
ನವದೆಹಲಿ, 03 ಆಗಸ್ಟ್ 3(ಹಿ.ಸ.):
ಆ್ಯಂಕರ್:ಪ್ರತಿಕೂಲ ಪರಿಸ್ಥಿತಿಯಲ್ಲಿಯೂ ಧೈರ್ಯವನ್ನು ಎಂದಿಗೂ ಕೈಬಿಡಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಕರೆ ನೀಡಿದ್ದಾರೆ.
ಸೋಮವಾರ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪಂಚತಂತ್ರದ ಪ್ರಸಿದ್ಧ ಸಂಸ್ಕೃತ ಸುಭಾಷಿತವನ್ನು ಹಂಚಿಕೊಂಡಿರುವ ಅವರು, ಅದಕ್ಕೆ ಅರ್ಥವನ್ನೂ ವಿವರಿಸಿದ್ದಾರೆ.
ಅದೃಷ್ಟ ಪ್ರತಿಕೂಲವಾಗಿದ್ದರೂ ಧೈರ್ಯವನ್ನು ತ್ಯಜಿಸಬಾರದು. ಧೈರ್ಯ ಮತ್ತು ನಿರಂತರ ಪ್ರಯತ್ನದಿಂದ ಕಳೆದುಕೊಂಡ ಉತ್ತಮ ಸ್ಥಿತಿಯನ್ನು ಮತ್ತೆ ಪಡೆಯಬಹುದು. ಸಮುದ್ರದ ಮಧ್ಯೆ ಹಡಗು ಮುಳುಗಿದಾಗಲೂ ಕುಶಲ ನಾವಿಕ ಬದುಕುಳಿಯುವ ಪ್ರಯತ್ನವನ್ನು ಮಾತ್ರ ಮಾಡುತ್ತಾನೆ; ಎಂದಿಗೂ ಧೈರ್ಯ ಕಳೆದುಕೊಳ್ಳುವುದಿಲ್ಲ ಎಂಬ ಸಂದೇಶವನ್ನು ಪ್ರಧಾನಿ ಹಂಚಿಕೊಂಡಿದ್ದಾರೆ.
ಜೀವನದಲ್ಲಿ ಯಾವುದೇ ಸಂಕಷ್ಟ ಎದುರಾದರೂ ಆತ್ಮವಿಶ್ವಾಸ, ಧೈರ್ಯ ಮತ್ತು ನಿರಂತರ ಪರಿಶ್ರಮವೇ ಯಶಸ್ಸಿನ ಮಾರ್ಗ ಎಂದು ಪ್ರಧಾನಿ ಮೋದಿ ತಮ್ಮ ಸಂದೇಶದಲ್ಲಿ ತಿಳಿಸಿದ್ದಾರೆ.
--------
ಹಿಂದೂಸ್ತಾನ್ ಸಮಾಚಾರ್ / Rakesh.M.B.