ಸಂಡೂರು - ಆಗಸ್ಟ್ 30 ರಂದು ವಿದ್ಯುತ್ ವ್ಯತ್ಯಯ
ಸಂಡೂರು, 28 ಆಗಸ್ಟ್ (ಹಿ.ಸ.) ಆ್ಯಂಕರ್ : ಸಂಡೂರು 33/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಒಳಪಡುವ ಸಂಡೂರು ಪಟ್ಟಣದ ಎಸ್ಎಫ್-2 ಹೋಸಪೇಟೆ ಅರ್ಬನ್ ಫೀಡರ್ನ 11 ಕೆವಿ ವಿದ್ಯುತ್ ಮಾರ್ಗದ ತಂತಿಗಳು ಹಾಗೂ ಜಿಒಎಸ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆಗಸ್ಟ್ 30 ರಂದು ಬೆಳಗ್ಗೆ 10 ರಿಂದ ಸಂಜ
ಸಂಡೂರು - ಆಗಸ್ಟ್ 30 ರಂದು ವಿದ್ಯುತ್ ವ್ಯತ್ಯಯ


ಸಂಡೂರು, 28 ಆಗಸ್ಟ್ (ಹಿ.ಸ.)

ಆ್ಯಂಕರ್ : ಸಂಡೂರು 33/11 ಕೆವಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಗೆ ಒಳಪಡುವ ಸಂಡೂರು ಪಟ್ಟಣದ ಎಸ್ಎಫ್-2 ಹೋಸಪೇಟೆ ಅರ್ಬನ್ ಫೀಡರ್ನ 11 ಕೆವಿ ವಿದ್ಯುತ್ ಮಾರ್ಗದ ತಂತಿಗಳು ಹಾಗೂ ಜಿಒಎಸ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆಗಸ್ಟ್ 30 ರಂದು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಸಂಡೂರು ಪಟ್ಟಣ ವ್ಯಾಪ್ತಿಗೆ ಒಳಪಡುವ ಎಲ್.ಬಿ.ಕಾಲೋನಿ, ಚಪ್ಪರದಳ್ಳಿ, ಕುರುಮಟ್ಟಿ, ಪೋಲಿಸ್ ಸ್ಟೇಷನ್ ಹಿಂಭಾಗ, ಸುಜಾತಾ ಗರ್ಮೆಂಟ್ಸ್, ಕಾಲಪಟ್ಟಿ ಮತ್ತು ಆಶ್ರಯ ಕಾಲೋನಿ ಗ್ರಾಹಕರಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು ಗ್ರಾಹಕರು ಸಹಕರಿಸುವಂತೆ ಸಂಡೂರು ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಕೆ.ಎ. ಉಮೇಶ್ ಕುಮಾರ್ ಕೋರಿದ್ದಾರೆ.

---------------

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande