ಇ20 ಪೆಟ್ರೋಲ್ ಕುರಿತು ಕೇಂದ್ರದ ಉತ್ತರಕ್ಕೆ ಹೊಸ ಪ್ರಶ್ನೆಗಳು: ಜೈರಾಮ್ ರಮೇಶ್
ನವದೆಹಲಿ, 03 ಆಗಸ್ಟ್ (ಹಿ.ಸ.): ಆ್ಯಂಕರ್:ಇ20 ಪೆಟ್ರೋಲ್ ಕುರಿತು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ನೀಡಿದ ಉತ್ತರದಿಂದ ಉತ್ತರಗಳಿಗಿಂತ ಹೊಸ ಪ್ರಶ್ನೆಗಳೇ ಹೆಚ್ಚಾಗಿ ಮೂಡಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ. ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಇ20 ಇಂಧನವು
कांग्रेस महासचिव (संचार) जयराम रमेश (फाइल फोटो)।


ನವದೆಹಲಿ, 03 ಆಗಸ್ಟ್ (ಹಿ.ಸ.):

ಆ್ಯಂಕರ್:ಇ20 ಪೆಟ್ರೋಲ್ ಕುರಿತು ಕೇಂದ್ರ ಸರ್ಕಾರ ಸಂಸತ್ತಿನಲ್ಲಿ ನೀಡಿದ ಉತ್ತರದಿಂದ ಉತ್ತರಗಳಿಗಿಂತ ಹೊಸ ಪ್ರಶ್ನೆಗಳೇ ಹೆಚ್ಚಾಗಿ ಮೂಡಿವೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ.

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಇ20 ಇಂಧನವು ಹಲವು ವರ್ಷಗಳ ವೈಜ್ಞಾನಿಕ ಪರೀಕ್ಷೆಗಳ ಬಳಿಕ ಜಾರಿಗೆ ತರಲಾಗಿದೆ ಹಾಗೂ ವಾಹನಗಳಿಗೆ ಹಾನಿಯಾಗಿರುವುದಕ್ಕೆ ಯಾವುದೇ ವ್ಯಾಪಕ ಸಾಕ್ಷ್ಯವಿಲ್ಲ ಎಂದು ಸಂಸತ್ತಿನಲ್ಲಿ ತಿಳಿಸಿದ್ದರು. ಆದರೆ ದೇಶದಾದ್ಯಂತ ವಾಹನ ಮಾಲೀಕರು ಮತ್ತು ಮೆಕ್ಯಾನಿಕ್‌ಗಳು ಮೈಲೇಜ್ ಕುಸಿತ, ಎಂಜಿನ್ ಕಾರ್ಯಕ್ಷಮತೆ ಇಳಿಕೆ, ಹಳೆಯ ವಾಹನಗಳಲ್ಲಿ ಹೊಂದಾಣಿಕೆ ಸಮಸ್ಯೆ, ಫ್ಯೂಯೆಲ್ ಇಂಜೆಕ್ಟರ್ ತೊಂದರೆ, ತುಕ್ಕು ಹಾಗೂ ರಬ್ಬರ್ ಭಾಗಗಳ ಹಾನಿ ಸೇರಿದಂತೆ ಹಲವು ಸಮಸ್ಯೆಗಳ ಬಗ್ಗೆ ದೂರು ನೀಡುತ್ತಿದ್ದಾರೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

2023ಕ್ಕೂ ಮೊದಲು ತಯಾರಾದ 44 ಸಾವಿರಕ್ಕೂ ಹೆಚ್ಚು ಪೆಟ್ರೋಲ್ ವಾಹನಗಳ ಮಾಲೀಕರ ಮೇಲೆ ನಡೆಸಿದ ಸ್ವತಂತ್ರ ಸಮೀಕ್ಷೆಯಲ್ಲಿ ಇ20 ಬಳಕೆಯಿಂದ ಪ್ರತಿಕೂಲ ಪರಿಣಾಮ ಉಂಟಾಗಿದೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇ20 ಬಳಕೆಗೆ ಸಂಬಂಧಿಸಿದ ಎಲ್ಲಾ ವೈಜ್ಞಾನಿಕ ಅಧ್ಯಯನಗಳು ಹಾಗೂ ಅಂಕಿ-ಅಂಶಗಳನ್ನು ಸರ್ಕಾರ ಸಾರ್ವಜನಿಕಗೊಳಿಸಿ, ಗ್ರಾಹಕರ ಆತಂಕಗಳಿಗೆ ಪಾರದರ್ಶಕವಾಗಿ ಉತ್ತರ ನೀಡಬೇಕು ಎಂದು ಜೈರಾಮ್ ರಮೇಶ್ ಆಗ್ರಹಿಸಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande