ಇತರೆ ಧಾರ್ಮಿಕ ಗ್ರಂಥಗಳ ಬಗ್ಗೆ ಮಾತನಾಡಲು ರಾಹುಲ್ ಗಾಂಧಿಗೆ ಭಯ: ವಿನೋದ್ ಬನ್ಸಲ್
ನವದೆಹಲಿ, 23 ಆಗಸ್ಟ್ (ಹಿ.ಸ.): ಆ್ಯಂಕರ್:ಹಿಂದೂ ಧರ್ಮಗ್ರಂಥಗಳ ಕುರಿತು ಮಾತನಾಡುವ ರಾಹುಲ್ ಗಾಂಧಿ ಅವರು ಕುರಾನ್, ಬೈಬಲ್ ಹಾಗೂ ಇತರೆ ಅಬ್ರಹಾಮಿಕ್ ಧರ್ಮಗ್ರಂಥಗಳ ಕುರಿತು ಮಾತನಾಡಲು ಹೆದರುತ್ತಾರೆ ಎಂದು ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಲ್ ಆರೋಪಿಸಿದ್ದಾರೆ. ಎಕ್ಸ್‌ನಲ್ಲಿ
विश्व हिन्दू परिषद (वीएचपी) के राष्ट्रीय प्रवक्ता विनोद बंसल (फाइल फोटो)


ನವದೆಹಲಿ, 23 ಆಗಸ್ಟ್ (ಹಿ.ಸ.):

ಆ್ಯಂಕರ್:ಹಿಂದೂ ಧರ್ಮಗ್ರಂಥಗಳ ಕುರಿತು ಮಾತನಾಡುವ ರಾಹುಲ್ ಗಾಂಧಿ ಅವರು ಕುರಾನ್, ಬೈಬಲ್ ಹಾಗೂ ಇತರೆ ಅಬ್ರಹಾಮಿಕ್ ಧರ್ಮಗ್ರಂಥಗಳ ಕುರಿತು ಮಾತನಾಡಲು ಹೆದರುತ್ತಾರೆ ಎಂದು ವಿಶ್ವ ಹಿಂದೂ ಪರಿಷತ್ ರಾಷ್ಟ್ರೀಯ ವಕ್ತಾರ ವಿನೋದ್ ಬನ್ಸಲ್ ಆರೋಪಿಸಿದ್ದಾರೆ.

ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿರುವ ಅವರು, ಮನುಸ್ಮೃತಿಯ ಒಂದು ಶ್ಲೋಕವನ್ನು ಅದರ ಭಾವಾರ್ಥವನ್ನು ಅರ್ಥಮಾಡಿಕೊಳ್ಳದೆ ಆಯ್ದುಕೊಂಡು ಹಿಂದೂ ಸಮಾಜವನ್ನು ಪ್ರಶ್ನಿಸುವುದು ಸುಲಭ. ಆದರೆ ಅದೇ ರೀತಿಯ ಧೈರ್ಯದಿಂದ ಕುರಾನ್, ಬೈಬಲ್ ಸೇರಿದಂತೆ ಇತರೆ ಧರ್ಮಗ್ರಂಥಗಳಲ್ಲಿ ಮಹಿಳೆಯರ ಕುರಿತು ಇರುವ ವಿಚಾರಗಳನ್ನೂ ಸಾರ್ವಜನಿಕವಾಗಿ ಹೇಳಲು ರಾಹುಲ್ ಗಾಂಧಿ ಸಿದ್ಧರಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.

ಆಯ್ದ ಉಲ್ಲೇಖಗಳನ್ನು ಬಳಸಿಕೊಂಡು ಅವುಗಳ ಅರ್ಥವನ್ನು ತಿರುಚುವುದರಿಂದ ರಾಜಕೀಯ ಮಾಡಬಹುದೇ ಹೊರತು ಸತ್ಯ ಹೊರಬರುವುದಿಲ್ಲ ಎಂದು ಬನ್ಸಲ್ ಹೇಳಿದ್ದಾರೆ. “ಯತ್ರ ನಾರ್ಯಸ್ತು ಪೂಜ್ಯಂತೆ ರಮಂತೆ ತತ್ರ ದೇವತಾಃ” ಎಂಬ ಮಹಿಳೆಯರನ್ನು ಗೌರವಿಸುವ ಶ್ಲೋಕವೂ ಮನುಸ್ಮೃತಿಯಲ್ಲಿ ಇದೆ ಎಂದು ಅವರು ಉಲ್ಲೇಖಿಸಿದ್ದಾರೆ.

ರಾಹುಲ್ ಗಾಂಧಿ ಮೊದಲು ಸಂಪೂರ್ಣ ಗ್ರಂಥಗಳನ್ನು ಓದಿ, ಸಂತರು ಹಾಗೂ ವ್ಯಾಖ್ಯಾನಕಾರರ ಅಭಿಪ್ರಾಯಗಳನ್ನು ತಿಳಿದುಕೊಂಡ ಬಳಿಕ ಹಿಂದೂ ಸಮಾಜದ ಕುರಿತು ಮಾತನಾಡಬೇಕು. ಮಹಿಳೆಯರ ಗೌರವ ಮತ್ತು ಘನತೆಯ ವಿಚಾರದಲ್ಲಿ ಭಾರತಕ್ಕೆ ಯಾರಿಂದಲೂ ಪಾಠದ ಅಗತ್ಯವಿಲ್ಲ ಎಂದು ಬನ್ಸಲ್ ಹೇಳಿದ್ದಾರೆ.

ಇತ್ತೀಚೆಗೆ ರಾಹುಲ್ ಗಾಂಧಿ ಅವರು ‘ವಿದ್ಯಾರ್ಥಿಗಳ ಧ್ವನಿ’ ಅಭಿಯಾನದಡಿ ವಿವಿಧ ವಿಶ್ವವಿದ್ಯಾಲಯಗಳು ಹಾಗೂ ಕಾಲೇಜುಗಳ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತಿದ್ದಾರೆ. ಶನಿವಾರ ಪುಣೆಯಲ್ಲಿ ಮಹಿಳೆಯರನ್ನು ಉದ್ದೇಶಿಸಿ ಮಾತನಾಡುವ ವೇಳೆ ಮನುಸ್ಮೃತಿಯಲ್ಲಿನ ಮಹಿಳೆಯರ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಶ್ಲೋಕವನ್ನು ಉಲ್ಲೇಖಿಸಿದ್ದರು. ಈ ಹೇಳಿಕೆಗೆ ಕೆಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande