಶಪಡಿಸಿಕೊಳ್ಳುವಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಮುಖ ಸಂಚುಕೋರ ಎನ್ನಲಾದ ಹಾರಿಸ್ ಟಿಎ ಅವರನ್ನು ಬಂಧಿಸಿದೆ. ಶನಿವಾರ ಮಾಲಪ್ಪುರಂನ ಮಂಜೇರಿಯಲ್ಲಿ ನಡೆದ ಈ ಬಂಧನದೊಂದಿಗೆ
एनआईए


ನವದೆಹಲಿ, 09 ಆಗಸ್ಟ್ (ಹಿ.ಸ.):

ಆ್ಯಂಕರ್:ಕೇರಳದ ಮಾಲಪ್ಪುರಂನಲ್ಲಿ ಅಕ್ರಮ ಸ್ಫೋಟಕಗಳ ವಶಪಡಿಸಿಕೊಳ್ಳುವಿಕೆಗೆ ಸಂಬಂಧಿಸಿದ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಪ್ರಮುಖ ಸಂಚುಕೋರ ಎನ್ನಲಾದ ಹಾರಿಸ್ ಟಿಎ ಅವರನ್ನು ಬಂಧಿಸಿದೆ. ಶನಿವಾರ ಮಾಲಪ್ಪುರಂನ ಮಂಜೇರಿಯಲ್ಲಿ ನಡೆದ ಈ ಬಂಧನದೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 10ಕ್ಕೆ ಏರಿಕೆಯಾಗಿದೆ.

ಎನ್‌ಐಎ ಪ್ರಕಾರ, ಸ್ಫೋಟಕಗಳನ್ನು ಅಕ್ರಮವಾಗಿ ಖರೀದಿಸುವ ಸಂಚಿನಲ್ಲಿ ಹಾರಿಸ್ ಭಾಗಿಯಾಗಿದ್ದಾನೆ. ಪ್ರಕರಣದಲ್ಲಿ ಸ್ಫೋಟಕಗಳ ಅಕ್ರಮ ಖರೀದಿ, ಸಾಗಣೆ ಹಾಗೂ ಅದರ ಹಿಂದಿರುವ ಜಾಲದ ಕುರಿತು ತನಿಖೆ ಮುಂದುವರಿದಿದೆ.

2026ರ ಫೆಬ್ರವರಿ 7ರಂದು ಮಾಲಪ್ಪುರಂನ ಚೆಮ್ಮಾಡ್–ತಲಪ್ಪಾರ ರಸ್ತೆಯಲ್ಲಿರುವ ಫರ್ಹಾ ಹಾಲೋ ಬ್ರಿಕ್ಸ್ ಕಂಪನಿ ಆವರಣದಲ್ಲಿ ನಿಲ್ಲಿಸಿದ್ದ ಲಾರಿಯಿಂದ 89,600 ಸ್ಫೋಟಕ ಕಡ್ಡಿಗಳು ಮತ್ತು 10,500 ಶಾಕ್ ಟ್ಯೂಬ್‌ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಸ್ಫೋಟಕಗಳನ್ನು ಸಂಗ್ರಹಿಸಲು ಅಥವಾ ಸಾಗಿಸಲು ಆರೋಪಿಗಳ ಬಳಿ ಅಗತ್ಯ ಪರವಾನಗಿ ಅಥವಾ ಅನುಮತಿ ಇರಲಿಲ್ಲ.

ಕೇರಳ ಪೊಲೀಸರು ಪ್ರಕರಣ ದಾಖಲಿಸಿ ಮೂವರನ್ನು ಬಂಧಿಸಿದ್ದರು. ಬಳಿಕ ಎನ್‌ಐಎ ಪ್ರಕರಣವನ್ನು ಮರುದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿತು. ತನಿಖೆಯ ಭಾಗವಾಗಿ ಮೂರು ರಾಜ್ಯಗಳ 19 ಸ್ಥಳಗಳಲ್ಲಿ ಶೋಧ ನಡೆಸಿ ಹಲವು ಆಕ್ಷೇಪಾರ್ಹ ದಾಖಲೆಗಳು ಹಾಗೂ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು.

ಆ.7ರಂದು ಕರ್ನಾಟಕದ ವಿಜಯಪುರದಲ್ಲಿ ಇನ್ನೂ ಮೂವರು ಆರೋಪಿಗಳನ್ನು ಎನ್‌ಐಎ ಬಂಧಿಸಿತ್ತು. ಇದೀಗ ಒಟ್ಟು 10 ಮಂದಿ ಬಂಧಿತರಾಗಿದ್ದಾರೆ.

ದೊಡ್ಡ ಪ್ರಮಾಣದ ಸ್ಫೋಟಕಗಳನ್ನು ಯಾವ ಉದ್ದೇಶಕ್ಕಾಗಿ ಖರೀದಿಸಲಾಗಿತ್ತು, ಅವುಗಳ ಮೂಲ ಯಾವುದು ಹಾಗೂ ಸಾಗಣೆ ಮತ್ತು ಪೂರೈಕೆ ಜಾಲದಲ್ಲಿ ಯಾರೆಲ್ಲ ಭಾಗಿಯಾಗಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಎನ್‌ಐಎ ತನಿಖೆ ಮುಂದುವರಿಸಿದೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande