ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಮೊದಲ ಯಶಸ್ವಿ ರೋಬೋಟಿಕ್ ಮೊಣಕಾಲು ಕಸಿ ಶಸ್ತ್ರಚಿಕಿತ್ಸೆ
ನವದೆಹಲಿ, 23 ಆಗಸ್ಟ್ (ಹಿ.ಸ.): ಆ್ಯಂಕರ್:ಸಫ್ದರ್‌ಜಂಗ್ ಆಸ್ಪತ್ರೆಯ ಕೇಂದ್ರ ಅಸ್ಥಿ ಚಿಕಿತ್ಸಾ ಸಂಸ್ಥೆ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದು, ಆ.22ರಂದು ಮೊದಲ ಬಾರಿಗೆ ರೋಬೋಟ್ ನೆರವಿನ ಸಂಪೂರ್ಣ ಮೊಣಕಾಲು ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ. ಆಯುಷ್ಮಾನ್ ಭಾರತ ಯೋಜನೆ
सर्जरी के दौरान का दृष्य


सर्जरी करने वाली टीम


ನವದೆಹಲಿ, 23 ಆಗಸ್ಟ್ (ಹಿ.ಸ.):

ಆ್ಯಂಕರ್:ಸಫ್ದರ್‌ಜಂಗ್ ಆಸ್ಪತ್ರೆಯ ಕೇಂದ್ರ ಅಸ್ಥಿ ಚಿಕಿತ್ಸಾ ಸಂಸ್ಥೆ ವೈದ್ಯಕೀಯ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡಿದ್ದು, ಆ.22ರಂದು ಮೊದಲ ಬಾರಿಗೆ ರೋಬೋಟ್ ನೆರವಿನ ಸಂಪೂರ್ಣ ಮೊಣಕಾಲು ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ. ಆಯುಷ್ಮಾನ್ ಭಾರತ ಯೋಜನೆಯಡಿ 75 ವರ್ಷದ ಹಿರಿಯ ನಾಗರಿಕರಿಗೆ ಉಚಿತವಾಗಿ ಶಸ್ತ್ರಚಿಕಿತ್ಸೆ ನಡೆಸಲಾಯಿತು.

ಹೊಸ ರೋಬೋಟಿಕ್ ವ್ಯವಸ್ಥೆಯನ್ನು ಮುಂದಿನ ದಿನಗಳಲ್ಲಿ ಮತ್ತಷ್ಟು ಉನ್ನತೀಕರಿಸುವ ಅವಕಾಶವಿದ್ದು, ಸಂಪೂರ್ಣ ಹಾಗೂ ಭಾಗಶಃ ಮೊಣಕಾಲು ಕಸಿ ಜೊತೆಗೆ ಸೊಂಟದ ಕೀಲು ಕಸಿ ಶಸ್ತ್ರಚಿಕಿತ್ಸೆಯನ್ನೂ ನಡೆಸಬಹುದಾಗಿದೆ. ತಾಂತ್ರಿಕ ಮತ್ತು ತಂತ್ರಾಂಶ ಉನ್ನತೀಕರಣದ ಬಳಿಕ ರೋಬೋಟ್ ನೆರವಿನ ಬೆನ್ನುಮೂಳೆ ಶಸ್ತ್ರಚಿಕಿತ್ಸೆಗೂ ಈ ವ್ಯವಸ್ಥೆಯನ್ನು ಬಳಸುವ ಸಾಧ್ಯತೆ ಇದೆ.

ರೋಬೋಟಿಕ್ ತಂತ್ರಜ್ಞಾನದಿಂದ ಶಸ್ತ್ರಚಿಕಿತ್ಸೆಗೂ ಮುನ್ನ ಹೆಚ್ಚು ನಿಖರವಾದ ಯೋಜನೆ ರೂಪಿಸಲು, ಕಸಿ ಅಳವಡಿಕೆಯ ಸ್ಥಾನ ನಿರ್ಧರಿಸಲು ಹಾಗೂ ಕೀಲುಗಳ ಸಮತೋಲನವನ್ನು ಉತ್ತಮವಾಗಿ ಕಾಯ್ದುಕೊಳ್ಳಲು ನೆರವಾಗುತ್ತದೆ. ಸರ್ಕಾರಿ ಆಸ್ಪತ್ರೆಯಲ್ಲಿ ಈ ಸೌಲಭ್ಯ ಲಭ್ಯವಾಗಿರುವುದರಿಂದ ಆರ್ಥಿಕವಾಗಿ ದುರ್ಬಲ ವರ್ಗದ ರೋಗಿಗಳಿಗೂ ಅತ್ಯಾಧುನಿಕ ಚಿಕಿತ್ಸೆಯ ಪ್ರಯೋಜನ ದೊರೆಯುವ ನಿರೀಕ್ಷೆಯಿದೆ.

ವಿಎಂಎಂಸಿ ಮತ್ತು ಸಫ್ದರ್‌ಜಂಗ್ ಆಸ್ಪತ್ರೆಯ ನಿರ್ದೇಶಕಿ ಕವಿತಾ ಶರ್ಮಾ ಅವರ ನೇತೃತ್ವ, ಸಹಕಾರ ಮತ್ತು ಪ್ರೋತ್ಸಾಹದಲ್ಲಿ ಈ ಸಾಧನೆ ನೆರವೇರಿದೆ. ಕೇಂದ್ರ ಅಸ್ಥಿ ಚಿಕಿತ್ಸಾ ಸಂಸ್ಥೆಯ ನಿರ್ದೇಶಕ ಪ್ರೊ. ಡಾ. ಸುಮಿತ್ ಸುರಾಲ್ ಅವರ ವೈದ್ಯಕೀಯ ಮಾರ್ಗದರ್ಶನದಲ್ಲಿ ಶಸ್ತ್ರಚಿಕಿತ್ಸೆ ನಡೆಯಿತು. ಸಲಹೆಗಾರ ಪ್ರೊಫೆಸರ್ ಹಾಗೂ ಘಟಕ ಮುಖ್ಯಸ್ಥ ಡಾ. ಭಗವತಿ ಪ್ರಸಾದ್ ಶರ್ಮಾ ಶಸ್ತ್ರಚಿಕಿತ್ಸಾ ತಂಡವನ್ನು ಮುನ್ನಡೆಸಿದರು. ಡಾ. ಧ್ರುವೆ ಮೈನಿ ಮತ್ತು ಡಾ. ಕಾರ್ತಿಕ್ ಯಾದವ್ ಸಹಕರಿಸಿದರು. ಅರಿವಳಿಕೆ ತಂಡಕ್ಕೆ ಡಾ. ಸುಶೀಲ್ ಗುರಿಯಾ ನೇತೃತ್ವ ವಹಿಸಿದ್ದರು.

--------

ಹಿಂದೂಸ್ತಾನ್ ಸಮಾಚಾರ್ / Rakesh.M.B.


 rajesh pande