
ನವದೆಹಲಿ, 04ಆಗಸ್ಟ್ (ಹಿ.ಸ.):
ಆ್ಯಂಕರ್:ಲೋಕಸಭೆಯು ವಿರೋಧ ಪಕ್ಷಗಳ ನಿರಂತರ ಗದ್ದಲದ ನಡುವೆಯೇ ವಿನಿಯೋಗ (ಸಂಖ್ಯೆ-3) ವಿಧೇಯಕ, 2026 ಅನ್ನು ಮಂಗಳವಾರ ಧ್ವನಿಮತದ ಮೂಲಕ ಅಂಗೀಕರಿಸಿತು. ಬಳಿಕ ಸದನದ ಕಲಾಪವನ್ನು ಆಗಸ್ಟ್ 5ರ ಗುರುವಾರ ಬೆಳಿಗ್ಗೆ 11 ಗಂಟೆಯವರೆಗೆ ಮುಂದೂಡಲಾಯಿತು.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ವಿಧೇಯಕವನ್ನು ಸದನದಲ್ಲಿ ಮಂಡಿಸಿದರು. ವಿರೋಧ ಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗುತ್ತಿದ್ದರೂ, ವಿಧೇಯಕದ ಮೇಲಿನ ಚರ್ಚೆಯ ನಂತರ ಅದನ್ನು ಧ್ವನಿಮತದ ಮೂಲಕ ಅಂಗೀಕರಿಸಲಾಯಿತು.
ಈ ವಿಧೇಯಕವು 2022–23ನೇ ಹಣಕಾಸು ವರ್ಷದ ಅವಧಿಯಲ್ಲಿ ಕೆಲವು ಸೇವೆಗಳಿಗಾಗಿ ಸಂಸತ್ತು ಅನುಮೋದಿಸಿದ್ದ ಮೊತ್ತಕ್ಕಿಂತ ಹೆಚ್ಚಾಗಿ ವೆಚ್ಚವಾಗಿರುವ ಹಣವನ್ನು ಭಾರತದ ಸಂಚಿತ ನಿಧಿಯಿಂದ ಹಿಂಪಡೆಯಲು ಕಾನೂನುಬದ್ಧ ಅನುಮತಿ ನೀಡುವ ಉದ್ದೇಶ ಹೊಂದಿದೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.